Uttara kannada|ಭೂಕುಸಿತ ಭೀತಿ ಹಲವುಕಡೆ ವಾಹನಗಳಿಗೆ ನಿರ್ಭಂಧ -ಜಿಲ್ಲಾಧಿಕಾರಿ ಹೇಳಿದ್ದೇನು-ವಿಡಿಯೋ ನೋಡಿ
ಕಾರವಾರ: ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭೂಕುಸಿತ ಹಾಗೂ ಇತರೆ ಅವಘಡಗಳನ್ನು ತಡೆಗಟ್ಟುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿಯ ವಿವಿಧ ಅಪಾಯದ ಪ್ರದೇಶಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಇದಲ್ಲದೇ ಈ ಪ್ರದೇಶದಲ್ಲಿ ಒಟ್ಟು 200 ಕ್ಕೂ ಹೆಚ್ಚು ಸ್ಪಾಟರ್ ಗಳ ನೇಮಕ ಮಾಡಲಾಗಿದೆ.
ಇದನ್ನೂ ಓದಿ:-Landslide: ಬಾಳೆಬರೆ ಘಾಟಿಯಲ್ಲಿ ಭಾರಿ ವಾಹನಕ್ಕೆ ನಿಷೇಧ – ಚಾರಕ್ಕೆ ಪರ್ಯಾಯ ವ್ಯವಸ್ಥೆ
ನಿಷೇಧಿತ ಆದೇಶವು ಮಳೆಗಾಲ ಮುಕ್ತಾಯವಾಗುವವರೆಗೆ ಈ ಆದೇಶ ಜಾರಿಯಲ್ಲಿರಲಿದೆ.
ಜಿಲ್ಲೆಯಲ್ಲಿ 294 ಭೂಕುಸಿತ ಅಪಾಯ ಪ್ರದೇಶಗಳಿದ್ದು ಇವುಗಳಲ್ಲಿ ಸೂಕ್ಷ್ಮ ಪ್ರದೇಶವನ್ನು ಸಹ ಗುರುತಿಸಲಾಗಿದೆ.
ಕಾರವಾರ ತಾಲೂಕಿನ ಲಂಡನ್ ಬ್ರಿಡ್ಜ್‌ನಿಂದ ಬಿನಾಗಾ ಸುರಂಗದ ಅಂತ್ಯದವರೆಗೆ, ಅರ್ಗಾದ ಸಂಕ್ರುಬಾಗ್ ಘಟ್ಟ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ.
ಅಂಕೋಲಾ(ankola) ತಾಲೂಕಿನ ಶಿರೂರು ಗ್ರಾಮದಲ್ಲಿ ಐಆರ್‌ಬಿ ಸಂಸ್ಥೆ ಗುಡ್ಡ ಕೊರೆದ ಪ್ರದೇಶ ಹಾಗೂ ಬೆಳ್ಳೆನ್ ರೈಲ್ವೆ ಸೇತುವೆ ಸಮೀಪದ ಹೆದ್ದಾರಿ ಭಾಗದಲ್ಲೂ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಹೊನ್ನಾವರ(honnavar) ತಾಲೂಕಿನ ಗುಣಗುಣಕೇರಿ, ಪ್ರಮೀಳಾ ರೆಸ್ಟೋರೆಂಟ್ ಸಮೀಪ, ಮೂಡಕಣಿ (ಖರ್ವಾ ಕ್ರಾಸ್), ಸೂಳೆಮೂರ್ಕಿ ಕ್ರಾಸ್ ಹಾಗೂ ಕರ್ಕಿನಾಕಾ ಭಾಗಗಳು ನಿಷೇಧಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿವೆ.
ಇದನ್ನೂ ಓದಿ:-Honnavar| ಅಪ್ರಾಪ್ತೆ ಬಾಲಕಿ ಅತ್ಯಾಚಾರ- ಮಂಕಿ ಠಾಣೆ ಪಿ.ಎಸ್.ಐ ಬಂಧನ
ಕುಮಟಾ ತಾಲೂಕಿನ ದಿವಗಿ ಹಾಗೂ ದುಂಡಕುಳಿ ಪ್ರದೇಶಗಳಲ್ಲಿ, ಶಿರಸಿ ತಾಲೂಕಿನ ವೆಂಕಟೇಶತೀರ್ಥ ತಿರುವು, ಮೊಸಳಗುಂಡಿ ಸೇತುವೆ, ಬಂಡಲಘಾಟ್–ಮುಂಗನ ರಸ್ತೆ ಕ್ರಾಸ್ ಹಾಗೂ ದೇವಿಮನೆ ಕಲ್ಲುಹೊಳೆ ಸಮೀಪವೂ ವಾಹನ ನಿಲುಗಡೆಗೆ ಅವಕಾಶವನ್ನ ನಿರ್ಬಂಧಿಸಿದೆ.
ಸಮುದ್ರತೀರಕ್ಕಿಲ್ಲ ನಿರ್ಬಂಧ.
ಜಿಲ್ಲೆಯ ಕರಾವಳಿ ತೀರ ಭಾಗದಲ್ಲಿ ಪ್ರವಾಸಿಗರಿಗೆ ಯಾವುದೇ ನಿರ್ಬಂಧವಿಲ್ಲ. ಪ್ರಮುಖ ಸ್ಥಳಗಳಲ್ಲಿ ಭದ್ರತೆ ದೃಷ್ಟಿಯಿಂದ ಹೋಮ್ ಗಾರ್ಡಗಳನ್ನ ನಿಯೋಜನೆ ಮಾಡಲಾಗಿದೆ. ಸಿದ್ದಾಪುರ ಭಾಗದ ಜೋಗ ಜಲಪಾತ ಬೀಳುವ ಸ್ಥಳಕ್ಕೆ ತೆರಳಲು ನಿರ್ಬಂಧ ವಿಧಿಸಿದೆ. ಇದನ್ನು ಹೊರತಾಗಿ ಯಾವುದೇ ನಿರ್ಬಂಧವಿಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ತಿಳಿಸಿದ್ದಾರೆ.
ಇದನ್ನೂ ಓದಿ:-Murdeshwara|ಜಮಖಂಡಿಯ 102 ವರ್ಷದ ಪುರಾತನ ಆಂಜನೇಯ ಮೂರ್ತಿ ಮುರ್ಡೇಶ್ವರ ಸಮುದ್ರದಲ್ಲಿ!
ಪ್ರವಾಹ ಎದುರಿಸಲು ಸಿದ್ದತೆ.
ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭದಿಂದ ಈವರೆಗೆ 58 ಮನೆಗಳು ಹಾನಿಯಾದರೇ,ಎರಡು ಮನೆಗಳು ಸಂಪೂರ್ಣ ಹಾನಿಯಾಗಿದೆ.ಎರಡು ಜಾನುವಾರು ಅಸುನೀಗಿದೆ. ಭೂಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ತುರ್ತು ಸ್ಪಂದನೆಗೆ 24 ಗಂಟೆಗಳ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು ,ಪ್ರತಿ ಸ್ಥಳಗಳಲ್ಲೂ ಕಾರ್ಯಾಚರಣೆ ನಡೆಸಲು ತಂಡ ಸಿದ್ದಮಾಡಿದ್ದು ,ಕಾಳಜಿ ಕೇಂದ್ರ ತೆರೆಯಲು ಸ್ಥಳ ಸಹ ಗುರುತಿಸಲಾಗಿದ್ದು ,ಇದೇ ಮೊದಲಬಾರಿಗೆ ರಕ್ಷಿತ ಜಾನುವಾರುಗಳಿಗೆ ಕ್ಯಾಟಲ್ ರಿಲೀಪ್ ಸೆಂಟರ್ ಸಹ ತೆರೆಯಲು ಸ್ಥಳ ಗುರುತಿಸಲಾಗಿದೆ.
