Navy | ನೌಕಾನೆಲೆಯ ನಾವಿಕ ನ ಹನಿಟ್ರ್ಯಾಪ್ -ದೇಶದ ರಹಸ್ಯ ಮಾರಿದವನ ಬಂಧನ

file 00000000868c82119d74f583b8cd4a87 1 file 00000000868c82119d74f583b8cd4a87 1

Navy |ಕೊಯಮತ್ತೂರು, ತಮಿಳುನಾಡು: ಪಾಕಿಸ್ತಾನದ ಮಹಿಳಾ ಏಜೆಂಟ್‌ ಜೊತೆ ಸಂಪರ್ಕ ಬೆಳೆಸಿ, ನೌಕಾಪಡೆಯ(navy) ಸೂಕ್ಷ್ಮ ಹಾಗೂ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ನೌಕಾಪಡೆಯ ನಾವಿಕರೊಬ್ಬರನ್ನು ಬಂಧಿಸಲಾಗಿದೆ.ಇದನ್ನೂ ಓದಿ:-Navy | ಕನ್ನಡವಾಣಿ ವರದಿ ಫಲಶೃತಿ -ಕನ್ನಡ ನಾಮಫಲಕ ಅಳವಡಿಸಿದ ನೌಕಾದಳ

ಸಾಮಾಜಿಕ ಮಾಧ್ಯಮದ ಮೂಲಕ ನಾವಿಕನನ್ನು ಪರಿಚಯ ಮಾಡಿಕೊಂಡ ಪಾಕಿಸ್ತಾನ ಮೂಲದ ಮಹಿಳಾ ಏಜೆಂಟ್‌, ಆತನೊಂದಿಗೆ ಸ್ನೇಹ ಬೆಳೆಸಿ ಬಳಿಕ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಾಳೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಕೊಯಮತ್ತೂರಿನ ನೌಕಾಪಡೆಯ ತರಬೇತಿ ಕೇಂದ್ರ ಐಎನ್‌ಎಸ್ ಅಗ್ರಣಿಯಲ್ಲಿ ತರಬೇತಿ ಪಡೆಯುತ್ತಿದ್ದ 31 ವರ್ಷದ ಪ್ರದೀಪ್ ಮುಖರ್ಜಿ ಅವರನ್ನು ಆಂಧ್ರಪ್ರದೇಶ ಪೊಲೀಸ್‌ ಕೌಂಟರ್ ಇಂಟೆಲಿಜೆನ್ಸ್‌ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Advertisement

ಪಶ್ಚಿಮ ಬಂಗಾಳ ಮೂಲದ ಪ್ರದೀಪ್ ಮುಖರ್ಜಿ 2014ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದರು. ಬಳಿಕ ಅವರನ್ನು ವಿಶಾಖಪಟ್ಟಣದ ಪೂರ್ವ ನೌಕಾ ಕಮಾಂಡ್‌ಗೆ ನಿಯೋಜಿಸಲಾಗಿತ್ತು. ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಕೋರ್ಸ್‌ಗಾಗಿ ಕಳೆದ ಒಂದು ವಾರದಿಂದ ಕೊಯಮತ್ತೂರಿನಲ್ಲಿದ್ದರು ಎನ್ನಲಾಗಿದೆ.

ಸಾಮಾಜಿಕ ಜಾಲತಾಣದ ಮೂಲಕ ಪರಿಚಯ

ಕೆಲ ತಿಂಗಳ ಹಿಂದೆ ಪಾಕಿಸ್ತಾನ ಮೂಲದ ಮಹಿಳಾ ಏಜೆಂಟ್‌ ಸಾಮಾಜಿಕ ಮಾಧ್ಯಮದ ಮೂಲಕ ಮುಖರ್ಜಿ ಅವರನ್ನು ಸಂಪರ್ಕಿಸಿದ್ದಾಳೆ ಎನ್ನಲಾಗಿದೆ. ನಂತರ ಇಬ್ಬರ ನಡುವೆ ಸಂಪರ್ಕ ಹಾಗೂ ಬಾಂಧವ್ಯ ಹೆಚ್ಚಾಗಿತ್ತು.

ಈ ವೇಳೆ ನೌಕಾಪಡೆಯ ಚಲನವಲನ, ಕಾರ್ಯತಂತ್ರಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಹಾಗೂ ವಿಶಾಖಪಟ್ಟಣದ ನೌಕಾನೆಲೆಯ ಕಾರ್ಯಾಚರಣೆಗೆ ಸಂಬಂಧಿಸಿದ ಕೆಲವು ವಿವರಗಳನ್ನು ಆತ ಮಹಿಳಾ ಏಜೆಂಟ್‌ಗೆ ಹಂಚಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಅನುಮಾನಾಸ್ಪದ ಡಿಜಿಟಲ್ ಚಟುವಟಿಕೆ ಪತ್ತೆ

ನಾವಿಕನ ಅನುಮಾನಾಸ್ಪದ ಡಿಜಿಟಲ್ ಚಟುವಟಿಕೆಗಳ ಕುರಿತು ಮಾಹಿತಿ ಪಡೆದ ಆಂಧ್ರಪ್ರದೇಶ ಸಿಐನ ಗಡಿಯಾಚೆಗಿನ ಬೇಹುಗಾರಿಕೆ ಮತ್ತು ಭಯೋತ್ಪಾದನೆ ನಿಗ್ರಹ ಘಟಕದ ವಿಶೇಷ ತಂಡ ತನಿಖೆ ಆರಂಭಿಸಿತ್ತು. ಇದನ್ನೂ ಓದಿ:-Navy |ಕದಂಬ ನೌಕಾನೆಲೆಯಲ್ಲಿ ಸದ್ದು ಮಾಡದ ಅಪರಾಧಗಳು| ಬೆಚ್ಚಿ ಬೀಳೋ ರಹಸ್ಯ!?

ತನಿಖೆಯ ವೇಳೆ ಮುಖರ್ಜಿ ಹನಿಟ್ರ್ಯಾಪ್‌ಗೆ ಒಳಗಾಗಿ ಪಾಕಿಸ್ತಾನದ ಮಹಿಳಾ ಏಜೆಂಟ್‌ ಜೊತೆ ಸಂಪರ್ಕದಲ್ಲಿದ್ದದ್ದು ಹಾಗೂ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಹಂಚಿಕೊಳ್ಳಲಾಗಿದೆ ಎನ್ನಲಾದ ಮಾಹಿತಿಯ ಸ್ವರೂಪ ಮತ್ತು ಅದರ ಪ್ರಮಾಣದ ಬಗ್ಗೆಯೂ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.

ಮೂಲ ಮಾಹಿತಿ-PTI

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement