Karwar | ನೆನೆಗುದಿಗೆಗೆ ಬಿದ್ದ ಯೋಜನೆಗಳಿಗೆ ವೇಗಕೊಡಲು ಸಿದ್ದರಾದ ಡಿ.ಸಿ ಹರ್ಷಲ್ ಏಂದ್ರು ನೋಡಿ.

ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಭೂಯರ್ ಹರ್ಷಲ್ ನಾರಾಯಣರಾವ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡುತ್ತಿರುವುದು. ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಭೂಯರ್ ಹರ್ಷಲ್ ನಾರಾಯಣರಾವ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡುತ್ತಿರುವುದು.
ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಭೂಯರ್ ಹರ್ಷಲ್ ನಾರಾಯಣರಾವ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡುತ್ತಿರುವುದು.

ಆರೋ ಡ್ರೈ ಕ್ಲೀನ್ ಕಾರವಾರಮಿಲನ್ ಎಂಟರ್ ಪ್ರೈಸೆಸ್ ಉತ್ತರ ಕನ್ನಡ

Karwar | ನೆನೆಗುದಿಗೆಗೆ ಬಿದ್ದ ಯೋಜನೆಗಳಿಗೆ ವೇಗಕೊಡಲು ಸಿದ್ದರಾದ ಡಿ.ಸಿ ಹರ್ಷಲ್ ಏಂದ್ರು ನೋಡಿ.

(ವಿಡಿಯೋ ಸುದ್ದಿಯ ಕೊನೆಯಲ್ಲಿದೆ ನೋಡಿ👇)

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಗೆ ಹೊಸದಾಗಿ ಜಿಲ್ಲಾಧಿಕಾರಿಯಾಗಿ ಮಹಾರಾಷ್ಟ್ರ ಮೂಲದ ಭೂಯರ್  ಹರ್ಷಲ್ ನಾರಾಯಣರಾವ್ ರವರು ಅಧಿಕಾರವನ್ನು ಇಂದು ವಹಿಸಿಕೊಂಡಿದ್ದಾರೆ. ಭಟ್ಕಳದ ಶಾಸಕರು , ಉಪಸಭಾಪತಿಯೂ ಆಗಿರುವ ಮಂಕಾಳು ವೈದ್ಯರವರ ಉತ್ತಮ ಸಂಪರ್ಕ ಹೊಂದಿರುವ ಹಾಗೂ ಕಾರವಾರ ಶಾಸಕ ಸತೀಶ್ ಸೈಲ್ ರವರ ಪರಿಚಿತರು ಆಗಿರುವ ಅವರು ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡುದವರು. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಳ್ಳುತಿದ್ದಂತೆ ಆಡಿದ ಮಾತುಗಳು ಇದೀಗ ಹಲವು ಪ್ರಶ್ನೆ ಏಳುವಂತೆ ಮಾಡಿದೆ. ಜಿಲ್ಲೆಯಲ್ಲಿ ನದಿ ತಿರುವು ಯೋಜನೆ ,ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕೇಣಿ ಬಂದರು , ಕಾರವಾರ ಬಂದರು ಯೋಜನೆ ,ಅಂಕೋಲ(ankola) ರಿಂಗ್ ರೋಡ್ ಯೋಜನೆಗಳು ಜನರ ತೀವ್ರ ವಿರೋಧದಿಂದ ಚಾಲನೆಗೆ ತೊಡಕಾಗಿದೆ.ಆದರೇ ಇಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಭೂಯರ್  ಹರ್ಷಲ್ ನಾರಾಯಣರಾವ್ ರವರು ಸೂಕ್ಷ್ಮವಾಗಿ ಅಭಿವೃದ್ದಿ ಯೋಜನೆಗಳನ್ನ ಮುಂದುವರೆಸಬೇಕಿದೆ,ಕಾರವಾರದ ಪೋರ್ಟ ,ಖಾಸಗಿ ಬಂದರು ಪೋರ್ಟ ಯೋಜನೆಯನ್ನ ಅಭಿವೃದ್ಧಿ ಪಡಿಸುವ ಬಗ್ಗೆ ಹೇಳಿದ್ದಾರೆ. ಇದೀಗ ಹೊಸದಾಗಿ ಬಂದ ಡಿಸಿ ಯವರು ಜಿಲ್ಲೆಯಲ್ಲಿ ವಿರೋಧದಿಂದ ನೆನೆಗುದಿಗೆಗೆ ಬಿದ್ದ ಯೋಜನೆಯನ್ನ ಮುಂದುವರೆಸುವ ಸೂಚನೆ ಕಾಣುತ್ತಿದೆ.ಇದಲ್ಲದೇ ಇದಕ್ಕಾಗಿ ಪೊಲೀಸರ ಸಹಕಾರವೂ ಬೇಕು ಎಂಬ ಮಾತುಗಳು ಇದೀಗ ಜಿಲ್ಲೆಯಲ್ಲಿ ನೆನೆಗುದಿಗೆಗೆ ಬಿದ್ದ ಯೋಜನೆಗೆ ಜೀವ ಕೊಡುವ ಸಾಧ್ಯತೆಗಳು ಕಾಣುತ್ತಿವೆ.ಜಿಲ್ಲಾಧಿಕಾರಿ ಭೂಯರ್  ಹರ್ಷಲ್ ನಾರಾಯಣರಾವ್ ಏನಂದ್ರು ವಿಡಿಯೋ ನೋಡಿ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement