Ankola | ಒಂದೇ ಅಂಗಡಿಗೆ 5 ಬಾರಿ ಕಳ್ಳತನ! ಶಟರ್‌ಗೆ ಕರೆಂಟ್ ಹರಿಸಿ ಪರಾರಿಯಾಗುವ ಖತರ್ನಾಕ್ ಕಳ್ಳ -ವಿಡಿಯೋ ನೋಡಿ

Ankola:ಅಂಕೋಲದ ಕನಕನಹಳ್ಳಿಯಲ್ಲಿ ಒಂದೇ ಅಂಗಡಿಗೆ ಐದು ಬಾರಿ ಕಳ್ಳತನ ಮಾಡಿದ ಆರೋಪ. ಶಟರ್‌ಗೆ ವಿದ್ಯುತ್ ಹರಿಸಿ ಪರಾರಿಯಾಗುವ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ.
CCTV footage of a serial thief accused of repeatedly breaking into a shop and electrifying the shutter in Kanakanahalli, Ankola, Uttara Kannada. CCTV footage of a serial thief accused of repeatedly breaking into a shop and electrifying the shutter in Kanakanahalli, Ankola, Uttara Kannada.
CCTV footage of a serial thief accused of repeatedly breaking into a shop and electrifying the shutter in Kanakanahalli, Ankola, Uttara Kannada.

Ankola | ಒಂದೇ ಅಂಗಡಿಗೆ 5 ಬಾರಿ ಕಳ್ಳತನ! ಶಟರ್‌ಗೆ ಕರೆಂಟ್ ಹರಿಸಿ ಪರಾರಿಯಾಗುವ ಖತರ್ನಾಕ್ ಕಳ್ಳ -ವಿಡಿಯೋ ನೋಡಿ.

 

ಕಾರವಾರ :-ಕಳ್ಳತನ ಮಾಡೋ ಕಳ್ಳರು ಸಿಕ್ಕ ವಸ್ತುಗಳನ್ನ ದೋಜಿ ಹೋಗುತ್ತಾರೆ.ಆದ್ರೆ ಉತ್ತರ ಕನ್ನಡ (uttara Kannada) ಜಿಲ್ಲೆಯ ಅಂಕೋಲ(ankola) ತಾಲೂಕಿನ ಕನಕನಹಳ್ಳಿಯಲ್ಲಿ ಕಳ್ಳನೊಬ್ಬ ತಾನು ಕಳ್ಳತನ ಮಾಡುವ ಅಂಗಡಿಗೆ ವಿದ್ಯುತ್ ಹರಿಸಿ ಅಂಗಡಿ ಮಾಲೀಕರು ಮಳಿಗೆಯ ಬಾಗಿಲು ತೆರೆದರೇ ವಿದ್ಯುತ್ ಶಾಕ್ ಹೊಡೆಯುವಂತೆ ಮಾಡಿ ಹೋಗುತಿದ್ದು ಈ ವಿಚಿತ್ರ ಕಯಾಲಿಯ ಕಳ್ಳನ ಕೃತ್ಯವೀಗ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

Advertisement

ಇದನ್ನೂ ಓದಿ:- Ankola| ಅಂಕೋಲದಲ್ಲಿ ನಾಡಬಾಂಬ್ ತೆಗೆದುಕೊಂಡು ಹೋದ ಮೃತ ನಾಗೇಂದ್ರ|ರಮ್ಯಾಳಿಂದ ಲವ್ ಸ್ಟೋರಿ ರಿವೀಲ್ 

 ಕನಕನಹಳ್ಳಿಯ ನಾರಾಯಣ ಸಿದ್ದಿ ಎಂಬಾತನೇ ಈ ವಿಚಿತ್ರ ಕಯಾಲಿ ಇರುವ ಕಳ್ಳ. ಈತ ತಮ್ಮ ಊರಿನ ಅಂಗಡಿಗಳನ್ನೇ ಟಾರ್ಗೆಟ್ ಮಾಡುತ್ತಾನೆ. ಒಂದೇ ಅಂಗಡಿಗೆ ನಾಲ್ಕೈದು ಬಾರಿ ಕಳ್ಳತನ ಮಾಡಿದ್ದಾನೆ. ರಾತ್ರಿವೇಳೆ ಊರಿನ ಅಂಗಡಿಗಳಿಗೆ ನುಗ್ಗುವ ಈತ ಅಂಗಡಿಯೊಳಗೆ ಹಣ ಹಾಗೂ ಚಿಕ್ಕಪುಟ್ಟ ವಸ್ತುಗಳನ್ನ ಕದ್ದು ತಾನು ಕಳ್ಳತನ ಮಾಡಿದ ನಂತರ ಅಂಗಡಿಯ ಬಾಗಿಲಿಗೆ ವಿದ್ಯುತ್ ಹರಿಸಿ ಪರಾರಿಯಾಗುತ್ತಾನೆ.

ಅಂಕೋಲದ (ankola)ಕನಕನಹಳ್ಳಿ ನರಸಿಂಹ ಭಾಗವತ ಅವರ ಅನ್ನಪೂರ್ಣ ಮಾರ್ಟ ಎಂಬ ಅಂಗಡಿಗೆ . ಐದು ಬಾರಿ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಮೊದಲು ಚಿಕ್ಕಪುಟ್ಟ ವಸ್ತುಗಳನ್ನ ಕಳ್ಳತನ ಮಾಡಿದ್ದರಿಂದ ಅಂಗಡಿ ಮಾಲೀಕರು ಸಹ ಸುಮ್ಮನೆ ಬಿಟ್ಟಿದ್ದರು. ಹೀಗೆ ಅಕ್ಕ ಪಕ್ಕದ ಅಂಗಡಿಯಲ್ಲೂ ಆತನೇ ಕಳ್ಳ ಎಂದು ಗೊತ್ತಿದ್ದರೂ ದೊಡ್ಡ ಮಟ್ಟದ ವಸ್ತುಗಳು ಕಳ್ಳತನ ಆಗದ ಕಾರಣ ದೂರು ನೀಡದೇ ಬಿಡುತಿದ್ದರು.

ಆದರೇ ಎಲ್ಲಿ ಕಳ್ಳತನ ಮಾಡುತ್ತಾನೋ ಅಲ್ಲಿ ವಿದ್ಯುತ್ ಶಾಕ್ ಹೊಡೆಸಿಕೊಳ್ಳುತಿದ್ದ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಗಳಿಗೆ ಹೇಗೆ ವಿದ್ಯುತ್ ಶಾಕ್ ಹೊಡೆಯುತಿತ್ತು ಎಂಬುದು ಅರಿವಿಗೆ ಬರುತ್ತಿರಲಿಲ್ಲ. ಆದರೇ ಅನ್ನಪೂರ್ಣ ಮಾರ್ಟ ನಲ್ಲಿ ಈತ ಹಲವುಬಾರಿ ಕಳ್ಳತನ ಮಾಡಿದಾಗ ಸಿಸಿ ಟಿವಿ ಹಾಕಿಸಿದ್ದು ಇದರಲ್ಲಿ ಆತ ಮಾಡುತಿದ್ದ ಕೃತ್ಯ ಬಯಲಾಗಿದೆ. ಈ ಹಿನ್ನಲೆಯಲ್ಲಿ ಅಂಕೋಲ ಠಾಣೆಯಲ್ಲಿ ನಾರಾಯಣ ಸಿದ್ದಿ ಮೇಲೆ ದೂರು ದಾಖಲಿಸಿದ್ದಾರೆ. ಆದರೇ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಓಡಾಡುತಿದ್ದು ಆಗಾಗ ಅಂಗಡಿಗೆ ಕನ್ನ ಹಾಕಿ ಕಳ್ಳತನ ಮಾಡುವುದನ್ನ ಮುಂದುವರೆಸಿದ್ದು , ವಿದ್ಯುತ್ ಶಾಕ್ ಕೊಡುವ ಖಯಾಲಿ ಮುಂದುವರೆಸಿದ್ದಾನೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement