Kumta | ಅಕ್ರಮ ಚಟುವಟಿಕೆಗೆ ನಟ್ಟು ಬೋಲ್ಟ್ ಟೈಟ್ ಮಾಡಿದ ಪೊಲೀಸ್ ಇಲಾಖೆ – ಸಿಪಿಐ ಕುಸುಮಾಧರ್ ಕೆಲಸಕ್ಕೆ ಮೆಚ್ಚುಗೆ

AddText 10 19 10.13.23 AddText 10 19 10.13.23

Kumta :- ಕುಮಟಾ ಠಾಣೆಗೆ ಸಿಪಿಐ ಆಗಿ ವರ್ಗಾವಣೆಗೊಂಡು ಬಂದ ಕುಸುಮಾಧರ್ ರವರು ಅಧಿಕಾರ ವಹಿಸಿಕೊಂಡ ಕೆಲವೇ ದಿನದಲ್ಲಿ ಅಕ್ರಮ ಚಟುವಟಿಕೆಗೆ ನಟ್ಟು ,ಬೋಲ್ಟ್ ಟೈಟ್ ಮಾಡಿದ್ದಾರೆ.

ಕುಮಟಾ (kumta) ತಾಲೂಕಿನಾಧ್ಯಾಂತ ಅಕ್ರಮ ಮರಳುಗಾರಿಕೆ, ಓಸಿ, ಮಟ್ಕಾ,ಅಂದರ್ ಬಾಹರ್ ಸೇರಿದಂತೆ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ದೂರುತ್ತಲೇ ಇದ್ದರು. ಆದರೇ ಇದೀಗ ಇಂತಹ ಚಟುವಟಿಕೆ ನಡೆಸುವವರಿಗೆ ಕರೆದು ವಾರ್ನ ಮಾಡಲಾಗಿದ್ದು ,ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಅಕ್ರಮ ದಂಧೆಕೋರರಿಗೆ ಇದೀಗ ಸಧ್ಯ ಎಲ್ಲವನ್ನೂ ಮುಚ್ಚಿಕೊಂಡು ಸುಮ್ಮನಿರುವಂತಾಗಿದ್ದು ,ಸಧ್ಯ ತಾತ್ಕಾಲಿಕವಾಗಿ ಅಕ್ರಮ ಚಟುವಟಿಕೆಗೆ ಅಲ್ಪ ವಿರಾಮ ಬಿದ್ದಿದೆ.

ಇದನ್ನೂ ಓದಿ:-Kumta | ನಾಡುಮಾಸ್ತಿಕೇರಿಯಲ್ಲಿ 62 ಅಕ್ರಮ ರೆಸಾರ್ಟ ತೆರವಿಗೆ ಕೋರ್ಟ ಆದೇಶ ಇದ್ರೂ ಅಧಿಕಾರಿಗಳ ಮೀನಾವೇಶ ! 

Advertisement

ಈ ಹಿಂದೆ ಕುಸಮಾಧರ್ ರವರು ಕಾರವಾರ ವಿಭಾಗದಲ್ಲಿ ಸಹ ಖಡಕ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ರಾಜಕೀಯ ಹಾಗೂ ಅಕ್ರಮ ದಂಧೆಕೋರರ ಪ್ರಭಾವದಿಂದ ತನ್ನದಲ್ಲದ ತಪ್ಪನ್ನ ತಲೆಯಮೇಲೆ ಹಾಕಿಕೊಳ್ಳುವ ಸ್ಥಿತಿ ಅವರದ್ದಾಗಿತ್ತು. ಕೊನೆಗೆ ನೋವಿನಿಂದಲೇ ಕಾರವಾರದಿಂದ ಬೇರೆಡೆ ವರ್ಗವಾದ ಅವರು ಕೊನೆಗೆ ಕರಾವಳಿ ಕಾವಲುಪಡೆ ನಂತರ ಇದೀಗ ಕುಮಟಾ ವಿಭಾಗಕ್ಕೆ ವರ್ಗಾವಣೆಗೊಂಡು ಬಂದಿದ್ದು ಉತ್ತಮ ಕೆಲಸ ಮಾಡುವ ಉತ್ಸಾಹ ಅವರಲ್ಲಿದ್ದು ,ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಮೊದಲ ಹೆಜ್ಜೆ ಇಟ್ಟಿದ್ದಾರೆ.

ಉತ್ತಮ ಕೆಲಸ ಮಾಡಿದರೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಹಾಗೂ ಅಮಾನತು ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನುವಂತಿದ್ದರೂ , ಒಂದಿಷ್ಟು ಒಳ್ಳೆ ಕೆಲಸಕ್ಕೆ ಕೈ ಹಾಕಿರುವುದು ಜನರು ಇವರ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement