Uttara kannada | LPG ಇಂಧನ ಕೊರತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 90 ಕೋಟಿಗೂ ಹೆಚ್ಚು ಕಟ್ಟಿಗೆ ವಹಿವಾಟು ನಡೆಸಿದ ಅರಣ್ಯ ಇಲಾಖೆ 

Uttara Kannada LPG shortage increases demand for firewood Uttara Kannada LPG shortage increases demand for firewood
Uttara Kannada LPG shortage increases demand for firewood

Uttara kannada |ಕಾರವಾರ :- ಮಧ್ಯಪ್ರಾಚ್ಯ ಯುದ್ಧ ಸಂಘರ್ಷದ ಬೆನ್ನಲ್ಲೇ ಇಂಧನ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು ಎಲ್.ಪಿ.ಜಿ ಗಳ ಬೆಲೆಯೂ ಏರಿಕೆ ಕಂಡಿದ್ದು ಬಳಕೆದಾರರಿಗೆ ಪೂರೈಕೆ ವಿಳಂಬವಾಗುತ್ತಿದೆ. ಇದರ ಪರಿಣಾಮ ಇದೀಗ ಕಟ್ಟಿಗೆಗೆ ಹೆಚ್ಚಿನ ಬೇಡಿಕೆ ಬರತೊಡಗಿದ್ದು ಉತ್ತರ ಕನ್ನಡ (uttara Kannada) ಜಿಲ್ಲೆಯಲ್ಲಿ  ಕೋಟಿಗಟ್ಟಲೇ ಮೌಲ್ಯದ ಕಟ್ಟಿಗೆಗಳು ಮಾರಟ ಕಂಡರೇ , ಹಳ್ಳಿಗಳಲ್ಲಿ ಎಲ್.ಪಿಜಿ ಬಳಕೆಯನ್ನ ಸಂಪೂರ್ಣ ನಿಲ್ಲಿಸುತಿದ್ದು ಕಟ್ಟಿಗೆ ಒಲೆಗೆ ಹೆಚ್ಚಿನ ಒತ್ತು ನೀಡುತಿದ್ದಾರೆ.

ಹೌದು ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಕಟ್ಟಿಗೆಗೆ ಹೆಚ್ಚಿನ ಬೇಡಿಕೆ ಬರತೊಡಗಿದೆ.ಎಲ್.ಪಿಜಿ ದರ ಏರಿಕೆ, ಇಂಧನದ ಕೊರತೆಯಿಂದ ಹೋಟೆಲ್ ಗಳು ಹಾಗೂ ಹಳ್ಳಿಗಳಲ್ಲಿ ಮನೆಯ ಜನರು ದಿನನಿತ್ಯದ ಅಗತ್ಯಕ್ಕೆ ಸೌದೆ ಒಲೆಯ ಮೊರೆ ಹೋಗಿದ್ದಾರೆ.ಇದರ ಪರಿಣಾಮ ಕಟ್ಟಿಗೆ ಒಲೆಗೆ ಹೆಚ್ಚಿನ ಡಿಮಾಂಡ್ ಬಂದಿದೆ‌ .ಕಮರ್ಷಿಯಲ್  ಎಲ್.ಪಿಜಿ ಸಿಲೆಂಟರ್ ಬುಕ್ ಮಾಡಿ ಕಾಯಬೇಕು. ಕೆಲವೊಮ್ಮೆ ಬಳಕೆಗೆ ಸಿಗದೇ ಹೋಟೆಲ್ ನವರು ಷಾಪ್ ಅನ್ನು ಬಂದ್ ಮಾಡಬೇಕು.ಇನ್ನು ಗೃಹಬಳಕೆ ಸಿಲೆಂಡರ್ ದೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನ ಅರಣ್ಯದಲ್ಲಿ ಕಟ್ಟಿಗೆ ಕಡಿದು ದಿನಬಳಕೆಗೆ ಉಪಯೋಗ ಮಾಡಿದ್ರೆ ಹೋಟಲ್ ನವರು ಅರಣ್ಯ ಇಲಾಖೆಯ ಡಿಪೋಗಳಲ್ಲಿ ಕಟ್ಟಿಗೆ ಖರೀದಿ ಮಾಡುತಿದ್ದಾರೆ. ಇನ್ನು ಕಾರವಾರದ ಸುತ್ತಮುತ್ತಲ ಹಳ್ಳಿಯವರು ಮೊದಲು ಹೊರಗೆ ನೂರರಂತೆ ಹೋಟಲ್ ಗಳಿಗೆ ಮಾರುತಿದ್ದು ಇದೀಗ  ಆರನೂರರಿಂದ ಎಂಟನೂರರ ವರೆಗೆ ದರ ಸಿಗುತಿದ್ದು ಗಳಿಕೆಯ ಮತ್ತೊಂದು ಮಾರ್ಗವನ್ನು ಹಳ್ಳಿಗರು ಹುಡುಕಿಕೊಂಡಿದ್ದಾರೆ.

ಇದನ್ನೂ ಓದಿ:-Uttara Kannada | ಆಟೋಗಳಿಗೆ CNG ಸಂಕಷ್ಟ 35 ಚಾಲಕರಿಂದ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು

Advertisement

 ಇನ್ನು ಕಟ್ಟಿಗೆಗೆ ಹೆಚ್ಚಿನ ಡಿಮಾಂಡ್ ಬರುತಿದ್ದು ಜಿಲ್ಲೆಯ ಅರಣ್ಯ ಇಲಾಖೆಯ ಕಾರವಾರ, ಹೊನ್ನಾವರ,ದಾಂಡೇಲಿ,ಶಿರಸಿ,ಹಳಿಯಾಳ ಕಟ್ಟಿಕೆ ಡಿಫೋ ದಲ್ಲಿ ಈ ವರ್ಷ 90 ಕೋಟಿ ಹೆಚ್ಚು ಆಧಾಯ ತಂದುಕೊಟ್ಟಿದೆ. ಜಿಲ್ಲೆಯಲ್ಲಿಯೇ ಕಾರವಾರ ಡಿಪೋ ದಲ್ಲಿ 15.3 ಕೋಟಿ ಹಾಗೂ ದಾಂಡೇಲಿ ಡಿಫೋ ದಲ್ಲಿ 55 ಕೋಟಿ ಆಧಾಯ ಗಳಿಸಿದ್ದು ಜಿಲ್ಲೆಯಲ್ಲಿ ಇದೇ ಮೊದಲಬಾರಿಗೆ ಇಷ್ಟೊಂದು ದೊಡ್ಡ ಮಟ್ಟದ ಕಟ್ಟಿಗೆಗಳು ಹಾಗೂ ಬೆಲೆಬಾಳುವ ನಾಟಗಳು ಗೃಹ ಬಳಕೆ ಪೀಟೋಪಕರಣ ಹಾಗೂ ಸೌದೆಗಾಗಿ ಮಾರಾಟವಾಗಿ ದಾಖಲೆ ಬರೆದಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

IMG 20261003 WA0025
ದಾಂಡೇಲಿ ಅರಣ್ಯ ಇಲಾಖೆ ಕಟ್ಟಿಗೆ ಡಿಫೋ ದಲ್ಲಿ ಆದ ಕಟ್ಟಿಗೆ ಹಾಗೂ ನಾಟಗಳ ವಹಿವಾಟು

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್.ಪಿ.ಜಿ ಕೊರತೆ ಇದೀಗ ಸೌದೆಗಳಿಗೆ ಹೆಚ್ಚಿನ ಬೇಡಿಕೆ ತಂದುಕೊಟ್ಟಿದೆ.ಹೀಗಾಗಿ ಅರಣ್ಯ ಇಲಾಖೆ ಸಹ ಸೌದೆ ಕಟ್ಟಿಗೆಗಳನ್ನ ಪೂರೈಸಲು ಹರಸಾಹಸ ಪಡುವಂತಾಗಿದೆ.ಸಧ್ಯ ಹೋಟೆಲ್ ,ಗೃಹಬಳಕೆಯಲ್ಲಿ ಸೌದೆ ಉಪಯೋಗ ದಿಂದ ಕಟ್ಟಿಗೆಗಳಿಗೆ ಚಿನ್ನದ ಬೆಲೆ ಬರುವಂತಾಗಿದೆ.ಇದಲ್ಲದೇ ಜಿಲ್ಲೆಯಿಂದ ನೆರೆಯ ಗೋವಾ ,ಹೊರ ಜಿಲ್ಲೆಗಳಿಗೂ ಕಟ್ಟಿಗಳ ಪೂರೈಕೆ ಆಗುತ್ತಿದ್ದು ಸಖತ್ ಡಿಮ್ಯಾಂಡ್ ಪಡೆದುಕೊಂಡಿದೆ.

 

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement