Yallapur |ಉಡಬೇಟೆ ಯಾಡಿದ ಅಪ್ಪ ಮಗನ ಬಂಧನ

Father and son arrested in Yellapur ud (Indian monitor lizard) hunting case; two dead monitor lizards recovered in Kannigeri Father and son arrested in Yellapur ud (Indian monitor lizard) hunting case; two dead monitor lizards recovered in Kannigeri
Father and son arrested in Yellapur ud (Indian monitor lizard) hunting case; two dead monitor lizards recovered in Kannigeri
Kannadavani WhatsApp image
ಪ್ರತಿ ದಿನದ ಸುದ್ದಿ ಓದಲು ನಮ್ಮ ವಾಟ್ಸ್ ಅಪ್ ಗ್ರೂಪ್ ಸೇರಲು ಫೋಟೋ ದ ಮೇಲೆ ಕ್ಲಿಕ್ ಮಾಡಿ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur)ತಾಲೂಕಿನ ಕಣ್ಣಿಗೇರಿ ಗ್ರಾಮದಲ್ಲಿ ಉಡ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತಂದೆ-ಮಗನನ್ನು ಬಂಧಿಸಿದೆ.ಬಂಧಿತರನ್ನು ಇನಾಸ್ ಬಸ್ಥ್ಯಾಂವ್ ಸಿದ್ದಿ ಹಾಗೂ ಪ್ರಕಾಶ್ ಇನಾಸ್ ಸಿದ್ದಿ ಎಂಬುವವರಾಗಿದ್ದಾರೆ.ಕಾಡಿನಲ್ಲಿ ಉಡ ಬೇಟೆ ಮಾಡಿ ರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ದೊರತ ಹಿನ್ನಲೆಯಲ್ಲಿ ಕಣ್ಣಿಗೇರಿ ಗ್ರಾಮದ ನಿವಾಸಿ

ಇನಾಸ್ ಬಸ್ಥ್ಯಾಂವ್ ಸಿದ್ದಿ ಮನೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಎರಡು ಮೃತಪಟ್ಟ ಉಡಗಳ ಮೃತದೇಹಗಳು ಪತ್ತೆಯಾಗಿವೆ. ಇದನ್ನೂ ಓದಿ:-Yallapur | ಮೀನು ಮಾರಾಟಕ್ಕೆ ಆಕ್ಷೇಪ -ಚೀಫ್ ಆಫೀಸರ್ ರಿಂದ ಮಹಿಳೆಯರ ಮೇಲೆ ಹಲ್ಲೆ 

ಉಡಗಳನ್ನು ಬೇಟೆಯಾಡಿ ಕೊಂದಿರುವ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಉಡದ ಮೃತದೇಹಗಳನ್ನು ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ್ದಾರೆ.ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement