Lokayukta ಸ್ವಯುತ್ತತೆಗೆ ಹೊಸ ಅಮೈನ್ಮೆಂಟ್ ಗೆ ಸರ್ಕಾರಕ್ಕೆ ಪ್ರಸ್ತಾವನೆ- ಉಪ ಲೋಕಾಯುಕ್ತ ಕೆ.ಎನ್ ಫಣೀಂದ್ರ
ಕಾರವಾರ :- ಲೋಕಾಯುಕ್ತದಿಂದ( Lokayukta) ದಾಳಿ ನಡೆಸಿದರೇ ಶಿಕ್ಷೆ ಪ್ರಮಾಣ ಬಹಳಾ ಕಮ್ಮಿ ಇದೆ. ಈವರೆಗೆ ಕೇವಲ 10% ಮಾತ್ರ ಆರೋಪಿಗಳಿಗೆ ಶಿಕ್ಷೆ ಆಗಿದೆ.ಲೋಕಾಯುಕ್ತವನ್ನು ಇನ್ನೂ ಬಲಪಡಿಸಬೇಕಿದೆ.ಇದಕ್ಕಾಗಿ ಸರ್ಕಾರಕ್ಕೆ ಹೊಸ ಅಮೈನ್ಮೆಂಟ್ ಪ್ರಪೋಸಲ್ ಕೊಡಲಾಗಿದೆ ಎಂದು ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ ಹೇಳಿದರು. ಇಂದು ಕಾರವಾರ(karwar) ತಾಲೂಕಿನ ಶಿರವಾಡದ ನಗರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಲೋಕಾಯುಕ್ತ ಆಕ್ಟ ನಡಿ ಕೇವಲ 10% ಮಾತ್ರ ಶಿಕ್ಷೆ ಆಗಬಹುದು ಇದಕ್ಕೆ ನಾನಾ ಕಾರಣಗಳಿವೆ.ದೂರು ಕೊಟ್ಟವರೇ ಹಿಂದೆ ಸರಿಯುತ್ತಾರೆ , ಲೋಕಾಯುಕ್ತ ದಿಂದ ಶಿಕ್ಷೆಯಾದ ಪ್ರಮಾಣ ತುಂಬಾ ಕಮ್ಮಿ ಇದೆ.10 ರಿಂದ15 % ಇದ್ರೆ ಅದೇ ಹೆಚ್ಚಾಗಿದೆ.ಕಂಪ್ಲೆಟ್ ಕೊಟ್ಟಾಗಿನ ಉತ್ಸಾಹ ಎವಿಡೆನ್ಸ್ ಬರುವಾಗ ಇರೋದಿಲ್ಲ.ಹೀಗಾಗಿ ಶಿಕ್ಷೆಯ ಪ್ರಮಾಣ ಕಡಿಮೆ ಇದೆ.
ಲೋಕಾಯುಕ್ತಕ್ಕೆ ಇನ್ನೂ ಬಲಕೊಡಬೇಕಿದೆ,ಆಫೀಸರ್ಸ ತಪ್ಪು ಮಾಡಿದ್ದು ಕಣ್ಣೆದುರೇ ಇದ್ದರೂ ಸಸ್ಪೆಂಡ್ ಮಾಡುವ ಅಧಿಕಾರ ಇರೋದಿಲ್ಲ, ಎಲ್ಲದಕ್ಕೂ ಸ್ವಯುತ್ತತೆ ಇಲ್ಲ, ಸರ್ಕಾರಕ್ಕೆ ರೆಕಮೆಂಡ್ ಮಾಡಬೇಕು ಅಷ್ಟೇ. ಹೀಗಾಗಿ
ಲೋಕಾಯುಕ್ತಕ್ಕೆ ಸ್ವಯುತ್ತತೆ ಬೇಕು ಅದಕ್ಕೆ ಬೇಕಾಗುವ ಅಮೇನ್ಮೆಂಟ್ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಟ್ಟಿದ್ದೀವಿ .ತಾತ್ಕಾಲಿಕವಾದರೂ ಸಸ್ಪೆಂಡ್ ಮಾಡುವ ಅಧಿಕಾರ ಕೊಡಬೇಕು,ನಾವೇ ತನಿಖೆ ಮಾಡುವ ಅಧಿಕಾರ ಕೊಡಬೇಕು.ಲೋಕಾಯುಕ್ತದಲ್ಲಿ ಸಿಬ್ಬಂದಿ ಕೊರತೆ ಇದೆ 300 ರಿಂದ 400 ಪೋಸ್ಟ್ ಗಳು ಕಾಲಿ ಇದೆ. ಇದನ್ನೂ ಓದಿ:-Karwar | ಬಿಜೆಪಿ ವಿರುದ್ಧ ಶಿವರಾಮ್ ಹೆಬ್ಬಾರ್ ವಾಗ್ದಾಳಿ – “ವಾಷಿಂಗ್ ಮಿಷನ್‌ನಲ್ಲಿ ಹಾಕಿದರೆ ಎಲ್ಲವೂ ಕ್ಲೀನ್”
ಪೊಲೀಸ್ ಡಿಪಾರ್ಮೆಂಟ್ ನಿಂದಲೇ ಸಿಬ್ಬಂದಿ ಡೆಪ್ಯುಟೇಶನ್ ನಲ್ಲಿ ಬರಬೇಕು ,ಇಂಡಿಪೆಂಡೆಂಟ್ ಆಗಿ ಹುದ್ದೆಗೆ ತೆಗೆದುಕೊಳ್ಳಲು ಅಧಿಕಾರ ಇಲ್ಲ ಇದನ್ನು ಕೂಡ ಅಮೇನ್ಮೆಂಟ್ ನಲ್ಲಿ ಕೇಳಿದ್ದೇವೆ.ಪೊಲೀಸ್ ವಿಂಗ್, ಟೆಕ್ನಿಕಲ್,ಅಡ್ಮಿನಿಷ್ಟ್ರೇಟರ್ ಸ್ಟ್ರಾಂಗ್ ಇರಬೇಕು ,ನಮ್ಮಲ್ಲೇ ಲೂಪ್ ಹೋಲ್ಸ್ ಇದ್ದರೇ ಕೆಲಸ ಮಾಡಲು ಸಾಧ್ಯವಿಲ್ಲ .
ನಾವು ಸರ್ಕಾರಕ್ಕೆ 50% ನಿವೃತ್ತ ಸೈನಿಕರ ನೇಮಕ ಮಾಡಿಕೊಂಡು ಅವರ ಕೆಳಗೆ ಇತರರು ಕೆಲಸ ಮಾಡುವಂತೆ ಕೇಳಿಕೊಂಡಿದ್ದೇವೆ ,ಸೈನಿಕರಲ್ಲಿ ದೇಶಪ್ರೇಮವಾದರೂ ಇರುತ್ತದೆ.ಆಗ ಇನ್ನೂ ಚನ್ನಾಗಿ ಕೆಲಸ ಮಾಡಬಹುದು ಎಂದು ಲೋಕಾಯುಕ್ತದ ಸಮಸ್ಯೆ ಕುರಿತು ಹೇಳಿಕೊಂಡರು. ಇನ್ನು ಕಾರವಾರದ ನಗರಸಭೆ ಸ್ವಚ್ಛತೆ ಬಗ್ಗೆ ಅಸಮಧಾನ ಹೊರಹಾಕಿದ ಅವರು ಸ್ವಚ್ಛತೆ ಬಗ್ಗೆ ಆಧ್ಯತೆ ಕೊಡುವ ಹಾಗೂ ಕಮಿಟಿ ರಚಿಸುವಂತೆ ಸೂಚಿಸಿದರು.ಇದಲ್ಲದೇ ಕೋಣೆನಾಲ ,ಶಿರವಾಡದ ವಿವಿಧ ಭಾಗಗಳಿಗೆ ಭೇಟಿ ನೀಡಿ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು.
