ನ್ಯಾಷನಲ್ ನ್ಯೂಸ್| ದೇಶದ ಪ್ರಮುಖ ವಿದ್ಯಮಾನಗಳ ಪಕ್ಷಿನೋಟ

ನ್ಯಾಷನಲ್ ನ್ಯೂಸ್| ದೇಶದ ಪ್ರಮುಖ ವಿದ್ಯಮಾನಗಳ ಪಕ್ಷಿನೋಟ-ರಾಜ್ಯ,ದೇಶದ ಪ್ರಮುಖ ವಿದ್ಯಮಾನಗಳ ಬಗ್ಗೆ ಚಿಕ್ಕ ಮಾಹಿತಿ
National News Kannada Today National News Kannada Today
National News Kannada Today

ನ್ಯಾಷನಲ್ ನ್ಯೂಸ್| ದೇಶದ ಪ್ರಮುಖ ವಿದ್ಯಮಾನಗಳ ಪಕ್ಷಿನೋಟ.

 

ಹೆಣ್ಣುಮಕ್ಕಳು ಶಾಲೆಡ್ರಾಪ್ ಔಟ್ ಪ್ರಕರಣ -ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೇರಿದ ಕರ್ನಾಟಕ

School drop out detailsಶಾಲೆ ತೊರೆದ ಹೆಣ್ಣುಮಕ್ಕಳ ಸಂಖ್ಯೆ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನ
Ai image

ದೇಶದ ಇತರ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರೌಢಶಾಲೆ ಅಂದರೆ 9 ಮತ್ತು 10ನೇ ತರಗತಿ ಹಂತದಲ್ಲಿ ಶಾಲೆ ತೊರೆಯುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಕೇಂದ್ರ ಸರ್ಕಾರದ ಇತ್ತೀಚಿನ ವರದಿಯಿಂದ ತಿಳಿದುಬಂದಿದೆ. ಲೋಕಸಭೆಯಲ್ಲಿ ಮಂಡಿಸಲಾದ ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ ಪ್ಲಸ್ (UDISE+)ನ ಹೊಸ ದತ್ತಾಂಶವು ಈ ಆತಂಕಕಾರಿ ವಿಷಯವನ್ನ ಬಹಿರಂಗಪಡಿಸಿದೆ.

ಲೋಕಸಭೆಯಲ್ಲಿ ಸಲ್ಲಿಕೆಯಾಗಿರುವ 2025-26ರ ಶೈಕ್ಷಣಿಕ ಸಾಲಿನ ಯುಡಿಐಎಸ್‌ಇ+ ದತ್ತಾಂಶದ ಪ್ರಕಾರ, ಕರ್ನಾಟಕದಲ್ಲಿ ಪ್ರೌಢಶಾಲೆ ಹಂತದಲ್ಲಿ ಶೇ. 13.9ರಷ್ಟು ಹೆಣ್ಣು ಮಕ್ಕಳು ಅರ್ಧಕ್ಕೇ ಶಿಕ್ಷಣವನ್ನು ಮೊಟಕುಗೊಳಿಸಿ ಶಾಲೆಯಿಂದ ಹೊರಗುಳಿದಿದ್ದಾರೆ. ದೇಶದ ಸರಾಸರಿ ಶಾಲಾ ಡ್ರಾಪ್‌ಔಟ್ ಪ್ರಮಾಣ ಶೇ. 8ರಷ್ಟಿದ್ದರೆ, ಕರ್ನಾಟಕದ ಅಂಕಿ-ಅಂಶವು ರಾಷ್ಟ್ರೀಯ ಸರಾಸರಿಗಿಂತ ಬಹುತೇಕ ಹೆಚ್ಚಿದೆ.

Advertisement

ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸುವುದಾದರೆ, 2023-24ರಲ್ಲಿ ಶೇ. 19.6ರಷ್ಟಿದ್ದ ಹೆಣ್ಣು ಮಕ್ಕಳ ಡ್ರಾಪ್‌ಔಟ್ ಪ್ರಮಾಣವು 2024-25ರಲ್ಲಿ ಶೇ. 14.6ಕ್ಕೆ ಹಾಗೂ 2025-26ರಲ್ಲಿ ಶೇ. 13.9ಕ್ಕೆ ಕುಸಿದಿದೆ. ಅಂದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ರಾಷ್ಟ್ರಮಟ್ಟದ ಪ್ರಗತಿಯ ವೇಗಕ್ಕೆ ಹೋಲಿಸಿದರೆ ಕರ್ನಾಟಕದ ಸುಧಾರಣೆಯ ವೇಗ ಅತ್ಯಂತ ಮಂದಗತಿಯಲ್ಲಿದೆ ಎನ್ನಬಹುದು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಶೇ. 15.6ರಷ್ಟು ಡ್ರಾಪ್‌ಔಟ್‌ ದರದೊಂದಿಗೆ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ಶಾಕಿಂಗ್ ವರದಿ ರಾಜ್ಯದಲ್ಲಿ ವಿದ್ಯಾರ್ಥಿಗಳಲ್ಲಿ HIV ಪಾಸಿಟಿವ್!

HIV positive case at Karnataka
ಚಿತ್ರ ಕೃಪೆ ಗೂಗಲ್

ಕರ್ನಾಟಕದಲ್ಲಿ ಯುವಜನರಲ್ಲಿ HIV ಪ್ರಕರಣಗಳ ಹೆಚ್ಚಳವು ಕಳವಳಕಾರಿಯಾಗಿದೆ. ರಾಜ್ಯಾದ್ಯಂತ ಸುಮಾರು 7,000 ವಿದ್ಯಾರ್ಥಿಗಳು ವೈರಸ್ ಸೋಂಕಿಗೆ ಒಳಗಾಗಿರುವುದು ಕಂಡುಬಂದ ನಂತರ ಸರ್ಕಾರ ಕ್ರಮ ಕೈಗೊಂಡಿದೆ. ಈ ಪ್ರವೃತ್ತಿಯನ್ನು ತಡೆಯಲು, ರಾಜ್ಯಾದ್ಯಂತ ಎಲ್ಲಾ ಕಾಲೇಜುಗಳಲ್ಲಿ HIV ಪರೀಕ್ಷಾ ಶಿಬಿರಗಳನ್ನು ಆಯೋಜಿಸಲು ಆದೇಶಿಸಿದೆ. ಪದವಿ & ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತಪಾಸಣಾ ಶಿಬಿರಗಳು & ಜಾಗೃತಿ ವಿಚಾರ ಸಂಕಿರಣಗಳನ್ನು ನಡೆಸಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ದೇಶಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ದೆಹಲಿ ಅಂಗಳದಲ್ಲಿ ಫೈನಲ್ !

ದೆಹಲಿಯಲ್ಲಿ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಿತ್ರ
ದೆಹಲಿಯಲ್ಲಿ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಿತ್ರ

CM DK ಶಿವಕುಮಾರ್, ಮಾಜಿ CM ಸಿದ್ದರಾಮಯ್ಯ & KPCC ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ದೆಹಲಿಯಲ್ಲಿ ನಿನ್ನ (ಮಂಗಳವಾರ) ರಾತ್ರಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ & ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಜೊತೆಗೆ ಪ್ರಮುಖ ಸುತ್ತಿನ ಚರ್ಚೆ ನಡೆಸಿದ್ದಾರೆ. ನಾಯಕರು ಸಂಭಾವ್ಯ ಸಚಿವರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ. ಇದನ್ನು ಇಂದು ಅನುಮೋದನೆಗಾಗಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆ & ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಲಾಗಿದ್ದು ಅಂತಿಮ ಚರ್ಚೆ ನಡೆಯುತ್ತಿದೆ.

ದೆಹಲಿಗೆ ಹಾರಿದ ಮಾಜಿ ಸಚಿವ ಜಮೀರ್.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಬುಲಾವ್‌ ನೀಡಿರುವ ಕಾರಣ ಮಾಜಿ ಸಚಿವ ಜಮೀ‌ರ್ ಅಹ್ಮದ್ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಿಂದ-ದೆಹಲಿಗೆ ತೆರಳಿದ್ದಾರೆ. ಅವರು ಸಚಿವ ಸ್ಥಾನದ ಕುರಿತು ಹೈಕಮಾಂಡ್ ನಾಯಕರ ಜೊತೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಇನ್ನು, ಸಚಿವ ಸಂಪುಟ ವಿಸ್ತರಣೆ ಕ್ರೈಮ್ಯಾಕ್ಸ್ ಹಂತ ತಲುಪುತ್ತಿದ್ದಂತೆ ಕಾಂಗ್ರೆಸ್‌ ಹೈಕಮಾಂಡ್‌ ಮಾಜಿ ಸಚಿವ ಜಮೀರ್‌ಗೆ ಬುಲಾವ್ ನೀಡಿದೆ.

ಮಲ್ಲಿಕಾರ್ಜುನ ಖರ್ಗೆಗೆ ಜಾಮೀನು ರಹಿತ ವಾರೆಂಟ್!

ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ್ ಖರ್ಗೆ -ಚಿತ್ರ ಕೃಪೆ ಗೂಗಲ್

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಜಾಮೀನು ಸಹಿತ ವಾರಂಟ್ ಜಾರಿಯಾಗಿದೆ. 2023ರ ಕರ್ನಾಟಕ ಚುನಾವಣೆ ವೇಳೆ ಬಜರಂಗದಳವನ್ನು PFIಗೆ ಹೋಲಿಸಿ, ನಿಷೇಧಿಸುವುದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ, ಅವರ ವಿರುದ್ಧ ಇದೀಗ ಪಂಜಾಬ್‌ನ ಸಂಗ್ರೂರ್ ಕೋರ್ಟ್ ಜಾಮೀನು ಸಹಿತ ವಾರಂಟ್ ಜಾರಿ ಮಾಡಿ, ಸೆ. 19ಕ್ಕೆ ವಿಚಾರಣೆಗೆ ಹಾಜರಾಗುವಂತೆ & ಜಾಮೀನು ಪಡೆದುಕೊಳ್ಳುವಂತೆ ಸೂಚಿಸಿದೆ. ಹಾಜರಾಗದಿದ್ದರೆ, ಜಾಮೀನು ರಹಿತ ವಾರಂಟ್ ಜಾರಿಗೊಳಿಸುವುದಾಗಿ ಕೋರ್ಟ್ ತಿಳಿಸಿದೆ.

BREAKING: ಮೋದಿ ಸರ್ಕಾರದ ವಿರುದ್ಧ ಸ್ಫೋಟಕ ಆರೋಪ ಮಾಡಿದ ರಾಹುಲ್

Rahul Gandhi image
Rahul Gandhi image

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು RSS ದೇಶದ ಶಿಕ್ಷಣ ವ್ಯವಸ್ಥೆಯನ್ನು ನಡೆಸುತ್ತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು. ಧರ್ಮೇಂದ್ರ ಪ್ರಧಾನ್ ಅವರನ್ನು ಕೇವಲ ಕೈಗೊಂಬೆ ಎಂದು ಬಣ್ಣಿಸಿದ ಅವರು, RSS ಅವರನ್ನು ನಿರ್ದೇಶಿಸುವ ಶಕ್ತಿ ಎಂದು ಪ್ರತಿಪಾದಿಸಿದರು. ಪ್ರತಿಯೊಂದು ವಿಶ್ವವಿದ್ಯಾಲಯದ ಉಪಕುಲಪತಿಗಳು ಆ ಸಂಸ್ಥೆಯೊಂದಿಗೆ ಸಂಯೋಜಿತರಾಗಿರುವ ವ್ಯಕ್ತಿ ಎಂದು ಅವರು ಆರೋಪಿಸಿದರು. ಈ ಸರ್ಕಾರವು ವಿದ್ಯಾರ್ಥಿಗಳ ಪ್ರಾಥಮಿಕ ಶತ್ರು ಎಂದು ಹೇಳುವ ಹಾಗಾ ಕೇಂದ್ರವನ್ನು ಟೀಕಿಸಿದರು.

ಇದನ್ನೂ ಓದಿ:-India|ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್‌ ಜೋಶಿ ನೇಮಕ

ಲೋಕಸಭೆಯಲ್ಲಿ ಇಂದು ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ದೇಶದ ಯುವಶಕ್ತಿ ಆಕ್ರೋಶಗೊಂಡಿದ್ದು ತೀರ ಸಮರ್ಥನೀಯವಾಗಿದೆ.

ಇದನ್ನೂ ಓದಿ:-Miss India ಆಗಲು ಯಾವ ಯಾವ ಪರೀಕ್ಷೆಗಳು ಇರುತ್ತವೆ? ಸಾಧ್ವಿ ಸೈಲ್ ಪಟ್ಟ ಶ್ರಮ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಯುವಕರು ದೇಶದ ಭವಿಷ್ಯವನ್ನು ರೂಪಿಸುವವರಾಗಿದ್ದು, ಪ್ರತಿಯೊಬ್ಬರೂ ಅವರನ್ನು ಗೌರವಿಸಬೇಕಿದೆ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವ ವೇಳೆ ಯಾವುದೇ ದ್ವೇಷ ಅಥವಾ ಕೋಪವನ್ನು ಹೊಂದಿರಲಿಲ್ಲ. ಪ್ರಸ್ತುತ ಜಗತ್ತು ಹೇಗೆ ಬದಲಾಗುತ್ತಿದೆ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಅರಿಯುತ್ತಿದ್ದಾರೆ ಎಂದು ಹೇಳಿದರು.

ಮಾತನ್ನು ಮುಂದುವರಿಸಿದ ರಾಹುಲ್ ಗಾಂಧಿ, “ವಿದ್ಯಾರ್ಥಿಗಳು ನನ್ನ ಬಳಿ ತಮ್ಮ ಅಳಲು ತೋಡಿಕೊಳ್ಳುತ್ತಾ ‘ಮೂರ್ಖರು ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ, ಅಂಧಭಕ್ತರು ಅವರನ್ನು ಅನುಸರಿಸುತ್ತಿದ್ದಾರೆ’ ಎಂದು ಹೇಳುತ್ತಿದ್ದರು” ಎಂದರು. ರಾಹುಲ್ ಗಾಂಧಿ ಅವರು ಭಾಷಣದಲ್ಲಿ ‘ಮೂರ್ಖರು’ ಎಂಬ ಪದವನ್ನು ಬಳಸುತ್ತಿದ್ದಂತೆ ಆಡಳಿತಾರೂಢ ಆಡಳಿತ ಪಕ್ಷದ ಸದಸ್ಯರು ಹಾಗೂ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಿಡಿಕಾರಿದರು. ಈ ವೇಳೆ ಎದ್ದುನಿಂತ ಕೇಂದ್ರ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಅಸಂಸದೀಯ/ಅಸಂವಿಧಾನಿಕ ಪದ ಬಳಕೆಯ ಮೂಲಕ ಸಭೆಯ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಸದನದಲ್ಲಿ ಗದ್ದಲ ಉಂಟಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ರಾಹುಲ್ ಗಾಂಧಿ, “ನಾನು ಯಾರನ್ನೂ ನೇರವಾಗಿ ಮೂರ್ಖರು ಎಂದು ಕರೆದಿಲ್ಲ. ಇಲ್ಲಿರುವ ಯಾವುದೇ ಸದಸ್ಯರಿಗೂ ಆ ರೀತಿ ಸಂಬೋಧಿಸಿಲ್ಲ, ವಿದ್ಯಾರ್ಥಿಗಳು ಹೇಳಿದ ಮಾತನ್ನು ಮಾತ್ರ ಉಲ್ಲೇಖಿಸಿದ್ದೇನೆ” ಎಂದು ಸಮರ್ಥಿಸಿಕೊಂಡರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಮಧ್ಯಪ್ರವೇಶಿಸಿದ ಸಭಾಪತಿ (ಸ್ಪೀಕರ್), ಸಂಸತ್ತಿನ ಗೌರವವನ್ನು ಕಾಯ್ದುಕೊಳ್ಳಲು ಇಂತಹ ಅಸಂಸದೀಯ ಹಾಗೂ ಅಸಂವಿಧಾನಿಕ ಪದಗಳನ್ನು ಬಳಸದಂತೆ ರಾಹುಲ್ ಗಾಂಧಿಯವರಿಗೆ ಸೂಚನೆ ನೀಡಿದರು.

ತಲೆ ಬೋಳಿಸಿಕೊಂಡ್ರೆ ಸರ್ಕಾರದಿಂದ 15 ಸಾವಿರ ಹಣ!

salem-head-shaving-scam-15000-government-fraud
ಸುದ್ದಿಗಾಗಿ ai ನಿರ್ಮಿತ ಚಿತ್ರ ಬಳಸಲಾಗಿದೆ

ಸರ್ಕಾರಿ ಅಧಿಕಾರಿ(Government official) ಎಂದು ನಂಬಿಸಿ, “ಹೊಸ ಸಾಂಕ್ರಾಮಿಕ ರೋಗದಿಂದ(Infectious disease) ಪಾರಾಗಲು ತಲೆ ಬೋಳಿಸಿಕೊಂಡರೆ ಸರ್ಕಾರದಿಂದ ಉಚಿತ ಹಣ ಸಿಗಲಿದೆ” ಎಂದು ಸುಳ್ಳು ಹೇಳಿ ಮಹಿಳೆಯರಿಗೆ ವಂಚಿಸಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ತಮಿಳುನಾಡಿನ(Tamil Nadu) ಸೇಲಂ(Salem) ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ:-ಶಿಕ್ಷಣ ಸುಧಾರಣೆಗೆ ಶಿರಸಿ ಮೂಲದ ನಿಲೇಕಣಿ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ರಚನೆ: ಮೋದಿ ಘೋಷಣೆ

ವಂಚಕನ ಮಾತು ನಂಬಿದ ಮೂವರು ಮಹಿಳೆಯರು ತಮ್ಮ ತಲೆ ಬೋಳಿಸಿಕೊಂಡು ಬಲಿಪಶುವಾಗಿದ್ದಾರೆ.

‘ಕೊರೊನಾ ಮಾದರಿಯ ಹೊಸ ರೋಗ’ದ ಭೀತಿ ಹುಟ್ಟಿಸಿದ ಖದೀಮ!
ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಮಹಿಳೆಯ ಹೆಸರು ಹಾಗೂ ಕುಟುಂಬಸ್ಥರ ವಿವರಗಳನ್ನು ಸರಿಯಾಗಿ ಹೇಳುವ ಮೂಲಕ ಆಕೆಯ ನಂಬಿಕೆ ಗಳಿಸಿದ್ದ.

ಬಳಿಕ, “ಕೊರೊನಾ ವೈರಸ್ ಮಾದರಿಯೇ ಮಾನವನ ತಲೆಕೂದಲಿನ ಮೂಲಕ ಹರಡುವ ಹೊಸ ಸಾಂಕ್ರಾಮಿಕ ರೋಗವೊಂದು ತೀವ್ರವಾಗಿ ಹರಡುತ್ತಿದೆ. ಇದರಿಂದ ಪಾರಾಗಲು ತಲೆ ಬೋಳಿಸಿಕೊಳ್ಳುವುದು ) ಕಡ್ಡಾಯ. ವಿದೇಶಗಳಲ್ಲೂ ಜನರು ಹೀಗೆಯೇ ತಲೆ ಬೋಳಿಸಿಕೊಂಡು ಸುರಕ್ಷಿತವಾಗಿದ್ದಾರೆ” ಎಂದು ಸುಳ್ಳು ಕಥೆ ಕಟ್ಟಿ ಭಯ ಹುಟ್ಟಿಸಿದ್ದ.

ಮಹಿಳೆಯರಿಗೆ – ₹15,000, ಶಾಲೆ/ಕಾಲೇಜು ವಿದ್ಯಾರ್ಥಿನಿಯರಿಗೆ: ₹45,000 ಮತ್ತು ಒಂದು ಉಚಿತ ಲ್ಯಾಪ್‌ಟಾಪ್, ಪುರುಷರಿಗೆ- ₹6,000 ನೀಡಲಾಗುವುದು ಎಂದು ಆಮಿಷ ಒಡ್ಡಿದ್ದ.

ಖದೀಮನ ಮಾತು ಸತ್ಯವೆಂದು ನಂಬಿದ ಗ್ರಾಮದ ಸುಮಾರು 20 ಜನರು ತಲೆ ಬೋಳಿಸಿಕೊಳ್ಳಲು ಸಿದ್ಧರಾಗಿದ್ದರು. ಅವರಲ್ಲಿ ಮೂವರು ಮಹಿಳೆಯರು ತಕ್ಷಣವೇ ತಲೆ ಬೋಳಿಸಿಕೊಂಡಿದ್ದಾರೆ.

ಮರುದಿನ ಹಣ ಪಡೆಯಲು ಆ ವ್ಯಕ್ತಿಗೆ ಕರೆ ಮಾಡಿದಾಗ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಆಗಷ್ಟೇ ತಮಗೆ ಮೋಸ ಹೋಗಿರುವುದು ಮಹಿಳೆಯರಿಗೆ ಅರಿವಾಗಿದೆ. ವಿಷಯ ತಿಳಿಯುತ್ತಿದ್ದಂತೆ ತಲೆ ಬೋಳಿಸಿಕೊಳ್ಳಲು ಸಾಲಿನಲ್ಲಿ ನಿಂತಿದ್ದ ಉಳಿದ ಗ್ರಾಮಸ್ಥರು ಆತಂಕದಿಂದ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement