Karwar | ಶತಮಾನಗಳಿಂದ ಮೂಲಭೂತ ಸೌಕರ್ಯ ಕಾಣದ ನಗರ ವ್ಯಾಪ್ತಿಯಲ್ಲಿರುವ ಗುಡ್ಡಳ್ಳಿಗೆ ರಸ್ತೆ ಸಂಪರ್ಕ ಆಗಲಿದೆಯೇ?

Karwar Guddalli road connectivity issue and basic amenities Karwar Guddalli road connectivity issue and basic amenities
Karwar Guddalli road connectivity issue and basic amenities

Karwar |-ಗುಡ್ಡಳ್ಳಿ ಎಂಬ ಊರು ಕಾರವಾರದ (karwar)ನಗರಭೆಯ ವ್ಯಾಪ್ತಿಯಲ್ಲಿ ಬರುತ್ತದೆ.ಆದರೇ ಇಲ್ಲಿಗೆ ಹೋಗಲು ಪರಬಾಡದ ಪಾಡು ಪಡಬೇಕು, ಇಲ್ಲಿನ ಜನ ಅಕ್ಕಿ ಯಿಂದ ಹಿಡಿದು ಯಾವ ವಸ್ತುವನ್ನು ತರಬೇಕು ಎಂದರೂ ತಲೆಯ ಮೇಲೆ ಹೊತ್ತು ತರವ ಸ್ಥಿತಿ ಅಂತ ಮೂಲಭೂತ ಸೌಕರ್ಯ ಇಲ್ಲದ ನಗರಸಭೆ ವ್ಯಾಪ್ತಿಯ ಈ ಊರಿಗೆ ಉಪ ಲೋಕಾಯುಕ್ತ ಫಣೀಂದ್ರ ರವರ ದಿಢೀರ್ ಭೇಟಿ ನೀಡಿದ್ರು .ಅಷ್ಟಕ್ಕೂ ಅವರು ಭೇಟಿ ಮಾಡಿದ್ದೇಕೆ ಈ ಊರಿನಲ್ಲಿ ಅಂತದ್ದೇನು ಸಮಸ್ಯೆ ? ಪರಿಹಾರ ನೀಡಿದ್ರಾ ಲೋಕಾಯುಕ್ತರು? ಈ ಕುರಿತು ಒಂದು ರಿಪೋರ್ಟ ಇಲ್ಲಿದೆ.

 ಅದು ಕಾರವಾರ ನಗರಸಭೆ ವ್ಯಾಪ್ತಿಯ ಬಿಣಗಾ ಮೂಡಲಮಕ್ಕಿಯ 31 ನೇ ವಾರ್ಡ ಗೆ ಸೇರಿದ ಗುಡ್ಡಳ್ಳಿ ವಾರ್ಡ . ಹೇಳೋದಕ್ಕೆ ನಗರಸಭೆ ವ್ಯಾಪ್ತಿಯಾದರೂ ಕಾರವಾರದಿಂದ ಆರು ಕಿಲೋಮೀಟರ್ ದೂರದಲ್ಲಿ ಇದ್ರೂ ನಗರಸಭೆಯ ಯಾವ ಸೌಲತ್ತುಗಳೂ ಈ ಊರಿಗೆ ಇಲ್ಲ. ಕೆಲವೇ ವರ್ಷದ ಹಿಂದೆ ಅಷ್ಟೇ ಈ ಊರು ಬೆಳಕು ಕಂಡಿದೆ. ಸುಮಾರು 30 ಮನೆಗಳನ್ನ ಹೊಂದಿರುವ ಈ ಊರು ಮೂಲಭೂತ ಸೌಕರ್ಯ ವಂಚಿತ. ರಸ್ತೆಯೇ ಇಲ್ಲದೇ ಇರೋದ್ರಿಂದ ಈ ಊರಿನ ಜನ ಪ್ರತಿ ದಿನ ಆರು ಕಿಲೋಮೀಟರ್ ಗುಡ್ಡದ ಕಾಡು ಹಾದಿಯಲ್ಲಿ ನಿತ್ಯದ ಕೆಲಸಕ್ಕೆ ನಡೆದುಹೋಗಬೇಕು.

Guddalli village
Guddalli ಗ್ರಾಮದ ಮಹಿಳೆಯರು ರಸ್ತೆ ಇಲ್ಲದೇ ಸಂಚಾರ ಮಾಡುತ್ತಿರುವುದು

ದಿನ ಶಾಲೆಯ ಮಕ್ಕಳು ಮೊಳಬಾರದ ಚೀಲ ಹೊತ್ತು ಆರು ಕಿಲೋಮೀಟರ್ ನಡೆದುಕೊಂಡು ಹೋದ್ರೆ ,ಮಹಿಳೆಯರು ಮನೆಗೆ ಅಗತ್ಯ ವಸ್ತುಗಳನ್ನ ತರಲು ಕಾರವಾರಕ್ಕೆ ಬಂದು ಅಲ್ಲಿಂದ ಭಾರವಾದ ಜಿನಸಿ ಚೀಲಗಳನ್ನ ಹೊತ್ತು ತರಬೇಕು.ಇನ್ನು ಮಳೆಗಾಲ ಬಂತು ಅಂದರೇ ,ಈ ಊರಿನ ಜನರ ನರಳಾಟ ಕೇಳುವವರಿಲ್ಲ. ಆರೋಗ್ಯ ಕೆಟ್ಟರೇ ನಾಲ್ಕು ಜನ ಜೋಳಿಗೆ ಮಾಡಿ ಭುಜದಮೇಲೆ ಹೊತ್ತು ತರಬೇಕು. ಹೀಗಾಗಿ ತಮ್ಮ ಮಕ್ಕಳ ಶಿಕ್ಷಣಕ್ಕಾದರೂ ರಸ್ತೆ ಮಾಡಿಕೊಡಿ ಎಂಬ ಹೋರಾಟದ ಕೂಗು ಇಲ್ಲಿನ ಜನರದ್ದು. ಆದರೇ ಈವರೆಗೂ ಈಡೇರದೇ ಜನ ಸಂಕಷ್ಟದಲ್ಲೇ ಜೀವನ ನಡೆಸಿಕೊಂಡು ಬಂದಿದ್ದಾರೆ. ಇದನ್ನೂ ಓದಿ:-Karwar |ಸೀಬರ್ಡ್ ಕೈರಳಿ ಸಮಾಜದಿಂದ ಓಣಂ ಹಾಗೂ 18ನೇ ವಾರ್ಷಿಕೋತ್ಸವ ಆಚರಣೆ

Advertisement

 ಇನ್ನು ನಗರಸಭೆ ವ್ಯಾಪ್ತಿಯ ಗುಡ್ಡಳ್ಳಿ ಗ್ರಾಮದ ಕುರಿತು ಮಾಧ್ಯಮದಲ್ಲೂ ಸುದ್ದಿಗಳು ನಿರಾಮತರವಾಗಿ ಬಂದಿದ್ದು ಇದನ್ನ ಗಮನಿಸಿದ್ದ ಉಪಲೋಕಾಯುಕ್ತ ಫಣೀಂದ್ರ ರವರು ಈ ಊರಿಗೆ ಹೋಗಿ ಜನರ ಸಮಸ್ಯೆ ಆಲಿಸೋ ಪಟ್ಟು ಹಿಡಿದರು. ಇದರಿಂದಾಗಿ ಅಧಿಕಾರುಗಳೇ ಇತ್ತ ಮುಖ ಹಾಕದ ಈ ವಾರ್ಡ ಗೆ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳೊಂದಿಗೆ ಉಪಲೋಕಾಯುಕ್ತ ಫಣೀಂದ್ರ ರವರು ಗುಡ್ಡವೇರಿ ಗುಡ್ಡಳ್ಳಿ ಗ್ರಾಮಕ್ಕೆ ಬಂದು ಇಲ್ಲಿನ ಸಮಸ್ಯೆ ಆಲಿಸಿದರು. ಕುಡಿಯುವ ನೀರು, ಶಾಲೆ,ಅಂಗನವಾಡಿಗಳನ್ನ ಸುಸಜ್ಜಿತವಾಗಿ ವ್ಯವಸ್ತೆ ಮಾಡಲು ಸೂಚಿಸಿದರು.

Guddalli karwar
ಗುಡ್ಡಳ್ಳಿಯಲ್ಲಿ ವಸ್ತುಗಳನ್ನು ಹೊತ್ತು ಹೋಗುತ್ತೊರುವ ಗ್ರಾಮದ ಮಹಿಳೆಯರು

ಇನ್ನು ಊರಿನ ಜನರಿಗೆ ಓಡಾಟ ನಡೆಸಲು ರಸ್ತೆ ಮಾಡಲು ಸಚಿವರು ಹಾಗೂ ಮುಖ್ಯಮಂತ್ರಿ ಜೊತೆ ಮಾತನಾಡುವ ಭರವಸೆ ನೀಡಿದರು.ಇದಲ್ಲದೇ ಅರಣ್ಯ ಇಲಾಖೆ ಜೊತೆ ಮಾತನಾಡಿ ನಂತರ ಆಡಳಿತಕ್ಕೆ ತಕ್ಷಣ ಈ ಊರಿಗೆ ರಸ್ತೆಗಳ ನಿರ್ಮಾಣಕ್ಕೆ ತಗಲುವ ವೆಚ್ಚ ಹಾಗೂ ನೀಲಿ ನಕ್ಷೆ ಸಿದ್ದಪಡಿಸಿ ಪ್ರಸ್ತಾಪ ಕಳುಹಿಸಲು ಸೂಚಿಸಿದರು. ಈ ಮೂಲಕ ಅಧಿಕಾರಿಗಳೇ ಬಾರದ ನಗರಸಭೆಯ ಶಾಪಗ್ರಸ್ತ ಗುಡ್ಡಳ್ಳಿ ವಾರ್ಡ ಗೆ ಉಪಲೋಕಾಯುಕ್ತರು ಆಗಮಿಸಿ ಇಲ್ಲಿನ ಜನರ ಕನಸು ಚಿಗುರುವಂತೆ ಮಾಡಿದರು. ಇದನ್ನೂ ಓದಿ:-Uttara kannada | LPG ಇಂಧನ ಕೊರತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 90 ಕೋಟಿಗೂ ಹೆಚ್ಚು ಕಟ್ಟಿಗೆ ವಹಿವಾಟು ನಡೆಸಿದ ಅರಣ್ಯ ಇಲಾಖೆ 

ಸಧ್ಯ ಈ ಊರಿಗೆ ಶೀಘ್ರದಲ್ಲಿ ರಸ್ತೆ ನಿರ್ಮಿಸಲು ಖುದ್ದು ಉಪಲೋಕಾಯುಕ್ತರು ಮುಖ್ಯಮಂತ್ರಿ ಜೊತೆ ಮಾತನಾಡಿ ಸಮಸ್ಯೆ ಈಡೇರಿಸುವ ಭರವಸೆ ನೀಡುವ ಮೂಲಕ ಈ ಊರಿನ ಜನರಿಗೆ ಇದೀಗ ರಸ್ತೆಯ ಕನಸು ನನಸಾಗುವ ಚಿಗುರು ಮೂಡಿದೆ. ನಗರಸಭೆ ವ್ಯಾಪ್ತಿಯಲ್ಲಿದ್ದರೂ ಯಾವ ಸವಲತ್ತೂ ಸಿಗದೇ ವಂಚಿತರಾದ ಈ ಹಳ್ಳಿಯ ನ ಜನರಿಗೆ ಇದೀಗ ಲೋಕಾಯುಕ್ತರ ಆಗಮನ ಸಂಕ್ರಾಂತಿಯ ಸಂಭ್ರಮ ತಂದಿದ್ದು ಶಾಶ್ವತ ಪರಿಹಾರದ ಕನಸು ಈಡೇರುವುದಾ ಎಂಬುದನ್ನ ಕಾದು ನೋಡಬೇಕಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement