ಮೊಬೈಲ್ ಇದೆ ಎಂದು ಅಶ್ಲೀಲ ವೀಡಿಯೋ ವೀಕ್ಷಿಸುತ್ತೀರಾ- ಮಾಡಿದ ಒಂದು ತಪ್ಪಿಗೆ ಭಟ್ಕಳ ಯುವಕನ ವಿರುದ್ಧ ದಾಖಲಾಯ್ತು ಪ್ರಕರಣ.

ಮೊಬೈಲ್ ಇದೆ ಎಂದು ಅಶ್ಲೀಲ ವೀಡಿಯೋ ವೀಕ್ಷಿಸುತ್ತೀರಾ- ಮಾಡಿದ ಒಂದು ತಪ್ಪಿಗೆ ಭಟ್ಕಳ ಯುವಕನ ವಿರುದ್ಧ ದಾಖಲಾಯ್ತು ಪ್ರಕರಣ.
ಭಟ್ಕಳದಲ್ಲಿ ಇನ್‌ಸ್ಟಾಗ್ರಾಂ ಮೂಲಕ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಿಸಿ ಹಾಗೂ ಶೇರ್ ಮಾಡಿದ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಸೂಚಿಸುವ ಸಾಂಕೇತಿಕ ಚಿತ್ರ. ಭಟ್ಕಳದಲ್ಲಿ ಇನ್‌ಸ್ಟಾಗ್ರಾಂ ಮೂಲಕ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಿಸಿ ಹಾಗೂ ಶೇರ್ ಮಾಡಿದ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಸೂಚಿಸುವ ಸಾಂಕೇತಿಕ ಚಿತ್ರ.
ಆರೋಪಿ ಚಿತ್ರ.

ಮೊಬೈಲ್ ಇದೆ ಎಂದು ಅಶ್ಲೀಲ ವೀಡಿಯೋ ವೀಕ್ಷಿಸುತ್ತೀರಾ- ಮಾಡಿದ ಒಂದು ತಪ್ಪಿಗೆ ಭಟ್ಕಳ ಯುವಕನ ವಿರುದ್ಧ ದಾಖಲಾಯ್ತು ಪ್ರಕರಣ.

ಕಾರವಾರ :- ಮೊಬೈಲ್ ಇದೆ ,ಡಾಟ ಇದೆ ಅಂತ ಬೇಕಾಬಿಟ್ಟಿಯಾಗಿ ನಿಮ್ಮ ಮೊಬೈಲ್ ಬಳಕೆ ಮಾಡ್ತಿರಾ? ಮೂಡ್ ಬಂದಾಗಲೆಲ್ಲಾ  ಫೋರ್ನ ವಿಡಿಯೋ ನೋಡೋದು ,ಮತ್ತೊಬ್ಬರಿಗೆ ಶೇರ್ ಮಾಡಿ ಮಜಾ ಅನುಭವಿಸ್ತೀರಾ ? ಹಾಗಾದ್ರೆ ಈ ಸ್ಟೋರಿ ಓದಿ

ಮಕ್ಕಳ ಅಶ್ಲೀಲ ವಿಡಿಯೋ ನೋಡಿ ಶೇರ್ -ಭಟ್ಕಳದ ಯುವಕನ ವಿರುದ್ಧ ಪ್ರಕರಣ ದಾಖಲು

Bhatkal news

ಸಾಮಾಜಿಕ  ಜಾಲತಾಣದ  ಇನ್‌ಸ್ಟಾಗ್ರಾಂ ಮೂಲಕ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸಿ ಮತ್ತೊಬ್ಬರಿಗೆ ರವಾನಿಸಿದ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ  ಭಟ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ:-Bhatkal| ಸಂಚಾರ ನಿಯಮ ಮೀರಿದ ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿದ ಭಟ್ಕಳ ಪೊಲೀಸರು

“akshay_madival” ಹೆಸರಿನ ಇನ್‌ಸ್ಟಾಗ್ರಾಂ ಖಾತೆಯನ್ನು ಬಳಸುತ್ತಿದ್ದ ವ್ಯಕ್ತಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿ, ಅವುಗಳನ್ನು ಮತ್ತೊಂದು ಇನ್‌ಸ್ಟಾಗ್ರಾಂ ಖಾತೆಗೆ ಕಳುಹಿಸಿದ್ದಾನೆ.

ಈ ಕುರಿತು ಭಟ್ಕಳ (bhatkal)ಟೌನ್ ಪೊಲೀಸ್‌ ಠಾಣೆಯ ಪಿ.ಎಸ್.ಐ ನವೀನ್ ನಾಯ್ಕ ದೂರು ದಾಖಲಿಸಿದ್ದಾರೆ.

ದೂರು ದಾಖಲಾಗಲು ಕಾರಣ ಏನು.?

ಏಪ್ರಿಲ್ 25ರಂದು ಸಂಜೆ 6.36ರಿಂದ 6.37ರ ಅವಧಿಯಲ್ಲಿ ಆರೋಪಿ ತನ್ನ ಇನ್‌ಸ್ಟಾಗ್ರಾಂ ಖಾತೆ ಮೂಲಕ ಮಕ್ಕಳ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ತೆರೆದು ವೀಕ್ಷಿಸಿದ್ದಾನೆ. ಬಳಿಕ “Navya” ಎಂಬ ಶೀರ್ಷಿಕೆಯಡಿ ಕಾರ್ಯನಿರ್ವಹಿಸುತ್ತಿದ್ದ “magicpeach2204” ಹೆಸರಿನ ಮತ್ತೊಂದು ಇನ್‌ಸ್ಟಾಗ್ರಾಂ ಖಾತೆಗೆ ಆ ದೃಶ್ಯಗಳನ್ನು ಷೇರ್ ಮಾಡಿದ್ದಾನೆ.

ಇದನ್ನೂ ಓದಿ:-Bhatkal| ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರುಪಾಯಿ ವಂಚನೆ

ಇನ್ನು ಈ ಬಗ್ಗೆ  ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಟ್ಟಿರುವ ಕೇಂದ್ರ ಸರ್ಕಾರದ ಸಮಾಜಿಕ ನಿಗಾ ಜಾಲದ ಘಟಕದಿಂದ ಈ ಬಗ್ಗೆ ಭಟ್ಕಳ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಈತನ ಸಂಪೂರ್ಣ ವಿಳಾಸ ,ಕೃತ್ಯದ ಬಗ್ಗೆ  ಸಮಾಜಿಕ ಜಾಲತಾಣದ ನಿಗಾ ಘಟಕ ಪೊಲೀಸರಿಗೆ ಮಾಹಿತಿ ನೀಡುತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪರಾಧ ಕೃತ್ಯ ಹೆಚ್ಚಾಗುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣದ ಘಟಕ ಪ್ರತಿಯೊಂದು ಚಟುವಟಿಕೆ ಕುರಿತು ನಿಗಾ ಇರುಸುತ್ತದೆ. ಇನ್ನು ಮಕ್ಕಳ ಅಶ್ಲೀಲ ವೀಡಿಯೋ ನೋಡುವುದು ಹಾಗೂ ಷೇರ್ ಮಾಡುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement