Karwar| ಮಾಧ್ಯಮದಲ್ಲಿ ಬಿಜೆಪಿಗೆ ನೆಗಟೀವ್ ಪಬ್ಲಿಸಿಟಿ ಸಿಗುತ್ತಿಲ್ಲ ! ಸಚಿವ ಲಾಡ್ ಫುಲ್ ಗರಂ 

Karnataka Minister Santosh Lad addressing the media at a press conference in Karwar over the controversy surrounding the sting operation. Karnataka Minister Santosh Lad addressing the media at a press conference in Karwar over the controversy surrounding the sting operation.
Karnataka Minister Santosh Lad addressing the media at a press conference in Karwar over the controversy surrounding the sting operation.

ಸಚಿವರು ಏನಂದ್ರು? ವಿಡಿಯೋ ನೋಡಿ

ಕಾರವಾರ:-ಸ್ಟಿಂಗ್ ಆಪರೇಶನ್ ಯಾರು ಮಾಡುತಿದ್ದಾರೆ ಗೊತ್ತಿಲ್ಲ , ನಾಚಿಗೆಗೇಡಿನ ಸಂಗತಿ,ದೇಶಕ್ಕೆ, ರಾಜ್ಯಕ್ಕೆ ಒಳ್ಳೆದಾಗುವಂತದ್ದು ,ಬ್ರಷ್ಟಾಚಾರದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಿದರೇ ಮೆಚ್ಚುವಂತದ್ದು ಆದರೇ ಇದು ನಮ್ಮ ತಲೆಯನ್ನೇ ತೆಗೆದುಕೊಳ್ಳುವಂತಾಗುತ್ತದೆ ಎಂದು ಸ್ವ ಪಕ್ಷದವರೇ ಸ್ಟಿಂಗ್ ಆಪರೇಷನ್ ಮಾಡಿರುವ ಕುರಿತು ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ:-Karwar | ಈ ಊರಲ್ಲಿ ಸತ್ತವರಿಗೆ ಸ್ಮಶಾನದಲ್ಲೂ ಇಲ್ಲ ನೆಮ್ಮದಿ

ಇಂದು ಸಂಜೆ ಕಾರವಾರದ ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು ಕುಮಾರಸ್ವಾಮಿಯವರಿಗೆ ಎಫ್.ಐ.ಆರ್ ಮಾಡಿದ್ದಕ್ಕೆ ಸಿಟ್ಟು ಬಂದಿದೆ ,ಸಚಿವರು ಸಹ ಸ್ಟಿಂಗ್ ಆಪರೇಷನ್ ಮಾಡಿರುವ ಕುರಿತು ನಿಮ್ಮ ಬಳಿ ದಾಖಲೆ ಇದ್ರೆ ಕೊಡಿ ಎಂದಿದ್ದಾರೆ. ಆದರೇ ಮಾಧ್ಯಮಗಳು ಇಡೀ ದಿನ ಸ್ಟಿಂಗ್ ಆಪರೇಷನ್ ಸುದ್ದಿಯನ್ನೇ ತೋರಿಸುತಿದ್ದಾರೆ. ರಾಜ್ಯಸರ್ಕಾರವನ್ನು ಬೀಳಿಸಲು ಕೇಂದ್ರ ಸರ್ಕಾರದಿಂದ ಹಣ ಕೇಳಿದ್ದಾರೆ.

Advertisement

ಚಂದ್ರಬಾಬು ನಾಯ್ದು ,ನಿತೀಶ್ ಕುಮಾರ್ ಸೇರಿ ಸರ್ಕಾರ ಬೀಳಿಸಲುವಪ್ರಯತ್ನಿಸುತ್ತಾರೆ ಎಂದರು. ರಾಷ್ಟ್ರೀಯ ಚಾನಲ್ ಗಳು ಬಿಜೆಪಿ ಕಪಿಮುಷ್ಟಿಯಲ್ಲಿದೆ,ಬಿಜೆಪಿ ವಿರುದ್ಧ ಮಾತನಾಡಿದರೇ ದೇಶದ್ರೋಹಿಗಳು ,ದೇಶದ ಪರ ಹೋರಾಡಿದ್ರೆ ದೇಶದ್ರೋಹಿ, ಪಾಕಿಸ್ತಾನಿ ಎಂಬ ಹಣೆಪಟ್ಟಿ ಕಟ್ಟುತ್ತಾರೆ. ಮಾಧ್ಯಮದಲ್ಲಿ ಬಿಜೆಪಿಗೆ ನೆಗಟೀವ್ ಪಬ್ಲಿಸಿಟಿ ಸಿಗುತ್ತಿಲ್ಲ ,ಎಲ್ಲಾ ಕಡೆ ಫಾಸಿಟಿವ್ ಪಬ್ಲಿಸಿಟಿಯೇ ಸಿಗುತ್ತಿದೆ.ವಿರೋಧ ಪಕ್ಷದ ವಿರುದ್ಧ ನೆಗಟೀವ್ ಸುದ್ದಿ ಮಾಡಲಾಗುತ್ತಿದೆ.ಯಾವುದೇ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ರೆ ಅದನ್ನು ಗೌರವಿಸುವುದು ಪ್ರತಿಯೊಂದು ಪೊಲಟಿಕಲ್ ಪಾರ್ಟಿಯ ಜವಬ್ದಾರಿ ,ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ರೆ ,ಪಾಕಿಸ್ತಾನಿಗಳು ಅನ್ನೋದು , ದೇಶದ್ರೋಹಿಗಳು ಅನ್ನೋದು  ಸರಿಯಲ್ಲ,ಕೋವಿಡ್ ಬಂದಾಗ ತಟ್ಟೆ ಹೊಡೆದು ಶಬ್ದ ಮಾಡಿದ ಇಂತಹ ಬುದ್ದಿವಂತರಿಗೆ ನಾವೇನು ಹೇಳೋದು .Karwar | ಅಕ್ರಮ ಮರಳು ತುಂಬಿದ್ದ ದೋಣಿ ವಶಕ್ಕೆ – ಪ್ರಭಾವಿ ರಾಜಕಾರಣಿ ಕರೆಗೆ ಬೆಚ್ಚಿಬಿದ್ದ ಅಧಿಕಾರಿಗಳು ಮಾಡಿದ್ದೇನು ಗೊತ್ತಾ?

ಸೋಷಿಯಲ್ ಮೀಡಿಯಾದಲ್ಲಿ ಸಿಜೆಪಿ ವಿಡಿಯೋ ಬ್ಲಾಕ್ ಮಾಡಲಾಗುತ್ತಿದೆ , ಜನರಿಗೆ ತಲುಪದಂತೆ ನೋಡಿಕೊಳ್ಳಲಾಗುತ್ತಿದೆ ಎಂದ ಸಚಿವ ಗಂಭೀರ ಆರೋಪ ಮಾಡಿದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement