Honnavar|ಮಾಮನ ಸ್ವಾಮೀಜಿ ವಿರುದ್ಧ ಅಪಸ್ವರ | ಹೊನ್ನಾವರ ಮಠದಲ್ಲಿ ಗಲಾಟೆ ವಿಡಿಯೋ ವೈರಲ್ .
ವಿಡುಯೋ ನೋಡಿ:-
ಕಾರವಾರ :-ವೈಷ್ಯ ವಾಣಿ ಸಮಾಜದ ಶ್ರೀವಾಮನ ಸ್ವಾಮೀಜಿ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಕಾರವಾರದ ಅಜಿತ್ ಪೊಕಲೆ ಎನ್ನುವವರ ಮೇಲೆ ಸ್ವಾಮೀಜಿ ಪರ ಇರುವ ಗುಂಪು ಹಲ್ಲೆಮಾಡಿದ ಘಟನೆ ಹೊನ್ನಾವರ (honnavar) ತಾಲೂಕಿನ ಹಳದಿಪುರ ಗ್ರಾಮದ ಶ್ರೀಸಂಸ್ಥಾನ ಕೃಷ್ಣಾಶ್ರಮ ಮಠದಲ್ಲಿ ನಡೆದಿದೆ.
ಇದನ್ನೂ ಓದಿ:-Honnavar| ಅಪ್ರಾಪ್ತೆ ಬಾಲಕಿ ಅತ್ಯಾಚಾರ- ಮಂಕಿ ಠಾಣೆ ಪಿ.ಎಸ್.ಐ ಬಂಧನ
ಮಠದ ಗುರುಗಳಾದ ಶ್ರೀ ವಾಮನಾಶ್ರಮ ಸ್ವಾಮೀಜಿ ವಿರುದ್ಧ ಹಣ ದುರುಪಯೋಗ ಸೇರಿದಂತೆ ಕೆಲವು ಆರೋಪಗಳು ಇದ್ದು ,ಈ ಕುರಿತು ಪರ ವಿರೋಧಗಳು ಕೇಳಿಬಂದಿದ್ದವು. ಸಭೆಯಲ್ಲಿ ಕಾರವಾರದ ಅಜಿತ್ ಪೊಕಲೆ ಸ್ವಾಮೀಜಿ ವಿರುದ್ಧ ಆರೋಪ ಮಾಡಿದ್ದರು ಎನ್ನಲಾಗಿದ್ದು ಇದರಿಂದ ಸ್ವಾಮೀಜಿಗಳ ಅನುಯಾಯಿಗಳಲ್ಲಿ ಅಸಮದಾನ ಮೂಡಿತ್ತು. ಸಭೆ ಮುಗಿದ ಬಳಿಕ ಸ್ವಾಮೀಜಿಯ ಶಿಷ್ಯರು ಹಲ್ಲೆ ಮಾಡಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:-Honnavar | ಅಝಾನ್ ಮೊಳಗಿಸುತ್ತಿದ್ದ ವೇಳೆ ಹೃದಯಾಘಾತ – ಮೌಲ್ವಿ ಸಾವು | CCTV ದೃಶ್ಯ ವೈರಲ್
ಸಭೆ ನಂತರ ಅಜಿತ್ ಪೊಕಳೆ ಮೇಲೆ ಮನಬಂದಂತೆ ಹಲ್ಲೆಮಾಡಿದ ನಂತರ ಮಠದಿಂದ ಅಜಿತ್ ಪೊಕಲೆ ಯನ್ನುಹೊರ ದಬ್ಬಿದ ಸ್ವಾಮೀಜಿ ಅವರ ಕೆಲ ಶಿಷ್ಯರು ದಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:-Honnavar | ಪಂಪ್ ಸೆಟ್ ನ ವಿದ್ಯುತ್ ತಂತಿ ತಾಗಿ ಐದು ವರ್ಷದ ಮಗು ಸಾವು
ಘಟನೆ ಬಗ್ಗೆ ದೂರು ಕೊಡಲು ಮುಂದಾದ ಅಜಿತ್ ಪೊಕಳೆ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.
