Karwar| ಈ ಶ್ವಾನದ ಮಾಲೀಕ ನಾನಲ್ಲ ! ಜಿಲ್ಲಾಧಿಕಾರಿ ಮೊರೆ ಹೋದ ಯುವಕ ! ಏನಿದು ಕತೆ?
Karwar :- ಶ್ವಾನವೊಂದು ಹಲವರಿಗೆ ಕಚ್ಚಿದ್ದರಿಂದ ಬೇಸತ್ತ ಕಾರವಾರ (karwar) ತಾಲೂಕಿನ ಗೋಟಗಾಳಿ ಜನ ಗ್ರಾಮಪಂಚಾಯ್ತಿಗೆ ದೂರು ನೀಡಿದ್ದಾರೆ. ಶ್ವಾನಕ್ಕೆ ಆಶ್ರಯ ನೀಡಿದ್ದ ವ್ಯಕ್ತಿಗೆ ಇದೀಗ ನೋಟಿಸ್ ನೀಡಿದ್ದು ಈ ಶ್ವಾನ ತನ್ನದಲ್ಲ ಎಂದು ಇದೀಗ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾನೆ.
ಆತ ಹೇಳುವಂತೆ ಬಸವಳಿದಿದ್ದ ಬೀದಿ ನಾಯಿಗೆ ಅನ್ನ ಹಾಕಿದ ತಪ್ಪಿಗೆ ಶ್ವಾನದ ನಿರ್ವಹಣೆ ಹೊಣೆ ಹೊರಿಸಿ ಗ್ರಾಮಪಂಚಾಯ್ತಿ ಯಿಂದ ನೋಟಿಸ್ ನೀಡಿರುವುದಾಗಿ ದೂರಿದ್ದಾನೆ.
ತುಶಾರ್ ಲೊಳೆಕರ ಎಂಬಾತನಿಗೆ ಗ್ರಾಮಪಂಚಾಯ್ತಯಿಂದ ನೋಟಿಸ್ ಪಡೆದ ವ್ಯಕ್ತಿಯಾಗಿದ್ದು, ಕಾರವಾರ ತಾಲೂಕಿನ ಗೋಟಗಾಳಿ ಗ್ರಾಮಪಂಚಾಯತ ನೋಟಿಸ್ ನೀಡಿದ ಗ್ರಾಮಪಂಚಾಯ್ತಿಯಾಗಿದೆ.
ಬೈರಾ ಗ್ರಾಮದ ಬಸ್ ನಿಲ್ದಾಣದ ಬಳಿ ಅನಾತವಾಗಿ ಅನಾರೋಗ್ಯ ಪೀಡಿತವಾಗಿ ಹಸಿವಿನಿಂದ ಒದ್ದಾಡುತಿದ್ದ ಶ್ವಾನಕ್ಕೆ ತಾನು ಅನ್ನ ಹಾಕಿದ್ದೆ ಹಲವು ದಿನದಿಂದ ಮಾನಸಿಕ ಅಸ್ವಸ್ತವಾಗಿದ್ದ ಶ್ವಾನ ಹಲವರ ಮೇಲೆ ದಾಳಿ ಮಾಡಿತ್ತು.ಕರುಣೆ ತೋರಿದ್ದಕ್ಕೆ ಶ್ವಾನಕ್ಕೆ ಊಟ ಹಾಕಿ ಉಪಚರಿಸಿದ್ದಕ್ಜೆ ಇದೀಗ ನನ್ನದೇ ಶ್ವಾನ ಎನ್ನಲಾಗುತ್ತಿದೆ ಎಂದು ತುಷಾರ್ ದೂರಿದ್ದಾರೆ.
ಶ್ವಾನ ಹಲವರ ಮೇಲೆ ದಾಳಿ ಮಾಡಿದ್ದರಿಂದ ಗ್ರಾಮಪಂಚಾಯ್ತಿಗೆ ಸ್ಥಳೀಯರು ದೂರು ನೀಡಿದ್ದರು.ಹೀಗಾಗಿ ಆತನೇ ಸಾಕಿರುವ ಶ್ವಾನವೆಂದು ಶ್ವಾನದ ಬಗ್ಗೆ ಜವಬ್ದಾರಿ ವಹಿಸಿಕೊಳ್ಳಬೇಕಿದ್ದ ಗ್ರಾಮಪಂಚಾಯ್ತಿ ಅಧಿಕಾರಿಗಳು ಶ್ವಾನ ಪ್ರೀತಿ ತೋರಿದ ತುಷಾರ್ ಗೆ ನೋಟಿಸ್ ನೀಡಿ ಶ್ವಾನದ ನಿರ್ವಹಣೆ ಮಾಡುವಂತೆ ಗ್ರಾಮಪಂಚಾಯ್ತಿ ಅಧಿಕಾರಿಗಳ ಎಚ್ಚರಿಕೆ ನೀಡಿ ನೋಟಿಸ್ ಕೊಟ್ಟಿದ್ದಾರೆ.ಇದರಿಂದ ಬೇಸತ್ತ ತುಷಾರ್
ಶ್ವಾನದ ನಿರ್ವಹಣೆ ಮಾಡಲಾಗದೇ ಜಿಲ್ಲಾಧಿಕಾರಿ ಮೊರೆ ಹೋಗಿದ್ದು ತನಗೆ ನ್ಯಾಯ ಕೊಡಿಸುವಂತೆ ಪತ್ರದ ಮೂಲಕ ಕೇಳಿದ್ದಾರೆ.
Karwar|ಆನ್ಲೈನ್ ಹೂಡಿಕೆ ಮೋಸ: ನಿವೃತ್ತ ನೌಕರರಿಂದ ₹21.76 ಲಕ್ಷ ವಂಚನೆ
ಇನ್ನು ಈ ಶ್ವಾನ ಆತನದ್ದೇ ಎಂದು ಹೇಳಲಾಗುತಿದ್ದು ,ಆದರೇ ಆತ ಮಾತ್ರ ಈ ಶ್ವಾನ ನನ್ನದಲ್ಲ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.ಒಟ್ಟಿನಲ್ಲಿ ಶ್ವಾನದ ಮಾಲೀಕ ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ.







