Yallapur| ದುಮ್ಮಿಕ್ಕಿ ಹರಿವ ಪ್ರಕೃತಿ ಸೊಬಗಿನ ಮಾಗೋಡು ಜಲಪಾತ -ವಿಡಿಯೋ ನೋಡಿ.
Yallapur:-ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಪ್ರಕೃತಿ ಸೊಬಗನ್ನ ಇಮ್ಮುಡಿಗೊಳಿಸಿದೆ.
ಜಿಲ್ಲೆಯ ಯಲ್ಲಾಪುರದಿಂದ (yallapur)ಸುಮಾರು 20ಕಿ.ಮೀ. ದೂರದಲ್ಲಿರುವ ಮಾಗೋಡು ಜಲಪಾತವು ಇದೀಗ ತನ್ನ ಪ್ರಕೃತಿ ಸೊಬಗನ್ನ ಹೆಚ್ಚಿಸಿಕೊಂಡು ಮೈದುಂಬಿ ಹರಿಯುತ್ತಿದೆ.
ದಟ್ಟ ಅರಣ್ಯದ ನಡುವೆ ಬೇಡ್ತಿ ನದಿಯು ಸುಮಾರು 200 ಮೀಟರ್ ಎತ್ತರದಿಂದ ಎರಡು ಹಂತಗಳಲ್ಲಿ ಧುಮುಕುವ ಅದ್ಭುತ ನೈಸರ್ಗಿಕ ತಾಣವಾಗಿರುವ ಈ ಜಲಪಾತ ಪ್ರಕೃತಿ ಪ್ರಿಯರಿಗೆ ಹೇಳಿಮಾಡಿಸಿದಂತಿದೆ.
ಯಾವಾಗ ಭೇಟಿ ನೀಡಿದರೆ ಸೂಕ್ತ
ಭೇಟಿ ನೀಡಲು ಉತ್ತಮ ಸಮಯ ಮಳೆಗಾಲದ ನಂತರದ ತಿಂಗಳುಗಳು ಅಂದರೆ ಜುಲೈನಿಂದ ಡಿಸೆಂಬರ್ ವರೆಗಿನ ಅವಧಿಯು ಜಲಪಾತವನ್ನು ನೋಡಲು ಅತ್ಯುತ್ತಮವಾದ ಸಮಯ. ಈ ಸಮಯದಲ್ಲಿ ಸುತ್ತಲಿನ ಹಚ್ಚ ಹಸುರಿನ ಪರಿಸರ ಮತ್ತು ಧುಮ್ಮಿಕ್ಕುವ ನೀರಿನ ಸೊಬಗು ಕಣ್ಮನ ಸೆಳೆಯುತ್ತದೆ.
ತಲುಪುವುದು ಹೇಗೆ?
ವಿಮಾನ ನಿಲ್ದಾಣ: ಹತ್ತಿರದ ವಿಮಾನ ನಿಲ್ದಾಣವೆಂದರೆ ಹುಬ್ಬಳ್ಳಿ (ಸುಮಾರು 86 ಕಿ.ಮೀ. ದೂರ).
ರೈಲು ಮಾರ್ಗ: ಹತ್ತಿರದ ರೈಲು ನಿಲ್ದಾಣವು ಕಾರವಾರದಲ್ಲಿದ್ದು ಇಲ್ಲಿಂದಲೇ ತೆರಳಬೇಕು.
ರಸ್ತೆ ಮಾರ್ಗ: ಬೆಂಗಳೂರಿನಿಂದ ಸುಮಾರು 442 ಕಿ.ಮೀ. ಹಾಗೂ ಯಲ್ಲಾಪುರದಿಂದ ಖಾಸಗಿ ವಾಹನಗಳ ಮೂಲಕ ಸುಲಭವಾಗಿ ತಲುಪಬಹುದು.
ಹತ್ತಿರದ ಪ್ರವಾಸಿ ಆಕರ್ಷಣೆಗಳು.
ಮಾಗೋಡು ಜಲಪಾತಕ್ಕೆ ಭೇಟಿ ನೀಡಿದಾಗ ನೀವು ಜೆನುಕಲ್ಲು ಗುಡ್ಡ (ಸೂರ್ಯಾಸ್ತ ವೀಕ್ಷಣೆಗೆ ಪ್ರಸಿದ್ಧ) ಮತ್ತು ಕವಡಿ ಕೆರೆ (ಸುಮಾರು 6೦ ಎಕರೆ ವಿಸ್ತೀರ್ಣದ ದೊಡ್ಡ ಕೆರೆ) ಸ್ಥಳಗಳಿಗೂ ಭೇಟಿ ನೀಡಬಹುದು. ಜಲಪಾತ ವೀಕ್ಷಣೆಗೆ ಅನುಕೂಲವಾಗುವಂತೆ ಪ್ರವಾಸಿಗರಿಗೆ ವೀಕ್ಷಣಾ ಗೋಪುರ ಮತ್ತು ಸುರಕ್ಷಿತವಾದ ಹಾದಿಗಳನ್ನು ನಿರ್ಮಿಸಲಾಗಿದೆ. ಇನ್ನು ಧಾರ್ಮಿಕ ಕ್ಷೇತ್ರವಾದ ಗಂಟೆ ಗಣಪತಿ ದೇವಾಲಯವೂ ಇದೇ ಮಾರ್ಗದಲ್ಲಿದೆ.
ಇದನ್ನೂ ಓದಿ:-Yallapur |ಕಳಚೆ ಬಳಿ ಭೂಕುಸಿತ -ಕೆಲವು ಸಮಯ ಸಂಚಾರ ಬಂದ್
