Miss India ಆಗಲು ಯಾವ ಯಾವ ಪರೀಕ್ಷೆಗಳು ಇರುತ್ತವೆ? ಸಾಧ್ವಿ ಸೈಲ್ ಪಟ್ಟ ಶ್ರಮ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಕಾರವಾರ :- ಕಾರವಾರದ (karwar)ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಇದೀಗ ಮಿಸ್ ಇಂಡಿಯಾ ಆಗಿದ್ದಾರೆ. 61ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದು ಸಾಧನೆ ಮಾಡಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಪಡೆದಿರುವ ಇವರು, ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೋವಾವನ್ನು ಪ್ರತಿನಿಧಿಸಿದ್ದರು.ಏಪ್ರಿಲ್ 18ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ ಫಿನಾಲೆ ನಡೆದಿತ್ತು. ಇದೀಗ ಮಿಸ್ ಇಂಡಿಯಾ ಅದ ಅವರು ಫಿನಾಲೆಯಲ್ಲಿ ಒಟ್ಟು 29 ಮಂದಿ ಸ್ಪರ್ಧಿಗಳು ಅಂತಿಮ ಸುತ್ತಿನಲ್ಲಿದ್ದರು. ಆದರೆ ಅವರನ್ನೆಲ್ಲಾ ಹಿಂದಿಕ್ಕಿ ಸಾಧ್ವಿ ಸತೀಶ್ ಶೈಲ್ ಅವರು ಗೆದ್ದು ಕೀರಿಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹಾಗಿದ್ರೆ ಹೇಗಿತ್ತು ಇವರ ತಾಲೀಮು ,ಮಿಸ್ ಇಂಡಿಯಾ ಸ್ಪರ್ಧೆಗೆ ಹೇಗೆ ಅರ್ಹತೆ ಪಡೆಯುತ್ತಾರೆ? ಸೌಂದರ್ಯ ಮಾತ್ರ ಮುಖ್ಯವೋ ಅಥವಾ ಎಲ್ಲಾ ಗುಣಗಳ ಮೇಲೆ ಆಯ್ಕೆ ಮಾಡುತ್ತಾರೋ ಇಲ್ಲಿದೆ ಅದರ ಒಂದಿಷ್ಟು ಮಾಹಿತಿ.
ವಿಡಿಯೋ ನೋಡಿ:-
ಭಾರತದ ಪ್ರಸಿದ್ಧ ಸೌಂದರ್ಯ ಸ್ಪರ್ಧೆಯಾದ Femina Miss India ಗೆ ಆಯ್ಕೆ ಆಗುವುದು ಸುಲಭವಲ್ಲ. ಇಲ್ಲಿ ಕೇವಲ ಸೌಂದರ್ಯವಲ್ಲ, ಬುದ್ಧಿಮತ್ತೆ, ಆತ್ಮವಿಶ್ವಾಸ, ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವವನ್ನು ಸಮಗ್ರವಾಗಿ ಪರೀಕ್ಷಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಹಲವಾರು ಹಂತಗಳ ಪರೀಕ್ಷೆಗಳು ಇರುತ್ತವೆ.
ನೋಂದಣಿ ಮತ್ತು ಪ್ರಾಥಮಿಕ ಆಯ್ಕೆ.
ಸ್ಪರ್ಧೆಯ ಮೊದಲ ಹಂತದಲ್ಲಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಫೋಟೋಗಳು, ವಿಡಿಯೋಗಳು ಹಾಗೂ ಮೂಲಭೂತ ಮಾಹಿತಿಯ ಆಧಾರದಲ್ಲಿ ಮೊದಲ ಆಯ್ಕೆ ನಡೆಯುತ್ತದೆ.
ಈ ಹಂತದಲ್ಲಿ ವಯಸ್ಸು, ಎತ್ತರ ಮತ್ತು ಇತರೆ ಅರ್ಹತೆಗಳನ್ನು ಪರಿಶೀಲಿಸಲಾಗುತ್ತದೆ.
ಗ್ರೂಮಿಂಗ್ ಮತ್ತು ತರಬೇತಿ.
ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.
ಇದಲ್ಲೇ ರ್ಯಾಂಪ್ ವಾಕ್ (catwalk), ಸಂವಹನ ಕೌಶಲ್ಯ, ವ್ಯಕ್ತಿತ್ವ ಅಭಿವೃದ್ಧಿ ಮತ್ತು ಫಿಟ್ನೆಸ್ ತರಬೇತಿ ಒಳಗೊಂಡಿರುತ್ತದೆ.
ಈ ಹಂತವು ಸ್ಪರ್ಧಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಪ್ರಮುಖವಾಗಿದೆ.
ಟಾಲೆಂಟ್ ರೌಂಡ್.
ಈ ಹಂತದಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ.
ನೃತ್ಯ, ಹಾಡು, ಅಭಿನಯ ಅಥವಾ ಭಾಷಣದ ಮೂಲಕ ತಮ್ಮ ವಿಶಿಷ್ಟ ಕೌಶಲ್ಯವನ್ನು ತೋರಿಸಬಹುದು.
ಜಡ್ಜ್‌ಗಳು ಇಲ್ಲಿ ಕ್ರಿಯೇಟಿವಿಟಿ ಮತ್ತು ಪ್ರದರ್ಶನವನ್ನು ಮೌಲ್ಯಮಾಪನ ಮಾಡುತ್ತಾರೆ.
ಪ್ರಶ್ನೋತ್ತರ (Q&A) ರೌಂಡ್.
ಜಡ್ಜ್‌ಗಳು ಕೇಳುವ ಪ್ರಶ್ನೆಗಳಿಗೆ ಸ್ಪರ್ಧಿಗಳು ತಕ್ಷಣ ಉತ್ತರ ನೀಡಬೇಕು.
ಸಾಮಾಜಿಕ ವಿಷಯಗಳು, ಪ್ರಸ್ತುತ ಘಟನೆಗಳು ಮತ್ತು ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ಪ್ರಶ್ನೆಗಳು ಕೇಳಲಾಗುತ್ತವೆ.
ಈ ಹಂತದಲ್ಲಿ ಆತ್ಮವಿಶ್ವಾಸ, ಸ್ಪಷ್ಟತೆ ಮತ್ತು ಚಿಂತನೆ ಶಕ್ತಿ ಪರೀಕ್ಷಿಸಲಾಗುತ್ತದೆ.
ಫ್ಯಾಷನ್ ಮತ್ತು ರ್ಯಾಂಪ್ ವಾಕ್.

ಈ ಹಂತದಲ್ಲಿ traditional wear ಮತ್ತು western wear ನಲ್ಲಿ ರ್ಯಾಂಪ್ ವಾಕ್ ಮಾಡಲಾಗುತ್ತದೆ.
ನಡೆಯುವ ಶೈಲಿ, posture, expressions ಮತ್ತು presentation ಮೇಲೆ ಗಮನ ಹರಿಸಲಾಗುತ್ತದೆ.
ಇಂಟರ್ವ್ಯೂ ರೌಂಡ್.
ಜಡ್ಜ್‌ಗಳೊಂದಿಗೆ ಮುಖಾಮುಖಿ ಸಂದರ್ಶನ ನಡೆಯುತ್ತದೆ.
ಅಭ್ಯರ್ಥಿಗಳ ಹಿನ್ನೆಲೆ, ಗುರಿಗಳು ಮತ್ತು ಜೀವನದ ದೃಷ್ಟಿಕೋನದ ಬಗ್ಗೆ ಪ್ರಶ್ನೆಗಳು ಕೇಳಲಾಗುತ್ತವೆ.
ಇದು ವ್ಯಕ್ತಿತ್ವ ಮತ್ತು ಮನೋಭಾವವನ್ನು ಅಳೆಯುವ ಪ್ರಮುಖ ಹಂತ.
ಫೈನಲ್ ರೌಂಡ್.
ಅತ್ಯುತ್ತಮ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಅಂತಿಮ ಹಂತಕ್ಕೆ ಕರೆದೊಯ್ಯಲಾಗುತ್ತದೆ.
ಕೊನೆಯ ಪ್ರಶ್ನೋತ್ತರ ಹಾಗೂ ಒಟ್ಟು ಪ್ರದರ್ಶನದ ಆಧಾರದ ಮೇಲೆ ವಿಜೇತೆಯನ್ನು ಆಯ್ಕೆ ಮಾಡಲಾಗುತ್ತದೆ.
ಮಿಸ್ ಇಂಡಿಯಾ ಸ್ಪರ್ಧೆಯನ್ನು ಯಾರು ನಡೆಸುತ್ತಾರೆ?
ಭಾರತದ ಪ್ರಸಿದ್ಧ ಸೌಂದರ್ಯ ಸ್ಪರ್ಧೆಯಾದ Femina Miss India ಅನ್ನು ಪ್ರಮುಖವಾಗಿ Femina Miss India Organization ಆಯೋಜಿಸುತ್ತದೆ.
ಈ ಸಂಸ್ಥೆ ಭಾರತದ ಅತಿ ದೊಡ್ಡ ಮೀಡಿಯಾ ಕಂಪನಿಗಳಲ್ಲೊಂದಾದ Bennett, Coleman & Co. Ltd. (ಟೈಮ್ಸ್ ಗ್ರೂಪ್)ಗೆ ಸೇರಿದೆ. “Femina” ಮ್ಯಾಗಜೀನ್ ಮುಖಾಂತರ ಈ ಸ್ಪರ್ಧೆಯನ್ನು ಪ್ರತಿವರ್ಷ ಭರ್ಜರಿಯಾಗಿ ನಡೆಸಲಾಗುತ್ತದೆ.
Miss india world 2026 ಆಗಿ ಹೊರಹುಮ್ಮಿದ ಕಾರವಾರದ ಶಾಸಕ ಸೈಲ್ ಪುತ್ರಿ ಸಾಧ್ವಿ -ವಿಡಿಯೋ ನೋಡಿ
ಈ ಸ್ಪರ್ಧೆ 1964ರಿಂದ ಭಾರತದಲ್ಲಿ ನಡೆಯುತ್ತಿದೆದೇಶದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ beauty pageantಗಳಲ್ಲಿ ಒಂದಾಗಿದೆ
ಇಲ್ಲಿಂದ ಆಯ್ಕೆಯಾಗುವವರು Miss World, Miss Universe ಮುಂತಾದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ
ಉದ್ದೇಶ ಏನು?
ಈ ಸ್ಪರ್ಧೆಯ ಉದ್ದೇಶ ಕೇವಲ ಸೌಂದರ್ಯವಲ್ಲ,ಆತ್ಮವಿಶ್ವಾಸಬುದ್ಧಿಮತ್ತೆ,ವ್ಯಕ್ತಿತ್ವ,ಸಮಾಜದ ಬಗ್ಗೆ ಅರಿವುಇವುಳ್ಳ ಮಹಿಳೆಯರನ್ನು ಆಯ್ಕೆ ಮಾಡುವುದಾಗಿದೆ.
Femina Miss India ಸ್ಪರ್ಧೆಯನ್ನು Femina (Times Group) ನಡೆಸುತ್ತದೆ ಮತ್ತು ಇದು ಭಾರತದಲ್ಲಿ ಅತ್ಯಂತ ಗೌರವಾನ್ವಿತ ಸೌಂದರ್ಯ ಸ್ಪರ್ಧೆಯಾಗಿದೆ.
ಸಾಧ್ವಿ ಸೈಲ್ ಶ್ರಮ ಏನು
ಸಾಧ್ವಿ ಸೈಲ್ ಮೂಲತಹಾ ಗೋವಾದಲ್ಲಿ ಜನಿಸಿದರೂ ಉತ್ತರ ಕನ್ನಡ ಜಿಲ್ಲೆಯ ಕಾರವಾರದವರು. ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹಿರಿಯ ಪುತ್ರಿ. 24 ವರ್ಷ ವಯಸ್ಸಿನಿ ಈ ಯುವತಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಮಕ್ಕಳ ಶಿಕ್ಷಣ ಸೇರಿದಂತೆ ಸಾಮಾಜಿಕ ಕ್ಷೇತ್ರದಲ್ಲಿ ಎನ್.ಜಿ.ಓ ಮೂಲಕ ಕೆಲಸ ಮಾಡುತಿದ್ದಾರೆ.
Karwar| ಈ ಶ್ವಾನದ ಮಾಲೀಕ ನಾನಲ್ಲ ! ಜಿಲ್ಲಾಧಿಕಾರಿ ಮೊರೆ ಹೋದ ಯುವಕ ! ಏನಿದು ಕತೆ?
ಮಾಡಲಿಂಗ್ ಗಾಗಿ ವಿಶೇಷ ತರಬೇತಿ ಪಡೆದ ಅವರು ಸಾಕಷ್ಟು ಶ್ರಮ ಹಾಕಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೆಲವು ಕಂಡಿದ್ದಾರೆ.
ಮಗಳು ಬಿಸಿನೆಸ್ ಮಾಡಲಿ ಎಂದು ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ಬಳಿ ಬುದ್ಧಿ ಹೇಳಿಸಿದೆ -ಶಾಸಕ ಸತೀಶ್ ಸೈಲ್.

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಾರೆ.ಮಗಳು ತನ್ನ ಬಿಸಿನೆಸ್ ನೋಡಿಕೊಂಡು ಸಮಾಜ ಸೇವೆ ಮಾಡಲಿ ಎಂದು ಕುದ್ದು ಮುಖ್ಯಮಂತ್ರಿಗಳ ಹಾಗೂ ಡಿಕೆ ಶಿವಕುಮಾರ್ ರವರ ಬಳಿ ಬುದ್ಧಿ ಹೇಳಿಸಿದ್ದ ಕಾರವಾರದ ಶಾಸಕ ಸತೀಶ್ ಸೈಲ್ ಇಂದು ತನ್ನ ಹಿರಿಯ ಮಗಳು ಸಾಧ್ವಿ ಸೈಲ್ ದೇಶದ ಪ್ರತಿಷ್ಠಿತ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟ ತೊಟ್ಟು ವಿಶ್ವ ಸುಂದರಿ ಸ್ಪರ್ಧೆಗೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಗಳು ಬಿಸಿನೆಸ್ ಮಾಡಬೇಕು ಎಂದಿದ್ದಳು ಆದರೇ ತಾನು ಮಾಡಲಿಂಗ್ ಗೆ ಹೋಗಬೇಕು ಅಂತ ಮನಸಿನೊಳಗೇ ಅಂದುಕೊಂಡಿದ್ದಳು. ಆಕೆ ಮಾಡಲಿಂಗ್ ಗೆ ಹೋಗುತ್ತಾಳೆ ಎಂದು ನನಗೆ ಗೊತ್ತಿರಲಿಲ್ಲ.ಗೊತ್ತಾದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಳಿ ಕರೆದೊಯ್ದು ನನ್ನ ಬಿಸಿನೆಸ್ ನೋಡಿಕೊಳ್ಳುವಂತೆ ಬುದ್ದಿವಾದ ಹೇಳಿಸಿದ್ದೆ.
ಆದರೇ ಡಿಕೆ ಶಿವಕುಮಾರ್ ರವರು ಆಕೆಯ ಇಷ್ಟದಂತೆ ನಡೆದುಕೊಳ್ಳಲು ಹೇಳಿದ್ರು ಇದೀಗ ಮಿಸ್ ಇಂಡಿಯಾ ಆಗಿ ಹೆಸರು ತಂದಿದ್ದಾಳೆ.ಸಮಾಜ ಸೇವೆಬಗ್ಗೆ ಆಕೆಗೆ ತುಂಬಾ ಇಷ್ಟ ಇದೆ .ಬಡ ಮಕ್ಕಳ ಶಿಕ್ಷಣಕ್ಕಾಗಿ ಆಕೆ ಇಪ್ಪತ್ತೈದು ಲಕ್ಷ ದೇಣಿಗೆಯನ್ನ 342 ಜನರ ಬಳಿ ಸಂಗ್ರಹ ಮಾಡಿ ನೀಡಿದಳು.
ನಾನು ಪೊಲಟೀಷನ್ ಅಲ್ಲ ,ನಾನೊಬ್ಬ ಬಿಸಿನೆಸ್ ಮ್ಯಾನ್,ನನ್ನ ಬಿಸಿನೆಸ್ ಗೆ ತೊಂದರೆಯಾಗಿದ್ದಕ್ಕೆ ನಾನು ರಾಜಕೀಯಕ್ಕೆ ಬಂದೆ.ನನಗೆ ಜನರ ಸೇವೆ ಮಾಡೋದು ಇಷ್ಟಾ ರಾಜಕಾರಣ ಅಲ್ಲ ,ಮಗಳಿಗೂ ಜನಸೇವೆ ಇಷ್ಟ.ನನ್ನಂತೆ ಅವಳ ಜೀವನದಲ್ಲೂ ಸಡನ್ ಟರ್ನ ಆಗಿದೆ ,ನಾನು ನನ್ನ ಕಷ್ಟವನ್ನು ಅವಳಿಗೆ ತೋರಿಸಿಕೊಡಲಿಲ್ಲ, ಅವಳು ಕೆನಡಾದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿದಳು.ಆಕೆ ಹುಟ್ಟಿದ್ದು ಗೋವಾದಲ್ಲಿ ಹಾಗಾಗಿ ಗೋವಾದಿಂದ ಮಿಸ್ ಇಂಡಿಯಾಗೆ ಸ್ಪರ್ಧೆ ಮಾಡಿದಳು .ಕರ್ನಾಟಕದಲ್ಲೇ ತರಬೇತಿ ಪಡೆದಳು ,ಕರ್ನಾಟಕದವರಿಗೆ ಅವಕಾಶ ಸಿಗಲಿ ನನ್ನ ಹುಟ್ಟೂರಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪರ್ಧೆ ಮಾಡಿದಳು.
ನನಗೆ ಆಕೆ ಆಯ್ಕೆ ಆಗುತ್ತಾಳೆ ಅಂತ ನಂಬಿಕೆ ಇರಲಿಲ್ಲ ,ಬೇಡ ಬಾ ಎಂದಿದ್ದೆ.ಆದ್ರೆ ಎಲ್ಲದರಲ್ಲೂ ಸೆಲೆಕ್ಟ್ ಆದಳು, ನಾನು ಅಲ್ಲಿ ಇರಬೇಕಿತ್ತು ,ಅವಳು ಮಿಸ್ ಇಂಡಿಯಾ ಕಿರೀಟ ತೊಡುವುದನ್ನ ಮಿಸ್ ಮಾಡಿಕೊಂಡೆ ಎಂದು ಭಾವುಕರಾದರು. ಇನ್ನು ಸೈಲ್ ಪತ್ನಿ ಸಹ ಮಗಳ ಸಾಧನೆಗೆ ಹರ್ಷವ್ಯಕ್ತಪಡಿಸಿದ್ದು,ಓದು ಮುಗಿಸಿ ಮನೆಗೆ ಬಂದವಳೇ ತಾನು ಮಿಸ್ ಇಂಡಿಯಾಗೆ ಸ್ಪರ್ಧೆ ಮಾಡುತ್ತೇನೆ ಎಂದಿದ್ದಳು, ರಾತ್ರಿ 11 ರ ವರೆಗೆ ಜಿಮ್ ಗೆ ಹೋಗುತಿದ್ದಳು ಕಠಿಣ ಪರಿಶ್ರಮ ಪಟ್ಟಿದ್ದಳು ಆಕೆ ಆಯ್ಕೆಯಾಗುತ್ತಾಳೆ ಎಂಬ ನಂಬಿಕೆ ನಮಗೆ ಇರಲಿಲ್ಲ,ಆದರೇ ಅವಳಿಗೆ ಇತ್ತು .ಗುರು ಹಿರಿಯರ ಆಶಿರ್ವಾದದ ದಿಂದ ಆಕೆ ಮಿಸ್ ಇಂಡಿಯಾ ಆಗಿ ಹೊರಹುಮ್ಮಿದ್ದು ಇದೀಗ ಮಿಸ್ ವರ್ಡ ಸ್ಪರ್ಧೆಗೆ ತಯಾರಿ ಮಾಡಿಕೊಳ್ಳುತಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು.







