Shivamogga | ನಾಲ್ಕು ಕಡೆ ದಾಳಿ: ಹೊಟೇಲ್‌, ತಿನಿಸು ಅಂಗಡಿಗಳಲ್ಲಿ ಕಂಡಿದ್ದೇನು?

Food safety officials conduct surprise raids and inspections at hotels and food shops in Shivamogga Food safety officials conduct surprise raids and inspections at hotels and food shops in Shivamogga
Food safety officials conduct surprise raids and inspections at hotels and food shops in Shivamogga

ಶಿವಮೊಗ್ಗ:shivamogga ನಗರದ ಹೊಟೇಲ್‌ ಹಾಗೂ ತಿನಿಸು ಮಳಿಗೆಗಳ ಮೇಲೆ ದಿಢೀರ್‌ ತಪಾಸಣೆ ಮುಂದುವರೆದಿದ್ದು, ಉಪ ವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ತಂಡ ಇಂದು ನಗರದ ನಾಲ್ಕು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಬಿ.ಹೆಚ್. ರಸ್ತೆಯ ಹೊಟೇಲ್‌ ತಾಜ್‌ನಲ್ಲಿ ಕಿಚನ್‌ನ ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟ ಪರಿಶೀಲಿಸಿದ ಅಧಿಕಾರಿಗಳು, ಪಾತ್ರೆ ತೊಳೆಯುವ ಸ್ಥಳದಲ್ಲಿ ಅಸ್ವಚ್ಛತೆ, ಕಬಾಬ್‌ಗೆ ಕೃತಕ ಬಣ್ಣ ಬಳಕೆ ಆರೋಪ, ಅವಧಿ ಮುಗಿದ ಹಾಲು ಹಾಗೂ ಪಾಮ್‌ ಆಯಿಲ್‌ ಬಳಕೆ ಸೇರಿದಂತೆ ಹಲವು ನ್ಯೂನತೆಗಳನ್ನು ಪತ್ತೆಹಚ್ಚಿದ್ದಾರೆ. ಆಹಾರ ಪದಾರ್ಥಗಳ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ.ಇದನ್ನೂ ಓದಿ:-Shivamogga | 5 ತಿಂಗಳ ಬಳಿಕ ಪ್ರವಾಸಿಗರಿಗೆ ತೆರೆದ ಸಕ್ರೆಬೈಲು ಆನೆ ಶಿಬಿರ; ಮೊದಲ ದಿನವೇ 534 ಪ್ರವಾಸಿಗರ ಭೇಟಿ

ನಂತರ ಹೊಟೇಲ್‌ ಬ್ರೈಟ್‌ನಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಕಿಚನ್‌, ಹಣ್ಣು, ಫ್ರೀಜರ್‌ನಲ್ಲಿದ್ದ ಮಾಂಸ ಮತ್ತು ಮೀನುಗಳ ಗುಣಮಟ್ಟ ಪರಿಶೀಲಿಸಿದರು. ಲೇಬಲ್‌ ಇಲ್ಲದ ಸೋಡಾ ಮಾರಾಟಕ್ಕೆ ಇಟ್ಟಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಆಹಾರದ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ನ್ಯೂನತೆಗಳು ದೃಢಪಟ್ಟರೆ ಲೈಸೆನ್ಸ್‌ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

Advertisement

ಮಿಳಘಟ್ಟ ರಸ್ತೆಯ ಲಕ್ಷ್ಮೀ ಕಾಂಡಿಮೆಂಟ್ಸ್‌ನಲ್ಲಿ ಸಿಹಿ ತಿಂಡಿಗಳಿಗೆ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಪಾಮ್‌ ಆಯಿಲ್‌ ಬಳಕೆ ಹಾಗೂ ತಿಂಡಿ ತಯಾರಿಕೆಯಲ್ಲಿ ಸ್ವಚ್ಛತೆ ಕಾಪಾಡದಿರುವುದಕ್ಕೂ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯೂನತೆಗಳನ್ನು ಸರಿಪಡಿಸದಿದ್ದರೆ ಕಾಂಡಿಮೆಂಟ್ಸ್‌ ಸೀಜ್‌ ಮಾಡುವುದಾಗಿ ಎಚ್ಚರಿಸಲಾಗಿದೆ.

ದುರ್ಗಿಗುಡಿಯ ಹೋಳಿಗೆ ಮನೆಯಲ್ಲೂ ತಪಾಸಣೆ ನಡೆಸಲಾಗಿದ್ದು, ಹೋಳಿಗೆಯ ಹೂರಣವನ್ನು ಸರಿಯಾಗಿ ಸಂಗ್ರಹಿಸದಿರುವುದು, ಉತ್ಪಾದನಾ ಮಾಹಿತಿಯಿಲ್ಲದ ತುಪ್ಪದ ಬಾಟಲಿ, ಕೃತಕ ಬಣ್ಣ ಬಳಕೆಯ ಚಕ್ಕುಲಿ ಪ್ಯಾಕೇಟ್‌ಗಳು ಹಾಗೂ ತಿನಿಸುಗಳ ಅವಧಿ ಕುರಿತ ಸೂಕ್ತ ಮಾಹಿತಿ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಒಂದೇ ನಿಮಿಷದಲ್ಲಿ ಲೈಸೆನ್ಸ್‌ ರದ್ದು: ಡಾ. ಮೈತ್ರಿ ಎಚ್ಚರಿಕೆ

ದಾಳಿ ವೇಳೆ ಮಾತನಾಡಿದ ಉಪ ವಿಭಾಗಾಧಿಕಾರಿ ಡಾ. ಮೈತ್ರಿ, ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಹೊಟೇಲ್‌ ತಾಜ್‌ ಮತ್ತು ಬ್ರೈಟ್‌ ಹೊಟೇಲ್‌ನಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

ಅಸ್ವಚ್ಛತೆ, ಲೇಬಲ್‌ ಇಲ್ಲದ ಆಹಾರ ಉತ್ಪನ್ನಗಳು, ಪಾಮ್‌ ಆಯಿಲ್‌, ಲೇಬಲ್‌ ಇಲ್ಲದ ತುಪ್ಪ ಮತ್ತು ಬೆಣ್ಣೆ ಹಾಗೂ ಟೇಸ್ಟಿಂಗ್‌ ಪೌಡರ್‌ ಬಳಕೆ ಸೇರಿದಂತೆ ಹಲವು ನ್ಯೂನತೆಗಳು ಕಂಡುಬಂದಿವೆ ಎಂದು ಹೇಳಿದರು.

ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ನಿಯಮಗಳನ್ನು ಪಾಲಿಸಬೇಕು. ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಲಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಲೈಸೆನ್ಸ್‌ ರದ್ದುಗೊಳಿಸಲಾಗುವುದು ಎಂದು ಡಾ. ಮೈತ್ರಿ ಎಚ್ಚರಿಕೆ ನೀಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement