Karwar| ಗೋವಾದಲ್ಲಿ 48 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಿದ ಕಾರವಾರ ಪೊಲೀಸರು.
ಕಾರವಾರ:- ಗೋವಾ (goa)ಮೂಲಕ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತಂದಿದ್ದ ಗಾಂಜಾ ವನ್ನು ಕಾರವಾರ (karwar)ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ 465 ಗ್ರಾಮ್ ತೂಕದ 25 ಸಾವಿರ ಮೌಲ್ಯದ ಗಾಂಜಾ ,ಒಂದು ಬೈಕ್ , ಎರಡು ಮೊಬೈಲ್ ವಶಕ್ಕೆ ಪಡೆದಿದ್ದು ಆರೋಪಿತರಾದ ಕಾರವಾರ ತಾಲೂಕಿನ ಸದಾಶಿವ ಗಡದ ತಾರೀವಾಡದ ನಾಗರಾಜ್ (26), ವಿನೋದ್ ಎಂಬುವವರನ್ನು ಸೋಮವಾರ ಬಂಧಿಸಿದ್ದರು .

ಇದರ ಬೆನ್ನಲ್ಲೇ ಕಾರವಾರಕ್ಕೆ ಸರಬರಾಜಾಗುತಿದ್ದ ಗಾಂಜಾ ಮಾರಾಟ ಜಾಲದ ಮೂಲಕ್ಕೆ ಕೈ ಹಾಕಿದ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಗೋವಾದ ಕಾಣಕೋಣಮ್ ನ ಕೊಳಮ್ ಪ್ರದೇಶದಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದ್ದು ಈ ವೇಳೆ ಮಾರಾಟ ಮಾಡಲು ಸಿದ್ದಪಡಿಸಿದ್ದ 48 ಸಾವಿರ ಮೌಲ್ಯದ 846 ಗ್ರಾಮ್ ಗಾಂಜಾ , ಹತ್ತುಸಾವಿರದ ಎಂಟನೂರು ನಗದು ,ಡಿಜಿಟಲ್ ವೇಯಿಂಗ್ ಮಿಷನ್ ಸೇರಿ ಕೆಲವು ವಸ್ತುಗಳನ್ನು ವಶಕ್ಕೆ ಪಡೆದು ಮಾರಾಟ ಮಾಡುತಿದ್ದ ಮೂರು ಜನ ಮಹಿಳೆಯರಿಗೆ ನೋಟಿಸ್ ನೀಡಿದ್ದಾರೆ.

ಈ ಪ್ರಕರಣವನ್ನು ಪೊಲೀಸ್ ಅಧೀಕ್ಷಕರಾದ ಶ ದೀಪನ ಎಂ.ಎನ್. ಐಪಿಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ. ಮತ್ತು ಪೊಲೀಸ್ ಉಪಾಧೀಕ್ಷಕರು ಕಾರವಾರ ಉಪ-ವಿಭಾಗ ರವರಾದ ಗಿರೀಶ ಎಸ್.ವಿ. ಹಾಗೂ ಕಾರವಾರ ಗ್ರಾಮೀಣ ಪೊಲೀಸ ಠಾಣೆಯ ಪೊಲೀಸ್ ನಿರೀಕ್ಷಕರಾದ ಯು.ಹೆಚ್. ಸಾತೇನಹಳ್ಳಿ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪ-ನಿರೀಕ್ಷಕರಾದ ನೇಹಾಲ್ ಖಾನ್ (ಕಾ&ಸು), ಪೋಲೀಸ್ ಉಪ-ನಿರೀಕ್ಷಕರಾದ ಪ್ರಮೀಲಾ ವೈ. ನಾಯ್ಕ (ತನಿಖೆ), ಮತ್ತು ಠಾಣೆಯ ಸಿಬ್ಬಂದಿ ಸದರಿ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ್ದು ,ಉತ್ತಮ ಕಾರ್ಯವನ್ನು ನಿರ್ವಹಿಸಿದ್ದು, ಪೊಲೀಸ್ ಅಧೀಕ್ಷಕರು ಉ.ಕ ರವರು ತಂಡದ ಕಾರ್ಯ ವೈಖರಿಯನ್ನು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.ಇದನ್ನೂ ಓದಿ:-Karwar- ಗಾಂಜಾ ಮಾರಾಟ ಯತ್ನ -ಸದಾಶಿವ ಘಡದ ಇಬ್ಬರ ಬಂಧನ
