Uttarakannada |ತದಡಿ ಬಂದರಿನಲ್ಲಿ ವಿಷಗಾಳಿ ಸೇವಿಸಿ ಮೂವರು ಮೀನುಗಾರರ ಸಾವು: ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ನೀಡಿದ ಮೀನುಗಾರಿಕಾ ಸಚಿವ

Point Blur Oct282026 152211 Point Blur Oct282026 152211

ಕಾರವಾರ: ಉತ್ತರ ಕನ್ನಡ (uttara kannada) ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ಮೀನಿನ ತ್ಯಾಜ್ಯ ತೆರವುಗೊಳಿಸುವ ವೇಳೆ ವಿಷಗಾಳಿ ಸೇವಿಸಿ ಮೂವರು ಮೀನುಗಾರರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೀನುಗಾರಿಕಾ ಸಚಿವ ಕೆ.ಎಸ್. ಬಸವಂತಪ್ಪ ಅವರು ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಇದೇ ವೇಳೆ ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಮೃತರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿಯೂ ಭರವಸೆ ನೀಡಿದರು.

ತದಡಿ ಬಂದರಿನಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ಸಂಭವಿಸಿತ್ತು. ‘ಕುಜೈಮಾ’ ಹೆಸರಿನ ಮೀನುಗಾರಿಕಾ ಬೋಟ್‌ನಲ್ಲಿ ಹಿಡಿದ ಮೀನುಗಳನ್ನು ಹೊರತೆಗೆದ ಬಳಿಕ, ಕೊಳೆತು ದುರ್ವಾಸನೆ ಬೀರುತ್ತಿದ್ದ ‘ಚಮನ್’ ಮೀನಿನ ತ್ಯಾಜ್ಯವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಮೀನುಗಾರರು ವಿಷಕಾರಿ ಅನಿಲ ಗಾಳಿ ಸೇವಿಸಿ ಅಸ್ವಸ್ಥರಾಗಿದ್ದರು. ಈ ಪೈಕಿ ಮೂವರು ಮೃತಪಟ್ಟಿದ್ದರು.

Gokarna News | ಗೋಕರ್ಣದ ತದಡಿ ಬಂದರಿನಲ್ಲಿ ವಿಷಕಾರಿ ಗಾಳಿಯಿಂದ ಉಸಿರುಗಟ್ಟಿ ಮೂವರು ಮೀನುಗಾರರ ಸಾವು

ಈ ಘಟನೆಯಲ್ಲಿ ಹಿಣಿ ಕಾಗಾಲ್‌ನ ನೌಶಾದ್ (37), ಹುಬ್ಬಣಗಿರಿಯ ಅಮೀನ್ (39) ಹಾಗೂ ವನ್ನಳ್ಳಿಯ ಅಮನ್ ಲಂಗಡೋ (20) ಮೃತಪಟ್ಟಿದ್ದಾರೆ.

Advertisement

ಘಟನೆಯಲ್ಲಿ ಕುಮಟಾ ತಾಲೂಕಿನ ಬೆಟಗುಳಿಯ ಯಾಕೂಬ್ (64) ಹಾಗೂ ಸಂತೆಗುಳಿಯ ಖಾದಿರ್ (35) ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಯಾಕೂಬ್ ಅವರ ಸ್ಥಿತಿ ಗಂಭೀರವಾಗಿದ್ದು, ಖಾದಿರ್ ಚೇತರಿಸಿಕೊಳ್ಳುತ್ತಿದ್ದಾರೆ .

ಘಟನೆಯಿಂದ ಮೀನುಗಾರರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮೃತರ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಸಚಿವರು ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರದ ಚೆಕ್ ವಿತರಿಸಿ, ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಭರವಸೆ ನೀಡಿದರು. Gokarna | ಪ್ರವಾಸ ಬಂದವರಿಗೆ ಆಘಾತ ನೀಡಿತು ಈ ಘಟನೆ ! ಏನದು?

ಇದೇ ವೇಳೆ ಘಟನೆಗೆ ಕಾರಣವಾದ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಚಿವರು ಸೂಚಿಸಿದ್ದಾರೆ. ಬಂದರಿನಲ್ಲಿ ಮೀನುಗಾರಿಕಾ ತ್ಯಾಜ್ಯ ತೆರವುಗೊಳಿಸುವ ಸಂದರ್ಭದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಗಮನಹರಿಸಲು ತಿಳಿಸಿದ್ದು ,ನಿಯಮಾನುಸಾರ ಬೋಟ್ ಮಾಲಿಕರು ಕ್ರಮ ವಹಿಸದೇ ಇದ್ದಲ್ಲಿ ಅಂತಹ ಬೋಟ್ ಮಾಲೀಕರ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.ಇದೇ ಸಂದರ್ಭದಲ್ಲಿ ಬಂದರಿನಲ್ಲಿ ಹೂಳು ತುಂಬಿರುವ ಕುರಿತು ಪ್ರತಿಕ್ರಿಯಿಸಿದ ಅವರು ಹೂಳು ತೆಗೆದರೂ ಹೂಳು ತುಂಬಿರುವ ಕುರಿತು ಸೂಕ್ತ ತನಿಖೆ ನಡೆಸಲು ಸೂಚಿಸಿದ್ದು ,ತಪ್ಪು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮೀನುಗಾರಿಕಾ ಸಚಿವರ ಭೇಟಿ

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ,ಎಂ.ಎನ್. ಮೀನುಗಾರಿಕಾ ಉಪನಿರ್ದೇಶಕ ರವಿ ತಾಳೇಕರ್ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ ನಾಯ್ಕ , ಜಿಲ್ಲಾ ಮಾಧ್ಯಮ ವಕ್ತಾರ ಪವನ್ ನಾಯ್ಕ  ಸೇರಿದಂತೆ ಹಲವು ಮುಂಖಂಡರು ಹಾಗೂ ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement