Karwar| ಭಾರಿ ಮಳೆ ಗಾಳಿ ತತ್ತರಿಸಿದ ಕರಾವಳಿ ಎಲ್ಲಿ ಏನು ಹಾನಿ

Karwar-ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಸಿದ್ದಾಪುರ ಹಾಗೂ ಜೋಯಿಡಾ ಭಾಗಗಳಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದ ಮರಗಳು ಉರುಳಿ, ರಸ್ತೆ ಕುಸಿತ ಹಾಗೂ ಮನೆಗಳಿಗೆ ಹಾನಿಯಾಗಿದೆ. ವಿವರ ನೋಡಿ
Heavy rain and strong winds cause fallen trees, road collapse, and property damage in Karwar, Honnavar, Siddapur, and Joida of Uttara Kannada district during the monsoon. Heavy rain and strong winds cause fallen trees, road collapse, and property damage in Karwar, Honnavar, Siddapur, and Joida of Uttara Kannada district during the monsoon.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಹಾನಿ ಕುರಿತು ಚಿತ್ರ.

Karwar| ಭಾರಿ ಮಳೆ ಗಾಳಿ ತತ್ತರಿಸಿದ ಕರಾವಳಿ ಎಲ್ಲಿ ಏನು ಹಾನಿ.

 

ಕಾರವಾರ  :- ಉತ್ತರ ಕನ್ನಡ (Uttarakannada) ಜಿಲ್ಲೆಯ ಕರಾವಳಿಯಲ್ಲಿ ಅಬ್ಬರದ ಗಾಳಿ ಜೊತೆಗೆ ಮಳೆ(rain) ಸುರಿಯುತಿದ್ದು ಗಾಳಿಯ ರಭಸಕ್ಕೆ ಹಲವು ಕಡೆ ಹಾನಿ ಸಂಭವಿಸಿದೆ. ಜಿಲ್ಲೆಯ ಕಾರವಾರ ದಲ್ಲಿ ಮಿಂಕ್ರಿಷ್ ರಸ್ತೆಯಲ್ಲಿ ಮರದ ಕೊಂಬೆ ತುಂಡಾಗಿ ಕಾರಿಗೆ ಹಾನಿ ಸಂಭವಿಸಿದರೇ ಜಿಲ್ಲೆಯ ಸಿದ್ದಾಪುರದ ಕಾಳೇನಹಳ್ಳಿಯ ಮುಖ್ಯರಸ್ತೆಯಲ್ಲಿ ಚಲಿಸುತಿದ್ದ ಕಾರಿನ ಮೇಲೆ ಮರ ಬಿದ್ದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಇನ್ನು ಕರಾವಳಿಯ ಭಾಗದಲ್ಲಿ ಸಮುದ್ರ ಕ್ಷುದ್ರವಾಗಿದ್ದು ಗಾಳಿಯ ಅಬ್ಬರಕ್ಕೆ ಕಡಲ ಕಿನಾರೆಯ ಜನ ಬೆಚ್ಚಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಕಚೇರಿ ಸಂಪೂರ್ಣ ಹಾನಿ.

Rain news uttara kannada
ಕಾರವಾರದಲ್ಲಿ ಸಿವಿಲ್ ನ್ಯಾಯಾಲಯದ ಕಟ್ಟಡಕ್ಕೆ ಹಾನಿ

ಕಾರವಾರದಲ್ಲಿ ಬಾರೀ ಗಾಳಿಗೆ ನಗರಸಭೆ ಪಕ್ಕದ JMFC ನ್ಯಾಯಾಲಯದ ಎಪಿಪಿ ಕಚೇರಿ ಮೇಲೆ ಬೃಹದಾಕಾರದ ಮರ ಬಿದ್ದು ಸರ್ಕಾರಿ ಸಹಾಯಕ ಅಭಿಯೋಜಕರ ಕಚೇರಿ ಸಂಪೂರ್ಣ ದ್ವಂಸವಾಗಿದ್ದು

Advertisement

ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಕಚೇರಿಯಲ್ಲಿನ ಕಡತಗಳನ್ನ ತೆರವುಗೊಳಿಸಿದರು.

ಇದನ್ನೂ ಓದಿ:-Lokayukta|6 ಲಕ್ಷ ಲಂಚ ಸ್ವೀಕರಿಸುವ ವೇಳೆ ವಾಣಿಜ್ಯ ತೆರಿಗೆ ಡಿಸಿ ಲೋಕಾಯುಕ್ತ ಬಲೆಗೆ

ಇನ್ನು ಹೊನ್ನಾವರದಿಂದ ಸಿದ್ದಾಪುರ (siddapur) ಮಾರ್ಗದ ಕೆರೆಮನೆ ಬಳಿ ರಸ್ತೆ ಕುಸಿದಿದ್ದು ಮನೆಯ ಮೇಲೆ ಮಣ್ಣು ಬಿದ್ದಿದೆ.ಇದಲ್ಲದೇ ಹೊನ್ನಾವರದಲ್ಲಿ ಮನೆಯ ಮೇಲೆ ಮರ ಬಿದ್ದು ಮನೆಗೆ ಸಂಪೂರ್ಣ ಹಾನಿ ಸಂಭವಿಸಿದೆ.ಜೋಯಿಡಾ ತಾಲೂಕಿನ ಗಣೇಶ ಗಲ್ಲಿಗೆ ಹೋಗುವ ಮುಖ್ಯರಸ್ತೆಯಲ್ಲಿ ರಸ್ತೆ ಕುಸಿದು ಕಾರೊಂದು ಸಿಲುಕಿಕೊಂಡು ಸಂಚಾರಕ್ಕೆ ಅಡಚಣೆಯಾಯಿತು.ಅದೃಷ್ಟವಶಾತ್ ಕಾರಿನಲ್ಲಿರುವವರಿಗೆ ಯಾವುದೇ ತೊಂದರೆ ಸಂಭವಿಸಲಿಲ್ಲ.

ಆರೆಂಜ್ ಅಲರ್ಟ

Rain news uttara Kannada
ಅಂಕೋಲದಲ್ಲಿ ಕಡಲ ಕೊರತಕ್ಕೆ ಮನೆ ಬಿದ್ದಿರುವುದು

ಜಿಲ್ಲೆಯಾಧ್ಯಾಂತ ಜುಲೈ 8 ರ ವರೆಗೆ ಗಾಳಿ ಸಹಿತ ಅಬ್ಬರದ ಮಳೆಯ ಸೂಚನೆಯನ್ನ ಹವಾಮಾನ ಇಲಾಖೆ ನೀಡಿದ್ದು ಗಾಳಿಯು ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಗುಡ್ಡ ಹಾಗೂ ಅರಣ್ಯ ಪ್ರದೇಶದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಸಂಚರಿಸಲು ಸೂಚಿಸಲಾಗಿದ್ದು ಮರದ ಕೆಳಗೆ,ಸಮುದ್ರ,ನದಿ  ಭಾಗದಲ್ಲಿ ತೆರಳದಂತೆ ಸೂಚನೆ ನೀಡಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement