Karwar| ಮಳೆಯ ನಡುವೆಯೂ ದಾಖಲೆ ಬರೆದ ಕೈಗಾ ಅಣುಸ್ಥಾವರ -ವಿವರ ಇಲ್ಲಿದೆ 

Karwar:-ಕಾರವಾರದ ಕೈಗಾ ಅಣುಸ್ಥಾವರದಲ್ಲಿ 5 ಮತ್ತು 6ನೇ ಘಟಕದ ಭಾರಜಲ ರಿಯಾಕ್ಟರ್‌ಗೆ ಏಕಶಿಲಾ ಕಾಂಕ್ರೀಟ್ ಅಳವಡಿಕೆ ಕಾಮಗಾರಿ ದಾಖಲೆಯ ವೇಗದಲ್ಲಿ ಪೂರ್ಣಗೊಂಡಿದೆ. 2030ಕ್ಕೆ 700 ಮೆಗಾವ್ಯಾಟ್ ಉತ್ಪಾದನೆ ಗುರಿ.ವಿವರ ನೋಡಿ
ಕಾರವಾರದ ಕೈಗಾ ಅಣುಸ್ಥಾವರದಲ್ಲಿ 5 ಮತ್ತು 6ನೇ ಘಟಕದ ಭಾರಜಲ ರಿಯಾಕ್ಟರ್ ನಿರ್ಮಾಣಕ್ಕಾಗಿ ನಡೆಯುತ್ತಿರುವ ಏಕಶಿಲಾ ಕಾಂಕ್ರೀಟ್ ಅಳವಡಿಕೆ ಕಾಮಗಾರಿ. ಕಾರವಾರದ ಕೈಗಾ ಅಣುಸ್ಥಾವರದಲ್ಲಿ 5 ಮತ್ತು 6ನೇ ಘಟಕದ ಭಾರಜಲ ರಿಯಾಕ್ಟರ್ ನಿರ್ಮಾಣಕ್ಕಾಗಿ ನಡೆಯುತ್ತಿರುವ ಏಕಶಿಲಾ ಕಾಂಕ್ರೀಟ್ ಅಳವಡಿಕೆ ಕಾಮಗಾರಿ.

Karwar| ಮಳೆಯ ನಡುವೆಯೂ ದಾಖಲೆ ಬರೆದ ಕೈಗಾ ಅಣುಸ್ಥಾವರ -ವಿವರ ಇಲ್ಲಿದೆ.

ಕಾರವಾರ  :- ಉತ್ತರ ಕನ್ನಡ (uttara kannada)ಜಿಲ್ಲೆಯ ಕೈಗಾ ಅಣುಸ್ಥಾವರದಲ್ಲಿ ಅಬ್ಬರದ ಮಳೆಯ ನಡುವೆಯೂ 5 ಮತ್ತು 6 ನೇ ಘಟಕದ ಭಾರಜಲರಿಯಾಕ್ಟರ್ ಸ್ಥಾಪನೆಗೆ ಏಕಶಿಲಾ ಕಾಂಕ್ರೀಟ್ ಅಳವಡಿಕೆ ಕಾಮಗಾರಿನ್ನು ಪೂರ್ಣಗೊಳಿಸುವ ಮೂಲಕ ಇತಿಹಾಸ ಬರೆದಿದೆ. ದೇಶದಲ್ಲೇ ಪರಮಾಣು ವಿದ್ಯುತ್ ನಿಗಮದ ಇತಿಹಾಸದಲ್ಲಿ ಅತೀ ವೇಗವಾಗಿ ಪೂರ್ಣಗೊಂಡ ಕಾಮಗಾರಿ ಇದಾಗಿದೆ.ಮೇಘಾ ಇಂಜಿನಿಯರಿಂಗ್ ಎಂಡ್ ಇನಫ್ರಾಸ್ಟ್ರಕ್ಚರ್ಸ್ ಕಂಪನಿ ಈ ಕಾಮಾಗಾರಿಯನ್ನು ನಡೆಸುತಿದ್ದು ,ಘಟಕದಲ್ಲಿ ಪ್ರತಿ ಮೀಟರ್ ಗೆ 350 ಕೆಜಿ ಕಬ್ಬಿಣದ ಸಾಂದ್ರತೆಯೊಂದಿಗೆ 7250 ಘನ ಮೀಟರ್ ನಷ್ಟು ನಿರಂತರವಾಗಿ ಸುರಿಯಲಾಗಿದೆ.

ಇದನ್ನೂ ಓದಿ:-Karwar| ಭಾರಿ ಮಳೆ ಗಾಳಿ ತತ್ತರಿಸಿದ ಕರಾವಳಿ ಎಲ್ಲಿ ಏನು ಹಾನಿ

ಪ್ರತಿ ಗಂಟೆಗೆ 360 ಘನ ಮೀಟರ್ ಸಾಮರ್ಥ್ಯದ ತಾಪಮಾನ ನಿಯಂತ್ರಿತ ಕಾಂಕ್ರಿಟ್ ಉತ್ಪಾದನಾ ಘಟಕ ಸ್ಥಾಪಿಸಿ ಗಂಟೆಗೆ 340 ಘನ ಮೀಟರ್  ಸಾಮರ್ಥ್ಯದ ಪಂಪ್ ಅನ್ನು ಅಳವಡಿಸಲಾಗಿತ್ತು. ಕಾಂಕ್ರೀಟ್ ಮಿಶ್ರಣವನ್ನು ತಂಪಾಗಿಸಲು 400 ಟನ್ ಸಾಮರ್ಥ್ಯದ ಮಂಜುಗಡ್ಡೆ ಸಂಗ್ರಹಣಾ ಗೋದಾಮು ನಿರ್ಮಿಸಿ 2600 ಟನ್ ಸಾಮರ್ಥ್ಯದ ಹಾರುವ ಬೂದಿ ಹಾಗೂ ಸಿಮೆಂಟ್ ಸಂಗ್ರಹಣೆಯನ್ನು ಮಾಡಿಕೊಳ್ಳಲಾಗುತ್ತು. ಇದಲ್ಲದೇ ಮಳೆಯಿಂದ ರಕ್ಷಣೆ ಪಡೆಯಲು ಸುಮಾರು 75 ಮೀಟರ್ ವ್ಯಾಸದ ಬೃಹತ್ ರಕ್ಷಣಾ ಪರದೆಯನ್ನು ಅಳವಡಿಸಲಾಗಿದ್ದು ದಿನದ 24 ತಾಸುಗಳು ಕಾರ್ಯ ನಡೆಸಲಾಗುತ್ತಿದೆ.ಈ ಘಟಕವು ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನೇ ಬಳಸಿ ನಿರ್ಮಾಣ ಮಾಡಲಾಗುತಿದ್ದು 700 ಮೆಗಾವ್ಯಾಟ್ ಉತ್ಪಾದನೆ ಗುರಿ ಹೊಂದಿರುವ ಈ ಘಟಕ 2030 ರ ವೇಳೆಗೆ ಉದ್ಘಾಟನೆ ಮಾಡುವ ಗುರಿ ಹೊಂದಿದೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement