Sagar| ಮಳೆಯ ನಡುವೆಯೂ ಕಂಗೊಳಿಸಿದ ಶ್ರೀನಗರದ ಸಾಂಪ್ರದಾಯಿಕ ಬೆಂಕಿಯಾಟ- ವಿಡಿಯೋ ನೋಡಿ

Traditional fire play performance during Ganesh Visarjan in Srinagar, Sagara, amid rain. Traditional fire play performance during Ganesh Visarjan in Srinagar, Sagara, amid rain.
Traditional fire play performance during Ganesh Visarjan in Srinagar, Sagara, amid rain.

Sagar| ಮಳೆಯ ನಡುವೆಯೂ ಕಂಗೊಳಿಸಿದ ಶ್ರೀನಗರದ ಸಾಂಪ್ರದಾಯಿಕ ಬೆಂಕಿಯಾಟ- ವಿಡಿಯೋ ನೋಡಿ

ವಿಡಿಯೋ ವರದಿ – ಸೂರಜ್ ನಾಯರ್.

Advertisement

ಶಿವಮೊಗ್ಗ ಜಿಲ್ಲೆಯ ಸಾಗರ (sagar)ನಗರದ 8ನೇ ವಾರ್ಡ್‌ನ ಶ್ರೀನಗರದಲ್ಲಿ ಗಣೇಶ ವಿಸರ್ಜನಾ ಸಂದರ್ಭದಲ್ಲಿ ನಡೆದ ಸಾಂಪ್ರದಾಯಿಕ ಬೆಂಕಿಯಾಟ ಮಳೆಯ ನಡುವೆಯೂ ಜನರ ಗಮನ ಸೆಳೆಯಿತು.

ಶ್ರೀನಗರ ಯುವಜನ ಸಂಘ ಹಾಗೂ ಶ್ರೀನಗರ ಸುವರ್ಣ ಗಣೇಶೋತ್ಸವ ಸಮಿತಿ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸುಮಾರು ಐದು ದಶಕಗಳಿಂದ ಶ್ರೀನಗರದಲ್ಲಿ ಬೆಂಕಿಯಾಟದ ಪರಂಪರೆ ಮುಂದುವರಿದುಕೊಂಡು ಬಂದಿದೆ.

ಮಳೆ ಸುರಿಯುತ್ತಿದ್ದರೂ ಬೆಂಕಿಯಾಟ ಪ್ರದರ್ಶನದ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ.

ಒಂದೆಡೆ ಮಳೆಯ ಹನಿಗಳು… ಮತ್ತೊಂದೆಡೆ ಆಕಾಶದೆತ್ತರಕ್ಕೆ ಚಿಮ್ಮಿದ ಬೆಂಕಿಯ ಜ್ವಾಲೆಗಳು!

ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯರು ಬೆಂಕಿಯಾಟವನ್ನು ಕುತೂಹಲದಿಂದ ವೀಕ್ಷಿಸಿದರು.

ಹಿರಿಯರು ಆರಂಭಿಸಿದ ಈ ಪರಂಪರೆಯನ್ನು ಇಂದಿನ ಯುವಕರು ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷ.

ಗಣೇಶ ವಿಸರ್ಜನೆ, ಜನಪದ ಕಲೆ ಮತ್ತು ಹಲವು ತಲೆಮಾರುಗಳ ನೆನಪುಗಳನ್ನು ಬೆಸೆದುಕೊಂಡಿರುವ ಶ್ರೀನಗರದ ಈ ಬೆಂಕಿಯಾಟ, ಸಾಗರದ ಗಣೇಶೋತ್ಸವಕ್ಕೆ ತನ್ನದೇ ಆದ ಸಾಂಸ್ಕೃತಿಕ ಮೆರುಗು ನೀಡುತ್ತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement