Honnavar| ಅಪ್ರಾಪ್ತೆ ಬಾಲಕಿ ಅತ್ಯಾಚಾರ- ಮಂಕಿ ಠಾಣೆ ಪಿ.ಎಸ್.ಐ ಬಂಧನ.
ಕಾರವಾರ :- ಅಪ್ರಾಪ್ತೆಯ ಮೇಲೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ (manki) ಠಾಣೆ ಪಿ.ಎಸ್.ಐ ಅಭಿನಂದನ್ ಗೌಡ ಅತ್ಯಾಚಾರ ಮಾಡಿರುವ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Karwar|ಆಸೆ ಇದೆ ಎಂದು ಎಲ್ಲಾ ಶಾಸಕರನ್ನ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ-ಯುಟಿ ಖಾದರ್
ಉತ್ತರ ಕನ್ನಡ ಜಿಲ್ಲೆಯ ಮಂಕಿ ಠಾಣೆಯ ಪಿ.ಎಸ್.ಐ ಅಭಿನಂದನ್ ಗೌಡ ಬಂಧಿತ ಪಿ.ಎಸ್.ಐ ಆಗಿದ್ದು 16 ವರ್ಷದ ಬಾಲಕಿಯನ್ನ ಪುಸಲಾಯಿಸಿ ಭಟ್ಕಳಕ್ಕೆ ಕರೆತಂದು ಇಲ್ಲಿನ ರಾಯಲ್ ಓಕ್ ಲಾಡ್ಡ್ ನಲ್ಲಿ ಅಪ್ರಾಪ್ತೆಗೆ ಅತ್ಯಾಚಾರ ಮಾಡಿದ ಕುರಿತು ಸಂತ್ರಸ್ತ ಬಾಲಕಿ ಕುಟುಂಬದವರು ದೂರಿನ ಮೇಲೆ ಭಟ್ಕಳ ನಗರ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
ಇದನ್ನೂ ಓದಿ:-Bhatkal| ಮುರಿನಕಟ್ಟೆ ಸಂಘರ್ಷ ಗುಪ್ತಚರ ಇಲಾಖೆ ವರದಿ- ಭಟ್ಕಳದ 60 ಜನ ರೌಡಿಶೀಟರ್ ಗೆ ನೋಟಿಸ್
ರಾಮನಗರ ಜಿಲ್ಲೆಯ ಕನಕಪುರ ಮೂಲದ ಅಭಿನಂದನ್ ಗೌಡ ಮುಖ್ಯಮಂತ್ರಿ ಡಿ.ಕೆ ಶಿವಕಯಮಾರ್ ರವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯಾಗಿದ್ದು,
ಈ ಹಿನ್ನಲೆಯನ್ನ ಬಳಸಿ ಕೆಲವು ತಿಂಗಳ ಹಿಂದೆಯಷ್ಟೇ ಮಂಕಿ ಠಾಣೆಗೆ ಎಲ್.ಎಂಡ್.ಓ ಆಗಿ ವರ್ಗಾವಣೆ ಗೊಂಡಿದ್ದನು. ಭಟ್ಕಳದಲ್ಲಿ ಮುರಿನ ಕಟ್ಟೆಯ ವಿವಾಧ ಸಂದರ್ಭದಲ್ಲಿ ರಾಯಲ್ ಓಕ್ ನಲ್ಲಿ ಪೊಲೀಸರಿಗೆ ವಸತಿ ವ್ಯವಸ್ತೆ ಮಾಡಲಾಗಿದ್ದು ಈ ಸಂದರ್ಭದಲ್ಲಿ 16 ವರ್ಷದ ಬಾಲಕಿಯನ್ನ ಕರೆಸಿಕೊಂಡು ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದ್ದು ,ಕೆಲವು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಪಿ.ಎಸ್.ಐ ಅನ್ನು ನಿನ್ನೆ ರಾತ್ರಿ ಭಟ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.







