Karwar|ಆಸೆ ಇದೆ ಎಂದು ಎಲ್ಲಾ ಶಾಸಕರನ್ನ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ-ಯುಟಿ ಖಾದರ್ 

Karwar:U.T. Khader | ಎಲ್ಲಾ ಶಾಸಕರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ: ಯು.ಟಿ. ಖಾದರ್ ಏನಂದ್ರು ಸುದ್ದಿ ಓದಿ
ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಆರೋಗ್ಯ ಸಚಿವ ಯು.ಟಿ. ಖಾದರ್; ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡುತ್ತಿರುವ ದೃಶ್ಯ. ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಆರೋಗ್ಯ ಸಚಿವ ಯು.ಟಿ. ಖಾದರ್; ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡುತ್ತಿರುವ ದೃಶ್ಯ.
ಯು.ಟಿ.ಖಾದರ್.ಆರೋಗ್ಯ ಸಚಿವ

Karwar|ಆಸೆ ಇದೆ ಎಂದು ಎಲ್ಲಾ ಶಾಸಕರನ್ನ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ-ಯುಟಿ ಖಾದರ್

 

ಕಾರವಾರ :- ಸಚಿವ ಸಂಪುಟ ವಿಸ್ತರಣೆ ಸಿಎಂ ಹೈಕಮಾಂಡ್ ತಿರ್ಮಾನ ತೆಗೆದುಕೊಳ್ಳುತ್ತದೆ,ಯಾವ ಶಾಸಕರಲ್ಲೂ ಅಸಮಧಾನ ವಿಲ್ಲ ಎಂದ ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದರು.

ಇದನ್ನೂ ಓದಿ:-Karwar| ಮಾಧವನ ದೂರು-ಕಾರಾಗೃಹ ಸುಪರಿಡೆಂಟ್ ವಾಹನ ಜಪ್ತಿ!

Advertisement

ಇಂದು ಕಾರವಾರದಲ್ಲಿ (karwar) ಜಿಲ್ಲಾ ಪ್ರಕೃತಿವಿಕೋಪ ಕುರಿತು ಅಧಿಕಾರಿಗಳ ಸಭೆಗೆ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು 34 ಸಚಿವರ ಕೆಲಸವನ್ನ ಈಗ 14 ಸಚಿವರು ಮಾಡುತ್ತಿದ್ದಾರೆ,

ಸಚಿವ ಸಂಪುಟ ವಿಸ್ತರಣೆ ತಡ ಅಗುತ್ತಿರುವುದಕ್ಕೆ ಯಾವುದೇ ಅಸಮಾಧಾನ ಇಲ್ಲ,ಶಾಸಕರೆಲ್ಲರೂ ಒಗ್ಗಟ್ಟಾಗಿದ್ದಾರೆ,ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ, ಜಾತಿ, ಪ್ರದೇಶವಾರು ಎಲ್ಲವನ್ನೂ ನೋಡಿ ಸಚಿವರನ್ನಾಗಿ ಮಾಡಲಾಗುತ್ತದೆ.ಮುಂದಿನ ಎರಡು ವರ್ಷ ಸಿಎಂ ನೇತೃತ್ವದಲ್ಲಿ ಉತ್ತಮ ಆಡಳಿತ ಸರ್ಕಾರ ನೀಡಲಿದೆ ಎಂದ ಅವರು ಸಿಎಂ‌ ಡಿಕೆ ಶಿವಕುಮಾರ್‌ ಹೇಳುವ ಬದಲು ಸಿಎಂ ಸಿದ್ದರಾಮಯ್ಯ ಎಂದು ಬಾಯ್ತಪ್ಪಿ ಹೇಳಿದರು.

ಇನ್ನು  ರಾಜ್ಯದಲ್ಲಿ ಎಸ್ಐಆರ್ ಚುನಾವಣಾ ಆಯೋಗ ನಡೆಸುತ್ತದೆ, ಇದರಲ್ಲಿ ಯಾರು ರಾಜಕೀಯ ಮಾಡಲು ಸಾಧ್ಯವಿಲ್ಲ,ರಾಜಕೀಯ ಆರೋಪ ಮಾಡುವ ಅಗತ್ಯ ಯಾರಿಗಿಲ್ಲ,ಚುನಾವಣಾ ಆಯೋಗ ಇದರ ಬಗ್ಗೆ ತಿರ್ಮಾನ ತೆಗೆದುಕೊಳ್ಳುತ್ತದೆ,ರಾಜಕೀಯವಾಗಿ ಆಡಳಿಯ ಪಕ್ಷದ ಮೇಲೆ‌ ಆರೋಪ ಮಾಡಬಾರದು,ಚುನಾವಣಾ‌ ಆಯೋಗದ ಕೆಲಸವನ್ನು ಸರ್ಕಾರ ಹೇಗೆ ವಹಿಸಿಕೊಳ್ಳಲಿದೆ?ಬೇರೆ ಪಕ್ಷದವರು ಏನಾದರು ಕೇಳಬೇಕಾದರೆ ಚುನಾವಣಾ ಆಯೋಗಕ್ಕೆ ಕೇಳಲಿ.ಚುನಾವಣೆ ಆಯೋಗಕ್ಕೆ ದೂರು ಕೊಡುವ ಬದಲು ಆರೋಪ ಮಾಡುವುದು ಏಕೆ? ಯಾಗೆ ದೂರು ಕೊಡಲಿಲ್ಲ  ಎಂದು ಸಚಿವ ಕುಮಾರಸ್ವಾಮಿ ,ಶೋಭಾ ಕರಂದ್ಲಾಜೆ ಆರೋಪಕ್ಕೆ ಪ್ರಶ್ನೆ ಮಾಡಿದರು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement