Sirsi|ಹತ್ಯೆ ಪ್ರಕರಣ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ ಏಳು ಜನ ಆರೋಪಿಗಳ ಜಾಮೀನು ನಿರಾಕರಣೆ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapur) ತಾಲೂಕಿನ ಅವರಗುಪ್ಪ ದಲ್ಲಿ ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಜ್ಯೋತಿಷಿ ಕಮಲಾಕರ್ ಭಟ್ ಸೇರಿ ಏಳು ಜನ ಆರೋಪಿಗಳಿಗೆ ಶಿರಸಿಯ(sirsi) ಜಿಲ್ಲಾ ಪ್ರಧಾನ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಇದನ್ನೂ ಓದಿ:-Jothishi Murder case|ಕಮಲಾಕರ್ ಭಟ್ ಸೇರಿ ಐವರಿಗೆ ಫೆ.21 ರ ವರೆಗೆ ನ್ಯಾಯಾಂಗ ಬಂಧನ
2006 ರ ಪೆಬ್ರವರಿ ತಿಂಗಳಲ್ಲಿ ಸಿದ್ದಾಪುರದ ಅವರಗುಪ್ಪ ದಲ್ಲಿ ವಸಂತ್ ನಾಯ್ಕ ಹತ್ಯೆ ನಡೆದಿತ್ತು .ಈ ಪ್ರಕರಣ ಸಂಬಂಧ ಕಮಲಾಕರ್ ಭಟ್ ,ಸುಚಿತ್ರ ಸೇರಿ ಒಟ್ಟು ಒಂಬತ್ತು ಜನ ಆರೋಪಿಗಳಾಗಿದ್ದು ,ಎಂಟು ಜನರನ್ನ ಬಂಧಿಸಲಾಗಿತ್ತು.

ಇದರಲ್ಲಿ ಓರ್ವ ನಾಪತ್ತೆಯಾಗಿದ್ದರೇ ,ಮತ್ತೋರ್ವನಿಗೆ ಬೇಲ್ ದೊರೆತಿತ್ತು.ಇನ್ನು ಉಳಿದ ಏಳು ಜನರು ಕಳೆದ ಆರು ತಿಂಗಳಿಂದ ಕಾರವಾರದ ಜೈಲಿನಲ್ಲಿದ್ದು ಶಿರಸಿಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ಇಂದು ವಿಚಾರಣೆ ನಡೆದಿತ್ತು. ಆದರೇ ನ್ಯಾಯಾಲಯವು ಜ್ಯೋತಿಷಿ ಕಮಲಾಕರ ಭಟ್ ,ಸುಚಿತ್ರ,ಲೋಕನಾಥ್ ,ಮಹ್ಮದ್ ಮೆಹಫೂಪ್, ಮಹ್ಮದ್ ಫೈಸಲ್ ,ಇರ್ಫಾನ್,ಆಕಾಶ್ ಗೆ ಜಾಮೀನು ನಿರಾಕರಣೆ ಮಾಡಲಾಗಿದೆ.
ಕಮಲಾಕರ್ ಭಟ್ ವಿರುದ್ಧ ಅತ್ಯೆ ಸಂಬಂಧ ಶಿರಸಿ ನ್ಯಾಯಾಲಯ ಹಾಗೂ ಲೈಂಕಿಕ ಕಿರುಕುಳ ಆರೋಪದ ಸಂಬಂಧ ಕಾರವಾರದಲ್ಲಿ ಪ್ರಕರಣ ಇದ್ದು ಎರಡು ಪ್ರಕರಣ ಸಂಬಂಧ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ,ಹತ್ಯೆ ಸಂಬಂಧ ಸಲ್ಲಿಕೆಯಾದ ಅರ್ಜಿ ತಿರಸ್ಕೃತಗೊಂಡಿದೆ.
