Joida |ರಾಪ್ಟಗ್ ಸ್ಥಳದಲ್ಲೇ ಮೊಸಳೆ ಪ್ರತ್ಯಕ್ಷ -ಮೊಸಳೆ ಎದಿರು ಪ್ರವಾಸಿಗರ ಹುಚ್ವಾಟ

Joida/ಕಾರವಾರ:- ನದಿಯಲ್ಲಿ ಮೊಸಳೆ ಯಿದ್ದರೂ ಮೊಸಳೆ ಬಳಿ ಪ್ರವಾಸಿಗರನ್ನ ಬೋಟಿನಲ್ಲಿ ಕರೆದೊಯ್ದು ಹುಚ್ಚಾಟ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ(joida) ತಾಲೂಕಿನ ಗಣೇಶಗುಡಿಯ ಇಳವಾ ಭಾಗದಲ್ಲಿ ನಡೆದಿದೆ. ಈ ಭಾಗದಲ್ಲಿ ಜಲಸಾಹಸ ಕ್ರೀಡೆಗಳು ನಡೆಯುತಿದ್ದು ನದಿಯ ಕಿನಾರೆ ಭಾಗದಲ್ಲಿ ಮೊಸಳೆಗಳು ಹೆಚ್ಚಾಗಿ ಕಾಣಸಿಗುತ್ತವೆ. ಆದರೇ ಈ ಪ್ರದೇಶದಲ್ಲಿ ಪ್ರವಾಸಿಗರು ರಬ್ಬರ್ ಬೋಟ್ ನಲ್ಲಿ ತೆರಳಿದ್ದು ಮೊಸಳೆ ಸಮೀಪ ಬೋಟನ್ನು ಕೊಂಡೊಯ್ದು ರಬ್ಬರ್ ಬೋಟಿನಲ್ಲಿದ್ದ ಐದುಜನ ಪ್ರವಾಸಿಗರಿಗೆ ವಾಟರ್ ಸ್ಪೋಟ್ಸ್ ನ ನಿರ್ವಾಹಕರು ಮೊಸಳೆಯನ್ನು ತೋರಿಸಿದ್ದಾರೆ. ಈವೇಳೆ ಇನ್ನೊಂದು ಭಾಗದ ಸೇತುವೆಯಮೇಲೆ ನಿಂತಿದ್ದ ಜನ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:-Joida | ಜಲಸಾಹಸ ಕ್ರೀಡೆ ಗೆ ಮೊಸಳೆ ಆತಂಕ – ಗಣೇಶಗುಡಿ – ಇಳವಾ ದಲ್ಲಿ ಪ್ರತ್ಯಕ್ಷವಾದ ಮೊಸಳೆ

ಆದರೂ ಬೋಟ್ ಚಾಲಕ ಮೊಸಳೆ ಬಳಿ ಪ್ರವಾಸಿಗರನ್ನು ಕರೆದೊಯ್ದಿದ್ದಾನೆ. ಇನ್ನು ಈ ದೃಶ್ಯವನ್ನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಾಗ ಅಲ್ಲಿಂದ ತೆರಳಿದ್ದಾನೆ.ಸಧ್ಯ ರಜೆ ಇರುವುದರಿಂದ ಪ್ರವಾಸಿಗರು ಅತೀ ಹೆಚ್ಚು ಪ್ರಮಾಣದಲ್ಲಿ ದಾಂಡೇಲಿ ಭಾಗಕ್ಕೆ ಬರುತಿದ್ದು ಜಲಸಾಹಸ ಕ್ರೀಡೆಯಲ್ಲಿ ಭಾಗಿಯಾಗುತಿದ್ದಾರೆ. ಇನ್ನು ಜಲಸಾಹಸ ಕ್ರೀಡೆ ನಡೆಯುವ ಭಾಗದಲ್ಲಿಯೇ ಕಳೆದ ಮೂರ್ನಾಲ್ಕು ದಿನದಿಂದ ಮೊಸಳೆಗಳು ಓಡಾಡುತಿದ್ದು ಅರಣ್ಯ ಇಲಾಖೆ ಸಹ ಎಚ್ಚರಿಕೆ ನೀಡಿದೆ.ಹೀಗಿದ್ದರೂ ಪ್ರವಾಸಿಗರನ್ನ ಮೊಸಳೆ ಬಳಿ ಕರೆದೊಯ್ದು ತೋರಿಸಲಾಗುತಿದ್ದು ಸ್ವಲ್ಪ ಆಯಾ ತಪ್ಪಿದರೂ ಮೊಸಳೆಗೆ ಆಹುತಿ ಆಗುವ ಸಾಧ್ಯತೆಗಳಿವೆ.ಇನ್ನು ಇದೇ ಭಾಗದಲ್ಲಿ ಪ್ರವಾಸಿಗರು ಈಜಾಟ ನಡೆಸುತಿದ್ದು ಅಪಾಯಕ್ಕೆ ಎಡೆಮಾಡಿಕೊಟ್ಟಿದ್ದು ,ಮುಂದೆ ಅನಾಹುತ ಆಗುವ ಮುಂಚೆಯೇ ಅರಣ್ಯ ಇಲಾಖೆ ಈ ಭಾಗದಲ್ಲಿ ಎಚ್ಚರಿಕೆ ಫಲಕ ಹಾಕಿ ಕ್ರಮ ಕೈಗೊಳ್ಳಬೇಕಿದೆ.
