ಕಾರವಾರ :-ಭಾರತ ದೇಶದ (india )ಘನತೆಯನ್ನು ಎತ್ತಿಹಿಡಿಯಬೇಕಾದ್ದು ಪತ್ರಿಕಾ ಧರ್ಮ ದೇಶದ ಭದ್ರತೆ ವಿಷಯ ಬಂದಾಗ ನಮ್ಮಗಳ ನಿಯತ್ತು ದೇಶದಮೇಲೆ ಇರಲೇ ಬೇಕು .ಆದರೇ ದೇಶ ಕಾಯುವವರೇ ಬ್ರಷ್ಟಾಚಾರಕ್ಕೆ ಇಳಿದು ,ದೇಶದ ಜನರ ತೆರಿಗೆ ಹಣವನ್ನ ಮನೋಪೋಲಿ ಖರ್ಚುಮಾಡಿ ಬ್ರಷ್ಟಾಚಾರ ಮಾಡಿದಾಗ, ದೇಶದ ರಹಸ್ಯವನ್ನ ವಿರೋಧಿ ದೇಶಕ್ಕೆ ನೀಡಿದರೇ ಅದನ್ನು ಕ್ಷಮಿಸಲಾರದು. Official Secrets Act, 1923 ನಲ್ಲಿ ನಿಯಮಗಳನ್ನ ಗಮನದಲ್ಲಿ ಇಟ್ಟುಕೊಂಡು ಈ ವರದಿಯನ್ನ ಮಾಡಲಾಗಿದೆ.
ಕಾರವಾರದ ಕದಂಬ ನೌಕಾನೆಲೆಯಲ್ಲಿ ದೇಶದ ಅತೀ ದೊಡ್ಡ ವಿಮಾನ ವಾಹಕ ನೌಕೆ INS ವಿಕ್ರಮಾಧಿತ್ಯ ಹಡಗು ತನ್ನ ನೆಲೆ ಹೊಂದಿದೆ. 1600 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಒಂದು ನೌಕೆಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದು ವಿಕಿಪೀಡಿಯಾ ಮಾಹಿತಿ.
ಇದನ್ನೂ ಓದಿ:-Navy | ಕನ್ನಡವಾಣಿ ವರದಿ ಫಲಶೃತಿ -ಕನ್ನಡ ನಾಮಫಲಕ ಅಳವಡಿಸಿದ ನೌಕಾದಳ
ಹೀಗಾಗಿ ಈ ನೌಕೆಗೆ ಆಹಾರ ಸಾಮಗ್ರಿಗಳು, ತರಕಾರಿ,ಮಾಂಸ ಗಳನ್ನ ಕೊಳ್ಳಲು ಟೆಂಡರ್ ಕರೆಯಲಾಗುತ್ತದೆ. ಪ್ರತಿ ತಿಂಗಳು ಆಹಾರ ಸಾಮಗ್ರಿಗಳೇ ಅಂದಾಜು,40 ರಿಂದ 50ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ಪ್ರತಿ ತಿಂಗಳು ತಮ್ಮ ಹಡಗಿಗೆ ಬೇಕಾದ ತರಕಾರಿ, ಮಾಂಸ, ಮೊಟ್ಟೆ , ಜಿನಸಿ ಪದಾರ್ಥಗಳನ್ನ ಕಾರವಾರದಲ್ಲಿ ಟೆಂಡರ್ ಹಿಡಿದವರು ಖರೀದಿ ಮಾಡತ್ತಾರೆ. ಆದರೇ ಈ ಖರೀದಿಯಲ್ಲಿಯೇ ಬ್ರಷ್ಟಾಚಾರದ ಕುರಿತು ಪ್ರಶ್ನೆ ಎದ್ದಿದೆ.
ಹೀಗೆ ಹಡಗಿನಲ್ಲಿ ಪದಾರ್ಥ ಪೂರೈಕೆಗೆ ಟೆಂಡರ್ ಪಡೆದವರು ಕಮಾಂಡರ್ ಗಳಿಗೆ ಹಪ್ತ ಕೊಡಬೇಕು ಎಂಬ ಆರೋಪ ಕೇಳಿಬಂದಿದೆ. ಟೆಂಡರ್ ಪಡೆದವರು ನೇರ ಬಿಲ್ ನೀಡೋದ್ರಿಂದ ಜಿ.ಎಸ್.ಟಿ ಕಡಿತವಾಗಿ ಅವರ ಖಾತೆಗೆ ಹಣ ಹೋಗುವಾಗ ಇದರಲ್ಲಿ ಹೇಗೆ ಬ್ರಷ್ಟಾಚಾರ ನಡೆಯಲು ಸಾಧ್ಯ ಎಂಬ ಪ್ರಶ್ನೆ ಏಳುವುದು ಸಹಜ.
ಇದನ್ನೂ ಓದಿ:-Navy |ಕದಂಬ ನೌಕಾನೆಲೆಯಲ್ಲಿ ಸದ್ದು ಮಾಡದ ಅಪರಾಧಗಳು| ಬೆಚ್ಚಿ ಬೀಳೋ ರಹಸ್ಯ!?
ಇದರಲ್ಲೇ ಇರುವುದು ರಹಸ್ಯ! ಹೌದು ಟೆಂಡರ್ ಪಡೆದವರು ಕಮಿಷನ್ ನೀಡದಿದ್ದರೇ ಇವುಗಳನ್ನು ರಿಸೀವ್ ಮಾಡುವ ಕಮಾಂಡರ್ ಕ್ವಾಲಿಟಿ ಸರಿ ಇಲ್ಲ ಎಂದು ತಿರಸ್ಕರಿಸಬಹುದು. ಇಲ್ಲಿ ಎಲ್ಲವೂ ಸರಿ ಇರಬೇಕು ಎಂದರೇ ತಿಂಗಳ ಪದಾರ್ಥಗಳಲ್ಲಿ ಕಮಿಷನ್ ನನ್ನು ನೀಡಬೇಕು ಎಂಬುದು ಆರೋಪ.
ಹೇಗೆ ಕಮಿಷನ್ ನೀಡುತ್ತಾರೆ?
ಉದಾಹರಣೆಗೆ ಒಂದು ತಿಂಗಳಿಗೆ 500 ಕೆಜಿ ಅಕ್ಕಿ ಬೇಕೆಂದು ಅಂದಾಜಿಸಿದರೇ 500 kg ಬದಲು 250 ಕೆಜಿ ಅಕ್ಕಿ ಮಾತ್ರ ಸರಬರಾಜಾಗುತ್ತದೆ.ಆದರೇ ಬಿಲ್ ನಲ್ಲಿ 500 ಕೆಜಿಯನ್ನೇ ನಮೋದು ಮಾಡಲಾಗುತ್ತದೆ. ಉಳಿದ 250 ಕೆಜಿಯ ಅಕ್ಕಿಯ ಜಿ.ಎಸ್.ಟಿ ಕಡಿತ ಮಾಡಿ ಉಳಿದ ಹಣವನ್ನು ಕಮಾಂಡರ್ ಹೋಗುತ್ತದೆ. ಕಮಾಂಡರ್ ಗಳು ನೇರ ಹಣ ವರ್ಗಾವಣೆ ಮಾಡಿಸಿಕೊಳ್ಳುವುದಿಲ್ಲ .ಬದಲಿಗೆ ಮಧ್ಯವರ್ತಿಗಳನ್ನ ಇಟ್ಟಿರುತ್ತಾರೆ.ಅವರ ಖಾತೆಗೆ ಈ ಹಣ ವರ್ಗಾವಣೆ ಆಗುತ್ತದೆ. ಅವರ ಖಾತೆಗಳು ಯಾವುದೇ ನ್ಯಾಷನಲೈಸ್ ಬ್ಯಾಂಕ್ ಗಳದ್ದು ಇರುವಿದಿಲ್ಲ. ಬದಲಿಗೆ ಸಹಕಾರಿ ಬ್ಯಾಂಕ್ ಖಾತೆಗಳಾಗಿರುತ್ತವೆ.ಈ ಖಾತೆಗಳ ಮಾಹಿತಿ ಕಲೆಹಾಕುವುದು ಅಷ್ಟು ಸುಲಭ ಅಲ್ಲ. ಮಧ್ಯವರ್ತಿ ವ್ಯಕ್ತಿ ಇವರ ಸಂಬಂಧಿಕ ಅಥವಾ ನಂಬಿಕಸ್ತನಾಗಿರಿತ್ತಾನೆ. ಈತನ ಸಹಕಾರಿ ಬ್ಯಾಂಕ್ ಖಾತೆಗೆ ವರ್ಗವಾದಮೇಲೆ ಈ ಹಣ ಕುಟುಂಬದವರ ಖಾತೆಗೆ ನಂತರ ಕಮಾಂಡರ್ ಗಳ ಸಹಕಾರಿ ಬ್ಯಾಂಕ್ ಖಾತೆಗೆ ವರ್ಗವಾಗುತ್ತದೆ ಎಂಬುದು ನೌಕಾದಳ ಮೂಲದ ಮಾಹಿತಿ. ಹೀಗೆ ಕಮಾಂಡರ್ ಗಳು ನಿಗದಿ ವಸ್ತುಗಳಿಗಿಂತ ಕಡಿಮೆ ವಸ್ತು ಖರೀದಿ ಮಾಡಿ ನಿಗದಿ ವಸ್ತುಗಳಲ್ಲಿ ಪಾಲು ಪಡೆಯುತ್ತಾರೆ. ಹೀಗೆ ಕೇವಲ ಆಹಾರ ಪದಾರ್ಥಗಳಲ್ಲಿ ಮಾತ್ರ ನಡೆಯುವುದಿಲ್ಲ ಬದಲಾಗಿ ಯಂತ್ರೋಪಕರಣದಲ್ಲೂ ಇದೇ ಮಾದರಿ ವಂಚನೆ ನಡೆಯುತ್ತದೆ ಎಂಬುದು ಇಲ್ಲಿ ಕೆಲಸ ಮಾಡುವ ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯ ಆರೋಪ.
ಪ್ರತಿ ತಿಂಗಳು ಆಹಾರ ಪದಾರ್ಥದಲ್ಲೇ 25 ಲಕ್ಷದಿಂದ 30 ಲಕ್ಷವನ್ನು ಈ ಕರ್ತವ್ಯಕ್ಕೆ ನಿಯೋಜಿಸಿದ ಕಮಾಂಡರ್ ಗಳು ಬ್ರಷ್ಟಾಚಾರದ ಮೂಲಕ ವಂಚಿಸಿದರೇ ವರ್ಷಕ್ಕೆ ಎಷ್ಟಾಗಬಹುದು ಎಂಬುದನ್ನ ಊಹಿಸಲು ಸಾಧ್ಯವಿಲ್ಲ. ಇವರು ಆಯ್ಕೆಮಾಡಿಕೊಂಡ ಮಾರ್ಗ ವನ್ನ ಸಿ.ಎ.ಜಿಯ ಆಡಿಟರ್ ಜನರಲ್ ನಿಂದಲೂ ಪತ್ತೆ ಮಾಡಲು ಕಷ್ಟಸಾಧ್ಯ.
ಹೀಗಾಗಿ Ministry of Defence – Vigilance mechanism ಜಾಗೂ CBI ಇದರ ಬಗ್ಗೆ ಆಂತರಿಕ ತನಿಖೆ ನಡೆಸಿ ಇಂತಹ ಬ್ರಷ್ಟ ,ದೇಶದ್ರೋಹಿ ಅಧಿಕಾರಿಗಳನ್ನ ಪತ್ತೆಮಾಡಿ ಕಾನೂನಾತ್ಮಕವಾಗಿ ಶಿಕ್ಷಿಸಬೇಕು ಎಂಬುದು ಪ್ರತಿಯೊಬ್ಬ ದೇಶಪ್ರೇಮಿಗಳ ಮಾತು.
ದೇಶದಲ್ಲಿ ಎಷ್ಟೋ ಜನರು ಪ್ರತಿ ತುತ್ತಿಗೂ ಕಷ್ಟಪಡುವವರಿದ್ದಾರೆ. ಆದರೇ ನೌಕಾದಳದಲ್ಲಿ ಚಿಕ್ಕ ಗೆಟ್ ಟುಗೇದರ್ ಪಾರ್ಟಿ ಆಯೋಜನೆ ಮಾಡಿದರೂ ,ಅಥವಾ ಕಮಿಷನ್ ನಂತಹ ಕಾರ್ಯಕ್ರಮ ಆಯೋಜನೆ ಮಾಡಿದರೇ 50 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತಾರೆ,ಅದು ಕೇವಲ ಊಟ,ಗುಂಡಿಗಾಗಿ. ಇನ್ನು ಇಂತಹ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನ ಬೇಕಾಬಿಟ್ಟಿ ಎಸೆದ ಘಟನೆಗಳೂ ನೌಕಾದಳದ ಆವರಣದಲ್ಲಿ ನಡೆದಿದೆ. ಆಂತರಿಕ ಆಡಿಟ್ ಆದರೂ ಒಂದು ಚಿಕ್ಕ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಹಣ ಖರ್ಚು ಮಾಡುವ ಈ ನೌಕಾದಳದ ಕೆಲವು ಅಧಿಕಾರಿಗಳನ್ನ ಪ್ರಶ್ನೆ ಮಾಡುವುದಿಲ್ಲವೇ ? ಖರ್ಚಿನ ವಿವರ ಕೇಳುವುದಿಲ್ಲವೇ ಎಂಬ ಪ್ರಶ್ನೆ ಏಳುವಂತೆ ಮಾಡುತ್ತಿದೆ. ಮುಂದೊಂದು ದಿನ ನೌಕಾದಳ ವಿಚಾರವಾಗಿ ಜನ ಪ್ರಶ್ನೆ ಮಾಡುವ ದಿನ ದೂರವಿಲ್ಲ ಎನ್ನಬಹುದಾಗಿದೆ.
ಸ್ಥಳೀಯರೊಂದಿಗಿಲ್ಲ ಉತ್ತಮ ಬಾಂಧವ್ಯ.
ಇನ್ನು ಕಾರವಾರದ ಮಟ್ಟಿಗೆ ಹೇಳುವುದಾದರೇ ಸಿವಿಲಿಯನ್ ಗಳನ್ನ ಎರಡನೇ ದರ್ಜೆ ಜನರನ್ನಾಗಿ ನೋಡಲಾಗುತ್ತದೆ. ಇಲ್ಲಿನ ನೌಕಾದಳದ ಶಾಲೆಯಲ್ಲಿ ಇದನ್ನ ಗಮನಿಸಬಹುದಾಗಿದೆ.ಇನ್ನು ನೌಕಾನೆಲೆಗೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆರಳುವ ಸ್ಥಳೀಯರನ್ನ ಕೆಟ್ಟ ಮಟ್ಟದಲ್ಲಿಯೇ ನಡೆಸಿಕೊಳ್ಳುವ ನೌಕಾದಳ ಹಿಂದಿನ ಬ್ರಿಟೀಷ್ ಪದ್ಧತಿಯನ್ನ ಬಿಟ್ಟೇ ಇಲ್ಲ ಎನ್ನುವಂತಿದೆ. ಇನ್ನು ಈ ನೌಕಾದಳದ ಸಿಬ್ಬಂದಿ,ಅಧಿಕಾರಿಗಳು ಕಾರವಾರದ ಮಾರುಕಟ್ಟೆಗೆ ಬಂದರೇ ಸಾಕು ,ಒಂದೇ ಒಂದು ಕಿರಿಕ್ ಇಲ್ಲದೇ ಹೋಗುವವರಲ್ಲ. ಹೀಗಿರುವ ನೌಕಾದಳದ ಸಿಬ್ಬಂದಿಗಳನ್ನ ಸರಿ ದಾರಿಗೆ ತರುವವರು ಯಾರು ಎಂಬ ಪ್ರಶ್ನೆ ಕಾಡುತ್ತದೆ.
