
ಕಾರವಾರ :-ಶಿರಸಿ (sirsi) ಜಿಲ್ಲಾ ಪಂಚಾಯತ ವಿಭಾಗೀಯ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಲೆಕ್ಕಪರಿಶೋಧಕ ಮಲ್ಲಿಕಾರ್ಜುನ್ ಪಾಟೀಲ್ ಅವರನ್ನು ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಮುಂಡಗೋಡಿನ ಗುತ್ತಿಗೆದಾರ ನಾಗರಾಜ ಕಟ್ಟಿಮನೆ ಅವರ ಬಳಿ ಗುತ್ತಿಗೆ ಕೆಲಸದ ಬಿಲ್ ಮಾಡಲು 10 ಸಾವಿರ ರೂ ಲಂಚದ ಬೇಡಿಕೆ ಇಡಲಾಗಿತ್ತು.ಈ ಕುರಿತು ಗುತ್ತಿಗೆದಾರ ಲೋಕಾಯುಕ್ತರಿಗೆ ದೂರು ನೀಡಿದ್ದರು.ಈ ದೂರಿನ ಆಧಾರದಲ್ಲಿ ಡಿ.ವೈಎಸ್ .ಪಿ .ಧನ್ಯ ನಾಯ್ಕ ನೇತ್ರತ್ವದ ತಂಡ ದಾಳಿ ನಡೆಸಿ ಬುಧವಾರ ಸಾಯಂಕಾಲ ಜಿಪಂ ಕಚೇರಿಯಲ್ಲಿಯೇ ರೆಡ್ ಹ್ಯಾಂಡ್ ಆಗಿ ಬಲೆಗೆ ಬೀಳಿಸಿದ್ದಾರೆ.
ಇದನ್ನೂ ಓದಿ:-Sirsi |ಕೇಂದ್ರ ಬಸ್ ನಿಲ್ದಾಣದಲ್ಲಿ ವಿದ್ಯುತ್ ಅವಘಡ-ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ಅನಾಹುತ.
ನ್ಯಾಯಾಲಯದಿಂದ ಗುತ್ತಿಗೆದಾರರ ಹಣ ನೀಡದಿದ್ದಕ್ಕೆ ಕಚೇರಿ ಜಪ್ತಿ ಆದೇಶ -ಇಲ್ಲಿನ ಅಧಿಕಾರಿಗಳಿಗೆ ಲಂಚವೇ ಉಪಕಸುಬು
ಇನ್ನು ಜಿ.ಪಂ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ಇದೇನು ಹೊಸದಲ್ಲ. ದಾಳಿಗೊಳಗಾದವರು ತಮ್ಮ ಸಸ್ಪೆಡ್ ಅವಧಿ ಮುಗಿದ ನಂತರ ಪುನಹಾ ಇದೇ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಶಿಕ್ಷೆ ಆಗೋದೆ ಕಡಿಮೆಯಾದ್ದರಿಂದ ಲಂಚಕ್ಕೆ ಮತ್ತೆ ಕೈಯೊಡ್ಡುತ್ತಲೇ ಇರುತ್ತಾರೆ.
ಮಲ್ಲಿಕಾರ್ಜುನ್ ಪಾಟೀಲ್ ವಿರುದ್ಧ ಗುತ್ತಿಗೆದಾರರು ಅಸಮಧಾನ ವ್ಯಕ್ತಪಡಿಸಿದ್ದು, ಲೋಕಾಯುಕ್ತ ದಾಳಿಯಿಂದ ತಕ್ಕ ಶಾಸ್ತಿಯಾಗಿದೆ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಇದಲ್ಲದೇ ಶಿರಸಿ ಜಿಪಂ ಕಚೇರಿಯಲ್ಲಿ ಪ್ರತಿ ವರ್ಷ ಒಂದು ದಾಳಿ ಎಂಬಂತೆ ಲಂಚದ ಘಟನೆಗಳು ಮರುಕಳಿಸುತ್ತಿದ್ದು, ಕಡಿವಾಣ ಹಾಕಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. Siddapur| ₹2 ಸಾವಿರ ಕಳ್ಳತನಕ್ಕೆ ಎರಡು ಲಕ್ಷದ ಕಾರಿನಲ್ಲಿ ಬಂದ ಅಂತರ ಜಿಲ್ಲಾ ಕಳ್ಳರು ಲಾಕ್ !
ಕಳೆದ ಕೆಲವು ದಿನಗಳ ಹಿಂದೆ ಗುತ್ತಿಗೆ ಹಣ ನೀಡದ ಕಾರಣ ನ್ಯಾಯಾಲಯದಿಂದ ಜಿಪಂ ಕಚೇರಿಯ ಜಪ್ತಿ ಆದೇಶವಾಗಿತ್ತು. ಒಂದು ವರ್ಷದ ಹಿಂದೆ ಇದೇ ವಿಭಾಗೀಯ ಕಚೇರಿಯಲ್ಲಿ ಸುರೇಶ ಬಿಳಗಿ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು.ಈ ಕಚೇರಿಯಲ್ಲಿ ಇದು ಮೂರನೇ ಬಾರಿ ದಾಳಿಯಾಗಿದ್ದು,ಇಷ್ಟಾದರೂ ಅಧಿಕಾರಿಗಳು ಮಾತ್ರ ಪಾಠ ಕಲಿಯದಿರುವುದು ದುರಂತ.
