Siddapur |ಜ್ಯೋತಿಷಿ ಕಮಲಾಕರನ ರಹಸ್ಯ -ವಿಡಿಯೋ ಜೊತೆ ಲವ್ವಿಡವ್ವಿ ಬಹಿರಂಗ!
Siddapur news :-ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ವಸಂತ್ ನಾಯ್ಕ ಹತ್ಯೆ ಆರೋಪದಲ್ಲಿ ಜೈಲು ಸೇರಿರುವ ಸುಚಿತ್ರಾ ,ಕಮಲಾಕರ್ ಭಟ್ ರಂಗಿನಾಟ ಒಂದೊಂದೆ ಬೆಳಕಿಗೆ ಬರುತಿದ್ದು ಇದೀಗ ಸುಚಿತ್ರಾ ತೆಕ್ಕೆಗೆ ಬಿದ್ದಿದ್ದ ಜ್ಯೋತಿಷಿ ಕಮಲಾಕರ್ ಭಟ್ ಆಡಿಯೋ ಜೊತೆ ಕರ್ಮಕಾಂಡಗಳು ಬಯಲಿಗೆ ಬರುತ್ತಿದೆ.ಇದರ ಇನ್ ಸೈಡ್ ಸ್ಟೋರಿ ಇಲ್ಲಿದೆ.
ಟಿವಿಯಲ್ಲಿ ಕಂಡವರ ಭವಿಷ್ಯ ಹೇಳಿಕೊಂಡು , ಬಾಯಲ್ಲಿ ಕವಳ ಅಗೆದು ಶನಿ ಬಿಡಿಸ್ತೀನಿ ಅಂತಿದ್ದ ಕಮಲಾಕರ್ ಭಟ್ ಗೆ ಸುಚಿತ್ರಾ ಶನಿಯಂತೆ ಹೆಗಲು ಏರಿ ಮಾಡಬಾರದ್ದು ಮಾಡಿಬಿಟ್ಟಿದ್ದಾಳೆ. ಸಿದ್ದಾಪುರದಲ್ಲಿ ವಸಂತ ನಾಯ್ಕ ಹೆಣ ಬೀಳುತಿದ್ದಂತೆ ಸುಚಿತ್ರಾ & ಟೀಮ್ ನನ್ನ ಕರೆತಂದು ರಸ್ತೆ ಮಧ್ಯೆದಲ್ಲೇ ಇಳಿದಿದ್ದ ಕಮಲಾಕರ್ ಭಟ್ ಘಟನೆ ನಡೆಯುತಿದ್ದಂತೆ ಎಸ್ಕೇಪ್ ಆಗಲು ಸುಚಿತ್ರಾಳನ್ನ ಪರಿಚಯಿಸಿದ್ದ ಸಾಗರದ ಸುಮನಾಯ್ಡು ಗೆ ಮಧ್ಯ ರಾತ್ರಿ ಕರೆಮಾಡಿ ತನ್ನ ಕಾರಿನ ಟಯರ್ ಪಂಚರ್ ಆಗಿದೆ , ಶಿವಮೊಗ್ಗಕ್ಕೆ ಹೋಗಲು ಬಾಡಿಗೆ ವಾಹನ ವ್ಯವಸ್ಥೆ ಮಾಡು ಎಂದು ಕೇಳಿಕೊಂಡಿದ್ದು ಬೆಳಕಿಗೆ ಬಂದಿದೆ.(ಇವುಗಳಿಗೆ ಹೇಳಿಕೆ ದಾಖಲೆ ಇದೆ).
ಈ ಕುರಿತು ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಮಾಹಿತಿ ನೀಡಿದ್ದ ಸುಮಾನಾಯ್ಡು ನಾನು ಸುಚಿತ್ರಾಳನ್ನ ಪರಿಚಯ ಮಾಡಿಸಿದ್ದಷ್ಟೇ , ಭಟ್ರು ಜೇನುತುಪ್ಪ,ಬೆಲ್ಲ ಇದ್ರೆ ಕಳಸು ಅನ್ನುತಿದ್ರು ನಾನು ಕಳುಹಿಸುತಿದ್ದೆ , ಅವರು ಪೋನ್ ಪೇ ಮಾಡುತಿದ್ರು ,ಅಂದ ಸುಮಾ ನಾಯ್ಡು , ಕಮಲಾಕರ್ ಭಟ್ ಕುತ್ತಿಗೆಯಲ್ಲಿ ಇದ್ದ ತನ್ನ ಚೈನ್ ಮೂಲಕ ಸುಚಿತ್ರಾಗೆ ತಾಳಿಮಾಡಿಸಿ ಹಾಕಿದ್ರು ಆಗಲೇ ನನಗೆ ಅವರಿಬ್ಬರು ಮದುವೆ ಆಗಿದ್ದಾರೆ ಎಂದು ಗೊತ್ತಾಗಿದ್ದು,ಕಮಲಾಕರ್ ಭಟ್ ಗೆ ಬುದ್ದಿ ಹೇಳಿದ್ರೆ ಸೀದಾ ಸುಚಿತ್ರಾಗೆ ವರದಿ ಒಪ್ಪಿಸಿದ್ರು, ಸುಚಿತ್ರಾ ನನ್ನ ಜೊತೆ ಜಗಳ ಆಡಿ ಕೊನೆಗೆ ನನ್ನ ಸಂಸಾರನೇ ಒಡದ್ಲು ಅಂತ ನೋವು ತೋಡಿಕೊಂಡಿದ್ದಾಳೆ ಸುಮಾ ನಾಯ್ಡು.
Siddapur| ಸುಚಿತ್ರಾ–ಕಮಲಾಕರ್ ಭಟ್ ಪ್ರಕರಣ | ಮದುವೆಯ ಬಳಿಕವೂ ಮತ್ತೊಂದು ಲವ್ ರಿಲೇಷನ್ ಬಹಿರಂಗ!
ಇನ್ನು ಜ್ಯೋತಿಷಿ ಕಮಲಾಕರ್ ಭಟ್ ನೇನು ಕಡಿಮೆ ಇರಲಿಲ್ಲ. ಸುಚಿತ್ರಾ ಪರಿಚಯ ಆಗೋಕು ಮುಂಚೆ ಕಮಲಾಕರ ಭಟ್ಟನ ಆಟಟೋಪ ಕಡಿಮೆ ಇರಲಿಲ್ಲ. ಹೆಂಡತಿ ಇದ್ರೂ , ಶಿವಮೊಗ್ಗ ಜಿಲ್ಲೆಯ ಸಾಗರದ (sagar) ವಿವೇಕ ನಗರದ ತಾಸ್ಮ ಸಾಬ್ ಎಂಬಾಕೆಯನ್ನು ವಿವಾಹವಾಗಿದ್ದ ಕಮಲಾಕರ್ ಭಟ್ ಎಲ್ಲಿ ಗುಡಿಸಲಿನಲ್ಲಿದ್ದ ಸುಚಿತ್ರಾ ಆಂಟಿ ಕಮಲಾಕರ್ ಭಟ್ ನ ಅರಸಿಯಾದ್ಲೋ ಆಕೆಯನ್ನ ದೂರ ಸರಿಸಿದ್ದ .
ಇನ್ನು ಮೂವತ್ತೇಳು ವರ್ಷದ ತಾಸ್ಮ ನಾನಿನ್ನ ಬಿಡಲಾರೆ ಅಂತ ಠಾಣೆ ಮೆಟ್ಟಿಲೇರಲು ಹೊರಟಳೋ ರಾಜಿ ಪಂಚಾಯ್ತಿ ಮಾಡಿ 50 ಲಕ್ಷ ಪ್ರಾಯಶ್ಛಿತ ಹಣ ನೀಡಿ ಕೈ ತೊಳೆದುಕೊಂಡಿದ್ದ.
ಇನ್ನು ಕಮಲಾಕರ್ ಭಟ್ಟ ಕಚ್ಚೆ ಹರಿದುಕೊಂಡು ಹಲವರ ಸಂಬಂಧ ಬೆಳಸಿದ್ದ ಆರೋಪ ಇದೆ. ಇನ್ನು ಕಮಲಾಕರ್ ಭಟ್ (kamlakar Bhat) ಸುಚಿತ್ರಾ ಮುಂದೆ ತಾನೊಬ್ಬ ಸಾಜಾ ಎಂದು ತಿಳಿಸಲು ಶಿರಸಿ ಮೂಲದ ಮಹಿಳೆಗೆ ಆಡಿಯೋ ಮೆಸೇಜ್ ಮಾಡಿದ್ದು ಸುಚಿತ್ರಾ ಗಾಗಿ 50ರಿಂದ100 ಕೋಟಿ ಆಸ್ತಿ ಅವಳ ಹೆಸರಿನಲ್ಲಿ ಮಾಡಿದ್ದೀನಿ,ಮಗಳ ಹೆಸರಲ್ಲಿ ಮೂರ್ನಾಲ್ಕು ಕೋಟಿ ಆಸ್ತಿ ಮಾಡಿದ್ದೇನೆ,ನಾನು ಸತ್ರು ಬೇಜಾರಿಲ್ಲ,ಸುಚಿತ್ರಳಿಗಾಗಿ ಏನ್ ಬೇಕಾದರು ಮಾಡ್ತಿನಿ.ಮಗಳ ಲೈಪ್‌ಕೂಡಾ ಸೆಟಲ್ ಮಾಡಿದ್ದೀನಿನಾನು ಸುಚಿತ್ರಳನ್ನ ಮದುವೆ ಮಾಡಿಕೊಂಡು ಬಂದಿರೋದು.ಸುಚಿತ್ರ ಬಗ್ಗೆ ಮಾತಾಡಿದ್ರೆ ಹುಷಾರ್ ಎಂದು ಇನ್ನೊಂದು ಮಹಿಳೆಗೆ ಆವಾಜ್ ಹಾಕಿದ್ದಾನೆ.
ಕಮಲಾಕರ್ ಭಟ್ ನದ್ದು ಎನ್ನಲಾದ ಆಡಿಯೋ ವಿಡಿಯೋ ರೂಪದಲ್ಲಿ ನೀಡಲಾಗಿದೆ.
ಸುಚಿತ್ರಾ ಕಮಲಾಕರ್ ಭಟ್ ಗಿಂತ ವಿಭಿನ್ನವಾಗಿಲ್ಲ.ಹಣವೇ ಮುಖ್ಯ ಅನ್ನೋ ಈ ಆಂಟಿ ಸಿದ್ದಾಪುರದ ಗುಡಿಸಲಲ್ಲಿ ಇದ್ದಾಗಲೇ ಸಾಗರ ತಾಲೂಕಿನ ಶಿರಳಗಿಯ ಪ್ರಕಾಶ್ ಎಂಬಾತನ ಜೊತೆ ಲವ್ವಿ ಡವ್ವಿ ಶುರು ಇಟ್ಟಿದ್ದಳು ಗಂಡನನ್ನ ಬೆಂಗಳೂರಿನಲ್ಲಿ ದುಡಿಯಲು ಬಿಟ್ಟು ಕಾಡಿನ ಮಧ್ಯೆ ಇದ್ದ ಗುಡಿಸಲಿನಲ್ಲಿ ಚಕ್ಕಂದ ಆಡುತಿದ್ದಳು.ಜೆಸಿಬಿ ಯಂತ್ರ ಇಟ್ಟುಕೊಂಡು ಕಂಡವರ ಮನೆ ಹಿತ್ತಲ ಗುಡ್ಡ ಅಗೆಯುವ ಕೆಲಸ ಮಾಡುತಿದ್ದ ಪ್ರಕಾಶ್ ಗೆ ಸುಚಿತ್ರಾ ಸಹವಾಸದಿಂದ ವ್ಯಾಪಾರದಲ್ಲಿ ನಷ್ಟ ಉಂಟಾಯ್ತು.
ಆಗ ಗುಲ್ಬರ್ಗದ ಜಮೀನ್ದಾರನ ಸಖ್ಯ ಮಾಡಿದ್ದ ಸುಚಿತ್ರಾ ಪ್ರಕಾಶನಿಗಾಗಿ ಹೊಸ ಜೆಸಿಪಿ ಖರೀದಿಸಲು ಸಾಲ ನೀಡಿದ್ದಳು ಎಂಬುದು ಸುಚಿತ್ರ ಪತಿ ಮಹೇಶ್ ನಾಯ್ಕ ಮಾತು.
ಕಂಡವರ ಭವಿಷ್ಯ ಹೇಳಿ ಖ್ಯಾತಿ ,ಹಣ ಗಳಿಸಿದ್ದ ವೀಳ್ಯದೆಲೆ ಕಮಲಾಕರ ಭಟ್ ಸುಚಿತ್ರಾ ಹೆಸರಿನ ಮೋಹಿನಿ ಸಹವಾಸಕ್ಕೆ ಬಿದ್ದು ಹಣ ಕಳೆದುಕೊಂಡು ಜೈಲು ಕಂಬಿ ಎಣಿಸುವಂತಾಗಿದೆ.
