Sabarimala | ಅಯ್ಯಪ್ಪ ಸ್ವಾಮಿ ದೇವಾಲಯದ ಭಂಡಾರದಿಂದ ಚಿನ್ನದ ಕಿರೀಟ ನಾಪತ್ತೆ; ಬದಲಿಗೆ ನಕಲಿ ಕಿರೀಟ ಪತ್ತೆ!

ಶಬರಿಮಲೆ ದೇವಸ್ಥಾನ ಶಬರಿಮಲೆ ದೇವಸ್ಥಾನ
ಶಬತಿಮಲೆ
Kannadavani WhatsApp image
ಪ್ರತಿ ದಿನದ ಸುದ್ದಿ ಓದಲು ನಮ್ಮ ವಾಟ್ಸ್ ಅಪ್ ಗ್ರೂಪ್ ಸೇರಲು ಫೋಟೋ ದ ಮೇಲೆ ಕ್ಲಿಕ್ ಮಾಡಿ

ಶಬರಿಮಲೆ (Sabarimala):- ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅತ್ಯಂತ ಮೌಲ್ಯಯುತ ಚಿನ್ನದ ಕಿರೀಟವೊಂದು ನಾಪತ್ತೆಯಾಗಿರುವುದು ಭಾರಿ ಸಂಚಲನಕ್ಕೆ ಕಾರಣವಾಗಿದೆ.

ದೇವರಿಗೆ ಅರ್ಪಿಸಲಾಗಿದ್ದ ಅಸಲಿ ಚಿನ್ನದ ಕಿರೀಟದ ಬದಲಿಗೆ, ಅದೇ ರೀತಿಯ ವಿನ್ಯಾಸ ಮತ್ತು ಗಾತ್ರ ಹೊಂದಿರುವ ನಕಲಿ ಕಿರೀಟವನ್ನು ಭಂಡಾರದಲ್ಲಿ ಇಡಲಾಗಿರುವುದು ಲೆಕ್ಕಪರಿಶೋಧನೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ:-Gokarna |ಪೂಜೆ ನೆಪದಲ್ಲಿ ವೃದ್ಧ ದಂಪತಿಗಳಿಂದ 8 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ ನಾಗಸಾಧುಗಳು ಘಟನೆಗೆ ಬಿಗ್ ಟ್ವಿಸ್ಟ್ ಕೊಟ್ಟ ಪೊಲೀಸರು

ಕೇರಳ ಹೈಕೋರ್ಟ್ ನಿರ್ದೇಶನದಂತೆ ಶಬರಿಮಲೆ ದೇವಸ್ಥಾನದ ಪವಿತ್ರ ಆಭರಣಗಳ ಪಟ್ಟಿಯ ಪರಿಶೀಲನೆ ನಡೆಯುತ್ತಿತ್ತು. ಆಮಿಕ್ಯೂಸ್ ಕ್ಯೂರಿ ಜಸ್ಟಿಸ್ ಕೆ.ಟಿ. ಶಂಕರನ್ ನೇತೃತ್ವದಲ್ಲಿ ನಡೆಯುತ್ತಿದ್ದ ಈ ಪರಿಶೀಲನೆಯ ಸಂದರ್ಭದಲ್ಲಿ ಸನ್ನಿಧಾನದ ಭಂಡಾರದಲ್ಲಿದ್ದ ಕಿರೀಟದ ತೂಕದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ.

Advertisement

ಅಸಲಿ ಕಿರೀಟ 55.72 ಪವನ್ ಅಂದರೆ ಸುಮಾರು 445.78 ಗ್ರಾಂ ತೂಕ ಹೊಂದಿತ್ತು. ಆದರೆ ಭಂಡಾರದಲ್ಲಿ ಪತ್ತೆಯಾದ ಕಿರೀಟ ಕೇವಲ 240 ಗ್ರಾಂ ತೂಕ ಹೊಂದಿದೆ. ಹೀಗಾಗಿ ಸುಮಾರು 206 ಗ್ರಾಂನಷ್ಟು ತೂಕದ ವ್ಯತ್ಯಾಸ ಕಂಡುಬಂದಿದೆ.

2012ರಲ್ಲಿ ಅಯ್ಯಪ್ಪನಿಗೆ ಅರ್ಪಣೆ

ಈ ಚಿನ್ನದ ಕಿರೀಟವನ್ನು 2012ರ ಆಗಸ್ಟ್ 17ರಂದು ಚಿಂಗಂ ಮಾಸದ ಪೂಜೆಯ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಗೆ ಅರ್ಪಿಸಲಾಗಿತ್ತು. ತಮಿಳುನಾಡಿನ ಚಾರ್ಟರ್ಡ್ ಅಕೌಂಟೆಂಟ್‌ಗಳ ಗುಂಪೊಂದು ಈ ಕಿರೀಟವನ್ನು ಕಾಣಿಕೆಯಾಗಿ ನೀಡಿತ್ತು.ಇದನ್ನೂ ಓದಿ:-Karnataka | ಬೆಂಗಳೂರಿಗೆ ಬಂದ ಶಾಸಕರು ಎರಡೆರೆಡು ಮದುವೆ ಆಗಿದ್ದಾರೆ ಅದರ ಹಿಸ್ಟರಿ ನನ್ನಬಳಿ ಇದೆ-ಡಿಕೆ ಸ್ಪೋಟಕ ಹೇಳಿಕೆ

ದೇವಾಲಯದ ಆಡಳಿತ ಮಂಡಳಿಯಾದ ತಿರುವಾಂಕೂರು ದೇವಸ್ವಂ ಬೋರ್ಡ್ ಭಕ್ತರಿಗೆ ಅಧಿಕೃತ ರಸೀದಿಯನ್ನೂ ನೀಡಿತ್ತು.

ಸಾಮಾನ್ಯವಾಗಿ ದೇವಸ್ಥಾನಕ್ಕೆ ಬರುವ ಮೌಲ್ಯಯುತ ಆಭರಣಗಳನ್ನು ಸನ್ನಿಧಾನದ ಭಂಡಾರದಲ್ಲಿ ಇರಿಸಿ ಬಳಿಕ ಹೆಚ್ಚಿನ ಭದ್ರತೆಯ ಕೇಂದ್ರೀಯ ಭಂಡಾರಕ್ಕೆ ವರ್ಗಾಯಿಸಬೇಕಾಗುತ್ತದೆ. ಆದರೆ ಈ ಕಿರೀಟವನ್ನು ಕೇಂದ್ರೀಯ ಭಂಡಾರಕ್ಕೆ ವರ್ಗಾಯಿಸಿದ ದಾಖಲೆಗಳು ಲಭ್ಯವಾಗಿಲ್ಲ ಎನ್ನಲಾಗಿದೆ.

CCTV ಇಲ್ಲದಿರುವುದು ತನಿಖೆಗೆ ಸವಾಲು

ಸನ್ನಿಧಾನದ ಭಂಡಾರದಲ್ಲಿ CCTV ಕಣ್ಗಾವಲು ಇಲ್ಲದಿರುವುದು ಪ್ರಕರಣದ ತನಿಖೆಗೆ ಮತ್ತಷ್ಟು ಸವಾಲಾಗಿದೆ.

ಅಲ್ಲದೆ, ಶಬರಿಮಲೆಯ ಕಾರ್ಯನಿರ್ವಾಹಕ ಮತ್ತು ಆಡಳಿತಾಧಿಕಾರಿಗಳ ಅವಧಿ ಸಾಮಾನ್ಯವಾಗಿ ಒಂದು ವರ್ಷವಾಗಿರುವುದರಿಂದ, ಕಿರೀಟ ಯಾವ ಅವಧಿಯಲ್ಲಿ ಮತ್ತು ಯಾರ ವಶದಲ್ಲಿದ್ದಾಗ ನಾಪತ್ತೆಯಾಯಿತು ಎಂಬುದನ್ನು ಪತ್ತೆಹಚ್ಚುವುದು ತನಿಖಾಧಿಕಾರಿಗಳಿಗೆ ಸವಾಲಾಗಿದೆ.

ತಿರುವಾಂಕೂರು ದೇವಸ್ವಂ ಬೋರ್ಡ್ ಅಧ್ಯಕ್ಷ ಕೆ. ಜಯಕುಮಾರ್, ಕಿರೀಟ ನಾಪತ್ತೆಯಾಗಿರುವ ವಿಚಾರ ಮಾಧ್ಯಮಗಳ ಮೂಲಕ ತಿಳಿದುಬಂದಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ಕಿರೀಟ ನಿಜವಾಗಿಯೂ ನಾಪತ್ತೆಯಾಗಿದ್ದರೆ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಯಾರು ಅಸಲಿ ಕಿರೀಟವನ್ನು ತೆಗೆದು ನಕಲಿ ಕಿರೀಟವನ್ನು ಇಟ್ಟರು ಎಂಬುದು ಅಧಿಕೃತ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement