Karwar |ಸೀಬರ್ಡ್ ಕೈರಳಿ ಸಮಾಜದಿಂದ ಓಣಂ ಹಾಗೂ 18ನೇ ವಾರ್ಷಿಕೋತ್ಸವ ಆಚರಣೆ

IMG 20260930 WA0003 IMG 20260930 WA0003

Karwar : ಕಾರವಾರ ನೌಕಾನೆಲೆಯ ಮಲಯಾಳಿಗಳ ಸಂಘಟನೆಯಾದ ‘ಸೀಬರ್ಡ್ ಕೈರಳಿ ಸಮಾಜ’ ವತಿಯಿಂದ ಅಮಧಳ್ಳಿ ವೀರಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಓಣಂ ಹಬ್ಬ ಹಾಗೂ 18ನೇ ವಾರ್ಷಿಕೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸದಸ್ಯರು ಹಾಗೂ ಕುಟುಂಬಸ್ಥರು ಉತ್ಸಾಹದಿಂದ ಪಾಲ್ಗೊಂಡರು. ಸಾಂಪ್ರದಾಯಿಕ ಓಣಂ ಆಚರಣೆಯ ಅಂಗವಾಗಿ ಭವ್ಯವಾದ ಓಣಂ ಸದ್ಯ (ಸಾಂಪ್ರದಾಯಿಕ ಔತಣಕೂಟ)ವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಇದೇ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಓ.ಜೆ. ಜೋಸೆಫ್ ಹಾಗೂ  ಜನಾರ್ದನನ್ ಅವರನ್ನು ಸೀಬರ್ಡ್ ಕೈರಳಿ ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಅವರ ಸೇವೆಯನ್ನು ಸ್ಮರಿಸಿ, ಮುಂದಿನ ನಿವೃತ್ತಿ ಜೀವನ ಸುಖ, ಸಂತೋಷ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು.

Advertisement

ಓಣಂ ಹಬ್ಬವು ಮಲಯಾಳಿ ಸಮುದಾಯದ ಸಂಸ್ಕೃತಿ, ಪರಂಪರೆ ಹಾಗೂ ಸಹಬಾಳ್ವೆಯ ಪ್ರತೀಕವಾಗಿದ್ದು, ಕಾರ್ಯಕ್ರಮವು ಸದಸ್ಯರಲ್ಲಿ ಆತ್ಮೀಯತೆ ಮತ್ತು ಒಗ್ಗಟ್ಟಿನ ಭಾವನೆಯನ್ನು ಮತ್ತಷ್ಟು ಬಲಪಡಿಸಿತು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement