Joida | ಜಲಸಾಹಸ ಕ್ರೀಡೆ ಗೆ ಮೊಸಳೆ ಆತಂಕ – ಗಣೇಶಗುಡಿ – ಇಳವಾ ದಲ್ಲಿ ಪ್ರತ್ಯಕ್ಷವಾದ ಮೊಸಳೆ

Crocodile spotted near water adventure sports area in Kali River at Ilava, Ganeshgudi, Joida Crocodile spotted near water adventure sports area in Kali River at Ilava, Ganeshgudi, Joida
Crocodile spotted near water adventure sports area in Kali River at Ilava, Ganeshgudi, Joida

Joida |ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಳವಾದ ಜೋಯಿಡಾ (joida),ಗಣೇಶ ಗುಡಿ ಭಾಗದ ಕಾಳಿ ನದಿಯಲ್ಲಿ ಮೊಸಳೆಗಳು ಹೆಚ್ಚಾಗಿದ್ದು ಇದೀಗ ಜಲಸಾಹಸ ಕ್ರೀಡೆ ನಡೆಸುವ ಸ್ಥಳದಲ್ಲೇ ಮೊಸಳೆ ಪ್ರತ್ಯಕ್ಷವಾಗಿದ್ದು ,ಆತಂಕ ತಂದೊಡ್ಡಿದೆ.

ಜೋಯಿಡಾ ತಾಲೂಕಿನ ಗಣೇಶ ಗುಡಿಯಲ್ಲಿ ರಿವರ್ ರ್ಯಾಫ್ಟಿಂಗ್ , ಕಯಾಕಿಂಗ್, ಬೋಟಿಂಗ್ ಹಾಗೂ ರಿಪವರ್ ಸ್ವಿಮ್ಮಿಂಗ್ ಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಇನ್ನು ಈ ಭಾಗದ ಕಾಳಿ ನದಿ ನೀರಿನಲ್ಲಿ ಈ ಹಿಂದೆ ಮೊಸಳೆಗಳು ಇರಲಿಲ್ಲ. ಬಹುತೇಕ ಮೊಸಳೆಗಳು ದಾಂಡೇಲಿ (dandeli)ನಗರ ಭಾಗದ ಕಾಳಿ ನದಿಹರಿವಿನಲ್ಲಿ ಕಾಣಸಿಗುತಿದ್ದವು. ಆದರೇ ಇದೀಗ ಗಣೇಶ ಗುಡಿಯ ಡ್ಯಾಮ್ ನ ಕೆಳಭಾಗದಲ್ಲಿ ಮೊಸಳೆಗಳು ಕಾಣಸಿಗುತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರವಾಸಿಗರಲ್ಲಿ ಭಯ ಹುಟ್ಟಿಸುವಂತೆ ಮಾಡಿದೆ.Dandeli|ಕನ್ನಡವಾಣಿ ವರದಿ ಫಲಶೃತಿ-ಸ್ವಚ್ಛವಾದ ಕಾಳಿ ನದಿ ತೀರ ಪ್ರದೇಶ

Advertisement

ಆತಂಕದ ನಡುವೆ ಇಲ್ಲ ಕ್ರಮ.

Dandeli
ಮೊಸಳೆ ಕಾಣಿಸಿಕೊಂಡ ದೃಶ್ಯ

ಗಣೇಶ ಗುಡಿಯ ಇಳವಾದ ಕಾಳಿ ನದಿ ಪ್ರದೇಶದಲ್ಲಿ ಜಲಸಾಹಸ ಕ್ರೀಡೆಗೆ ಪ್ರಸಿದ್ಧಿ ಪಡೆದಿದೆ. ಈ ಭಾಗದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನ ಪ್ರವಾಸಿಗರು ಭೇಟಿನೀಡಿ ಜಲಸಾಹಸ ಕ್ರೀಡೆಯಲ್ಲಿ ಭಾಗಿಯಾಗುತ್ತಾರೆ. ಆದರೇ ಇದೀಗ ಮೊಸಳೆಗಳು ಈ ಭಾಗದಲ್ಲಿಯೇ ಕಾಣಿಸಿಕೊಂಡಿದೆ. ಹೀಗಿರುವಾಗ ನಾಳೆದಿನ ಮೊಸಳೆಗಳು ನೀರಿಗಿಳಿದ ಪ್ರವಾಸಿಗರ ಮೇಲೆ ದಾಳಿಮಾಡಿದರೇ ಏನುಗತಿ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

ಇದನ್ನೂ ಓದಿ:-Dandeli|ಅಂಬೇವಾಡಿ ಜನವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ

ಇನ್ನು ದಾಂಡೇಲಿ ನಗರ ಪ್ರದೇಶದ ಕಾಳಿ ನದಿ ತೀರದಲ್ಲಿ ಜನರು ನದಿಗೆ ಇಳಿಯದಂತೆ ಮೊಸಳೆಗಳ ಬಗ್ಗೆ ಎಚ್ಚರಿಕೆ ವಹಿಸುವ ನಾಮಫಲಕ ಹಾಕಲಾಗಿದೆ. ಇದಲ್ಲದೇ ಮೊಸಳೆಗಳು ಹೊರಹೋಗದಂತೆ ಕಬ್ಬಿಣದ ಜಾಲಿ ಅಳವಡಿಸಲಾಗಿದೆ. ಆದರೇ ಪ್ರತಿ ದಿನ ಸಾವಿರಾರು ಜನ ಪ್ರವಾಸಿಗರು ಬರುವ ಇಳವಾ ಭಾಗದ ಜಲಸಾಹಸ ಕ್ರೀಡೆಯ ಪ್ರದೇಶದಲ್ಲಿ ಮೊಸಳೆಗಳ ಓಡಾಟದ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ಬಂದರೂ ನಾಮಫಲಕ ಅಳವಡಿಸುವ ಹಾಗೂ ಜನರಿಗೆ ಎಚ್ಚರಿಕೆ ಸೂಚನೆ ನೀಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿಲ್ಲ.ಕೊನೆ ಪಕ್ಷ ಪದೇ -ಪದೇ ಕಾಣಿಸುವ ಬೃಹತ್ ಗಾತ್ರದ ಮೊಸಳೆಯನ್ನು ಹಿಡಿಯುವ ಕೆಲಸಕ್ಕೂ ಕೈಹಾಕದೇ ನಿರ್ಲಕ್ಷ ಮಾಡಲಾಗಿದೆ.

ಒಂದುವೇಳೆ ಮೊಸಳೆ ಪ್ರವಾಸಿಗರಮೇಲೆ ದಾಳಿ ಮಾಡಿದರೇ ಏನು ಗತಿ ಎಂಬ ಆತಂಕ ತಂದೊಡ್ಡಿದೆ.Dandeli| ಹೋಂ ಸ್ಟೇ ಆವರಣದಲ್ಲೇ ಚಿರತೆ ಪ್ರತ್ಯಕ್ಷ ವಿಡಿಯೋ ನೋಡಿ.

ಇದೀಗ ದಸರಾ ರಜೆ ಇರುವುದರಿಂದ ಹಲವು ಪ್ರವಾಸಿಗರು ದಾಂಡೇಲಿಯತ್ತ ಮುಖ ಮಾಡಿದ್ದಾರೆ. ಹೀಗಾಗಿ ದಾಂಡೇಲಿ,ಜೋಯಿಡಾ ಭಾಗದಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಅವರ ಎಚ್ಚರಿಕೆಯಲ್ಲಿ ಅವರು ಇರದಿದ್ದರೇ ಅನಾಹುತ ಮಾತ್ರ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement