ಚಿತ್ರ ವರದಿ -ರಾಜುನಾಯ್ಕ. ಕುಮಟಾ.
ಕಾರವಾರ 27 ಸೆಪ್ಟೆಂಬರ್ 2026 :- ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ತಾಲೂಕಿನ ಅರಗಾ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಹೊತ್ತಿ ಉರಿದಿದ್ದು, ಸವಾರನ ದೇಹ ಸಂಪೂರ್ಣವಾಗಿ ಜಖಂಗೊಂಡಿದೆ.ಅಪಘಾತದ ಬಳಿಕ ಲಾರಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ .ಮೃತರನ್ನು ಬಿಡಗಾ ಮೂಲದ ಗಣಪತಿ ಗೌಡ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:-Karwar | ₹26 ಲಕ್ಷ ಪಾವತಿಸಿದರೂ ಮತ್ತಷ್ಟು ಬಡ್ಡಿ ಬೇಡಿಕೆ ಆರೋಪ: ರಿವಾಲ್ವರ್‌ನಿಂದ ಗುಂಡಿಕ್ಕುವುದಾಗಿ ಬೆದರಿಕೆ; ದೂರು ದಾಖಲು
ಬಿಣಗಾದ ರಾಷ್ಟ್ರೀಯ ಹೆದ್ದಾರಿ 66 ರಿಂದ ಕಾರವಾರದ ಸಂತೆಗೆ ಬರುತಿದ್ದ ಸ್ಕೂಟಿ ಸವಾರ ಗಣಪತಿ ಗೌಡ ನಿಗೆ ಕಾರವಾರದ ಕಡೆಯಿಂದ ಅಂಕೋಲದ ಕಡೆಗೆ ತೆರಳುತಿದ್ದ ಲಾರಿಯು ಡಿಕ್ಕಿಯಾಗಿ ಅದರಮೇಲೆಯೇ ಹರಿದು ಸಾಗಿದೆ. ಇದರಿಂದಾಗಿ ಸ್ಕೂಟಿಗೆ ಬೆಂಕಿ ತಗಲಿ ಸಂಪೂರ್ಣ ಸುಟ್ಟುಹೋದರೇ ಸವಾರ ಸಂಪೂರ್ಣ ನಜ್ಜುಗುಜ್ಜಾಗಿದ್ದು ಘಟನೆಯ ತೀವ್ರತೆ ತೋರಿಸುತ್ತದೆ.ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವು ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
