Gokarna| ಗೋಕರ್ಣದಲ್ಲಿ ಶ್ವಾನದೊಂದಿಗೆ ದಿಢೀರ್ ದಾಳಿ -ಸಿಕ್ಕಿಬಿದ್ರು ಮಾದಕ ವೆಸನಿಗಳು.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಗೋಕರ್ಣ ದಲ್ಲಿ ಮಾದಕ ವಸ್ತುಗಳ ಪತ್ತೆಗಾಗಿ ಗೋಕರ್ಣ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು.
ಗೋಕರ್ಣ (gokarna) ಠಾಣೆ ಸಿಪಿಐ ಶ್ರೀಧರ್ ನೇತ್ರತ್ವದಲ್ಲಿ ಶ್ವಾನದಳದ ಸೂಪಾ ಶ್ವಾನವು ಸಿಬ್ಬಂದಿಗಳೊಂದಿಗೆ ರೆಸಾರ್ಟ ,ಬೀಚ್ ಹೀಗೆ ಬಹುತೇಕ ಎಲ್ಲಾ ಭಾಗದಲ್ಲಿ ತಪಾಸಣೆ ನಡೆಸಲಾಯಿತು.
ಇದನ್ನೂ ಓದಿ:-Gokarna|ಗೋಕರ್ಣದ ಮಹಾಬಲೇಶ್ವರ ನ ಗರ್ಭಗುಡಿ ತುಂಬಿದ ಕೊಳಚೆ ನೀರು!ರಸ್ತೆ ತುಂಬಿದ ನೀರು
ಪ್ರವಾಸಿ ಸ್ಥಳದಲ್ಲಿ ಮಾದಕ ವಸ್ತು ಬಳಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆಸಿದ್ದು , ಗೋಕರ್ಣ ಭಾಗದ ಮೇನ್ ಬೀಚ್, ಕುಡ್ಲೆ ಬೀಚ್, ರುದ್ರಪಾದ, ಡುಬ್ಬನಶಶಿ, ನಾಡುಮಾಸ್ಕೇರಿ ಗಂಗೆಕೊಳ್ಳ ಬೀಚ್ ಗಳಲ್ಲಿ ನೂರಕ್ಕೂ ಹೆಚ್ಚು ರೆಸಾರ್ಟ್ ಗಳನ್ನು ಪರಿಶೀಲಿಸಲಾಯಿತು.
ಇದನ್ನೂ ಓದಿ:-Gokarna| 30 ರಿಂದ 40 ಕೋಟಿಯಲ್ಲಿ ಮಹಾಬಲೇಶ್ವರ ಸನ್ನಿದಿ ಅಭಿವೃದ್ಧಿಗೆ ನೀಲನಕ್ಷೆ ಸಿದ್ದ!
ಅಲ್ಲದೇ ಗೋಕರ್ಣ, ದಂಡೇಬಾಗ್. ಬೆಲೆಹಿತ್ಲು, ಬಿಜ್ಜುರು ತಲಗೇರಿ ಚೌಡಗೇರಿ ಗ್ರಾಮಗಳಲ್ಲಿ ಸಹ ಸಂಶಯಾಸ್ಪದ ವ್ಯಕ್ತಿಗಳ ಮನೆಗಳನ್ನು ತಪಾಸಣೆ ಮಾಡಲಾಗಿದ್ದು,
ಕಾರ್ಯಚರಣೆ ವೇಳೆ ಮೂರು ಜನ ಮಾದಕ ವಸ್ತು ಸೇವನೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ NDPS ಕಾಯ್ದೆ ಕಲಂ 27(b) ಅಡಿ ಕಾನೂನು ಕ್ರಮ ಜರುಗಿಸಲಾಯಿತು.
ಇದನ್ನೂ ಓದಿ:-Gokarna|ವಿದೇಶಿ ಟೂರಿಸ್ಟ್ ಮಾಹಿತಿ ನೀಡದ ಹೋಂ ಸ್ಟೇ| ಪ್ರಕರಣ ದಾಖಲಿಸಿದ ಪೋಲಿಸರು
ಗೋಕರ್ಣದಲ್ಲಿ ಮಾದಕ ವಸ್ತು ಬಳಕೆಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಶ್ರಮ ವಹಿಸುತಿದ್ದು ಮಾದಕ ವಸ್ತು ಸಾಗಾಟದಾರರು ಹಾಗೂ ಮಾರಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದು ,ಶ್ವಾನ ದಳವನ್ನು ಸಹ ಬಳಕೆ ಮಾಡಿಕೊಳ್ಳುವ ಮೂಲಕ ಮಾದಕ ವಸ್ತುಗಳ ಮುಕ್ತ ಗೋಕರ್ಣ ಮಾಡಲು ಪೊಲೀಸರು ಶ್ರಮಿಸುತಿದ್ದಾರೆ.
