Uttara kannada| ಲೋಕಲ್ ನ್ಯೂಸ್ -ಇಂದು ಎಲ್ಲಿ ಏನಾಯ್ತು? ವಿವರ ಇಲ್ಲಿದೆ.
ಕಾರವಾರ ದಲ್ಲಿ ಕಾವೇರಿದ ಕಾವೇರಿ ಕಿಚ್ಚು-ಕಾಲಿಕೊಡ ಹಿಡಿದು ,ಕಪ್ಪು ಪಟ್ಟಿ ಧರಿಸಿ ಕರವೇ ಪ್ರತಿಭಟನೆ

ಕಾರವಾರ :-ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (Karwar)ಕನ್ನಡ ಪರ ಹೋರಾಟಗಾರರು ಕಾಲಿ ಕೊಡ ಹಿಡಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕಾಲಿ ಕೊಡ ಹಿಡಿದ ಪ್ರವೀಣ್ ಶಟ್ಟಿ ಬಣ ಹಾಗೂ ಕನ್ನಡ ಪರ ಹೋರಾಟಗಾರು ತಮಿಳುನಾಡು ವಿರುದ್ಧ ಘೋಷಣೆ ಕೂಗಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿದರು.
ಮಳೆ ಬಾರದೇ ನಮಗೆ ಕುಡಿಯಲು ನೀರಿಲ್ಲ,ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ , ಕೋರ್ಟ ಸೂಚನೆಯಂತೆ ಕಾವೇರಿ ನೀರು ತಮಿಳುನಾಡಿಗೆ ಬಿಟ್ಟರೆ ಉಗ್ರ ಹೋರಾಟಮಾಡುವ ಎಚ್ಚರಿಕೆ ಯನ್ನು ಕನ್ನಡಪರ ಹೋರಾಟಗಾರರ ಪರವಾಗಿ ಕರವೇ ಜಿಲ್ಲಾಧ್ಯಕ್ಷ ಅಕ್ಷಯ್ ನೀಡಿದರು.
ಕೈಕೊಟ್ಟ ಪ್ರೀತಿ – ನೊಂದ ಯುವಕ ಆತ್ಮಹತ್ಯೆ

ಕಾರವಾರ :-ಪ್ರೀತಿಸಿದ ಹುಡುಗಿ ಕೈಕೊಟ್ಟ ಹಿನ್ನಲೆಯಲ್ಲಿ ಮನಸ್ಸಿನ ನೋವು ತಾಳಲಾರದೇ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಭಾಗದ ರಾಮನಗರದ ಬಳಿ ನಡೆದಿದೆ.
ಇದನ್ನೂ ಓದಿ:-Honnavar| ಶರಾವತಿ ಕಣಿವೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ವಾಹಕ-1200 ಅಡಿ ಆಳಕ್ಕೆ ಇಳಿದು ವಾಹಕ ಮೇಲೆತ್ತಿದ ಸಿಬ್ಬಂದಿ.
ವೃತ್ತಿಯಲ್ಲಿ ಚಾಲಕನಾಗಿದ್ದ ಹರೀಶ ಮೇಸ್ತಾ (24) ಆತ್ಮಹತ್ಯೆಗೆ ಶರಣಾದ ಯುವಕ.
ತಾನು ಗಾಢವಾಗಿ ಪ್ರೀತಿಸುತ್ತಿದ್ದ ಯುವತಿಯನ್ನೇ ಮದುವೆಯಾಗಬೇಕೆಂಬ ಕನಸು ಕಂಡಿದ್ದ ಹರೀಶನಿಗೆ, ಇತ್ತೀಚೆಗೆ ಆಕೆ ದೂರವಾಗಿದ್ದು ತೀವ್ರ ನೋವು ತಂದೊಡ್ಡಿತ್ತು. ಪ್ರೇಮ ವೈಫಲ್ಯದಿಂದ ತೀವ್ರ ಮನನೊಂದಿದ್ದ ಈತ, ಕೊನೆಗೆ ಮನಸ್ಸಿನ ನೋವು ತಾಳಲಾರದೆ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಿಷಯ ತಿಳಿದ ಹೊನ್ನಾವರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿನ ನಿಖರ ಕಾರಣ ಹಾಗೂ ಘಟನೆಯ ಹಿನ್ನೆಲೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:-Karwar| ಗೋವಾದಲ್ಲಿ 48 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಿದ ಕಾರವಾರ ಪೊಲೀಸರು.
