Bhatkal| ಸಂಚಾರ ನಿಯಮ ಮೀರಿದ ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿದ ಭಟ್ಕಳ ಪೊಲೀಸರು

Bhatkal| ಸಂಚಾರ ನಿಯಮ ಮೀರಿದ ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿದ ಭಟ್ಕಳ ಪೊಲೀಸರು
ಭಟ್ಕಳ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಶಾಲಾ ವಾಹನಗಳನ್ನು ತಡೆದು ದಾಖಲೆ ಹಾಗೂ ಇನ್ಸುರೆನ್ಸ್ ಪರಿಶೀಲನೆ ನಡೆಸುತ್ತಿರುವ ಭಟ್ಕಳ ಪೊಲೀಸರು ಭಟ್ಕಳ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಶಾಲಾ ವಾಹನಗಳನ್ನು ತಡೆದು ದಾಖಲೆ ಹಾಗೂ ಇನ್ಸುರೆನ್ಸ್ ಪರಿಶೀಲನೆ ನಡೆಸುತ್ತಿರುವ ಭಟ್ಕಳ ಪೊಲೀಸರು
ಭಟ್ಕಳ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಶಾಲಾ ವಾಹನಕ್ಕೆ ದಂಡ

Bhatkal| ಸಂಚಾರ ನಿಯಮ ಮೀರಿದ ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿದ ಭಟ್ಕಳ ಪೊಲೀಸರು

 

ಕಾರವಾರ/ಭಟ್ಕಳ :- ಶಾಲಾ ವಾಹನಗಳ ಬೇಕಾಬಿಟ್ಟಿ ಸಂಚಾರ, ವಾಹನ ನಿಯಮ ಉಲ್ಲಂಘನೆ ಸರ್ವೇ ಸಾಮಾನ್ಯವಾಗಿದ್ದು ,ಜಿಲ್ಲೆಯಲ್ಲಿ ಮೊದಲಬಾರಿಗೆ ಭಟ್ಕಳ ಶಹರ ಠಾಣಾ ವ್ಯಾಪ್ತಿಯಲ್ಲಿ ಇಂತಹ ಶಾಲಾ ವಾಹನಗಳನ್ನು ತಡೆದು ದಂಡ ವಿಧಿಸಲಾಗಿದೆ.

Advertisement

ಇನ್ಸುರೆನ್ಸ್ ,ದಾಖಲೆಗಳಿಲ್ಲದ ಶಾಲಾ ವಾಹನ ಕ್ಕೆ ದಂಡ !

ಭಟ್ಕಳ (bhatkal)ನಗರ ಠಾಣೆ ವ್ಯಾಪ್ತಿಯಲ್ಲಿ ಪಿ.ಎಸ್.ಐ ನವೀನ್ ನವರ ನೇತ್ರತ್ವದಲ್ಲಿ ಇಂದು ಸ್ಪೆಷಲ್ ಡ್ರೈವ್ ಮಾಡಲಾಗಿದ್ದು , ನಗರ ವ್ಯಾಪ್ತಿಯ ಶಾಲಾ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ವಾಹನದಲ್ಲಿ ಇನ್ಸುರೆನ್ಸ್, ಸಮರ್ಪಕ ದಾಖಲೆ ಇಲ್ಲದ ಒಟ್ಟು ಐದು ವಾಹನಗಳಿಗೆ ದಂಡ ವಿಧಿಸಲಾಯಿತು.

ಹುಬ್ಬೇರಿಸುವ ಅಪಘಾತ-ಅಪ್ರಾಪ್ತ ಶಾಲಾ ಮಕ್ಕಳು ಓಡಿಸ್ತಾರೆ ವಾಹನ!

ಜಿಲ್ಲೆಯಲ್ಲಿ 2025 ರಲ್ಲಿ 220 ಜನ ರಸ್ತೆ ಅಪಘಾತದಲ್ಲಿ ಸಾವು ಕಂಡರೇ 1757 ಜನರಿಗೆ ಗಾಯವಾಗಿತ್ತು. ಈವರ್ಷ ಅಂತ್ಯ ಆಗುವುದರೊಳಗೆ 129 ಜನರ ಸಾವಾಗಿದ್ದು, 904 ಗಂಭೀರ ಗಾಯಗೊಂಡಿದ್ದಾರೆ.ಇನ್ನು ತಮ್ಮ ತಪ್ಪುಗಳಿಂದ ಅಪಘಾತ ಪಡಿಸಿ 50 ಜನ ಮೃತಪಟ್ಟಿದ್ದು 251 ಜನ ಗಾಯಗೊಂಡಿದ್ದಾರೆ.

ಇದನ್ನೂ ಓದಿ:-Bhatkal| ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರುಪಾಯಿ ವಂಚನೆ

ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಸರಾಸರಿಯಲ್ಲಿ  ಹೆಚ್ಚಿನ ಅಪಘಾತಗಳು ಸಂಭವಿಸಿತ್ತಿದೆ. ಹೀಗಾಗಿ ಶಿರಸಿ ಯಲ್ಲಿ ಟ್ರಾಫಿಕ್ ಠಾಣೆ ಯನ್ನು ಹೊಸದಾಗಿ ಮಾಡಲಾಗಿದ್ದು ಜಿಲ್ಲೆಯಾಧ್ಯಾಂತ ಸಂಚಾರ ನಿಯಮ ಮೀರುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ.ಆದರೇ ಸಂಚಾರಿ ನಿಯಮ ಮೀರುವ ಜೊತೆಗೆ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿ ಅಪಘಾತವಾದ ಪ್ರಕರಣಗಳು ಹೆಚ್ಚಿನವು ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ 101 ಅಪ್ರಾಪ್ತ ಮಕ್ಕಳು ವಾಹನ ಓಡಿಸಿದ ಪ್ರಕರಣ ದಾಖಲಾಗಿದ್ದು ಫೋಷಕರಿಗೆ 25 ಸಾವಿರ ದಂಡದ ಜೊತೆಗೆ ಜೈಲಿಗೂ ಸಹ ಪೋಷಕರನ್ನು ಕಳುಹಿಸಲಾಗಿದೆ. ಇನ್ನು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 707 ಪ್ರಕರಣ, ಅತೀ ವೇಗದಿಂದ ಚಾಲನೆ ಮಾಡಿದ 524 ಪ್ರಕರಣ,ಹೆಲ್ಮೆಟ್ ರಹಿತ ಚಾಲನೆ ಮಾಡಿದ 16183 ಪ್ರಕರಣ ,ಸೀಟ್ ಬೆಲ್ಟ್ ಹಾಕದೇ ಕಾರು ಚಲಾಯಿಸಿದ 3747 ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಪ್ರತಿ ತಾಲೂಕುವಾರು  ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಎಸ್.ಪಿ ದೀಪನ್ ರವರು ಮಾಹಿತಿ ನೀಡಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement