Sirsi |ಕಾರವಾರ:- ಪಶ್ಚಿಮ ಘಟ್ಟ ಭಾಗವನ್ನೇ ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕಗಳ ಸಮಸ್ಯೆ ಕೇಳತೀರದು. ನಗರಪ್ರದೇಶದಲ್ಲಿ ಇದ್ದರೂ ನೆಟ್ವರ್ಕ ಸಿಗದೇ ಹಿಡಿ ಶಾಪ ಹಾಕುವ ಸ್ಥಿತಿ ಇನ್ನು ರೇಷನ್ ಕಾರ್ಡ ಇ.ಕೆ.ವೈ.ಸಿ ಸೇರಿದಂತೆ ಹಲವು ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ.ಹೀಗಾಗಿ ಇದನ್ನ ಮನಗಂಡ ಶಿರಸಿಯ (sirsi)ಮೂರು ಜನ ಯುವಕರ ತಂಡ ಹೊಸ ತಂತ್ರಜ್ಞಾನವನ್ನು ಅಭಿವೃದ್ದಿಗೊಳಿಸಿದ್ದು ಕಾಡು ಪ್ರದೇಶದಲ್ಲಿ ಇದ್ದರೂ ನೆಟ್ಟರ್ಕ ಹಾಗೂ ಇಂಟರ್ನೆಟ್ ಬಳಸಲು ಸುಲಭ ಮಾಡಿದ್ದು ಪ್ರಾಯೋಗಿಕ ಪ್ರಯತ್ನ ಸಫಲವಾಗಿದೆ. ಅಷ್ಟಕ್ಕೂ ಇದೇನು ಹೊಸ ತಂತ್ರಜ್ಞಾನ ಅಂತೀರಾ ಈ ಸ್ಟೋರಿ ನೋಡಿ.
ನೆಟ್ವರ್ಕ ಪರದಾಟಕ್ಕೆ ಸಿಗಲಿದೆ ಮುಕ್ತಿ.

ಉತ್ತರ ಕನ್ನಡ (uttara kannada )ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ ಗಾಗಿ ಮರವನ್ನೇರಿ ಪರದಾಡಿದ್ರೆ ,ಗುಡ್ಡ ಬೆಟ್ಟವನ್ನು ಸಹ ಹತ್ತಿ ಕುಳಿತ ಅದೆಷ್ಟೋ ಉದಾಹರಣೆಗಳಿವೆ. ಇ.ಕೆ.ವೈಸಿಗಾಗಿ ಜನ ದಿನಗಟ್ಟಲೇ ನಿಂತು ಸಂಕಷ್ಟ ಅನುಭವಿಸಿದ ,ವರ್ಕ ಫ್ರಮ್ ಹೋಮ್ ಪಡೆದುಕೊಂಡ ಉದ್ಯೋಗಿಗಳು ಗುಡ್ಡದಲ್ಲೇ ಟಿಕಾಣಿ ಹೂಡಿ ಪರದಾಡಿದಂತಹ ಅದೆಷ್ಟೋ ಘಟನೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದೆ.Sirsi | ಕುಮಟಾ-ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ -ಜನರಿಗೆ ಧೂಳು,ಕೆಸರು ಹೊಂಡದ ಕೊಡಿಗೆ ಕೊಟ್ಟ ಕೇಂದ್ರಸರ್ಕಾರ !
ಪಶ್ಚಿಮ ಘಟ್ಟವನ್ನು ಹೊಂದಿದ ಈ ಜಿಲ್ಲೆ ಯಲ್ಲಿ .ಬಿ.ಎಸ್.ಎನ್.ಎಲ್(BSNL),ಏರ್ಟೆಲ್(Airtel),ಐಡಿಯಾ ,ರಿಲಿಯನ್ಸ್ ಹೀಗೆ ಯಾವುದೇ ಮೊಬೈಲ್ ಕಂಪನಿಯ ಸಿಮ್ ತೆಗೆದುಕೊಳ್ಳಲಿ ನಗರ ಪ್ರದೇಶದಿಂದ ಹಿಡಿದು ಹಳ್ಳಿಗಳ ವರೆಗೆ ನೆಟ್ವರ್ಕ ಸಮಸ್ಯೆಯೇ ಹೆಚ್ಚು. ಹಲವು ಹಳ್ಳಿಯಲ್ಲಿ ಮೊಬೈಲ್ ಟವರ್ ಇದ್ರೂ ಸಿಗ್ನಲ್ ಸಿಗೋಲ್ಲ. ಕಾರವಾರ ನಗರದಲ್ಲೇ ಕೆಲವು ಬಡಾವಣೆಗಳಲ್ಲಿ ನೆಟ್ವರ್ಕ ಈಗಲೂ ಇಲ್ಲ.
ಆದ್ರೆ ಇದೀಗ ಕುಗ್ರಾಮ ದಲ್ಲಿ ಇರಲಿ ,ಮನೆಯ ಒಳಗೆ ನೆಟ್ವರ್ಕ ಬಾರದಿರಲಿ ,ಕುಳಿತಲ್ಲೇ ನೆಟ್ವರ್ಕ ಸಮಸ್ಯೆ ಇದ್ದರೂ 4G ನೆಟ್ವರ್ಕ ಬಳಸಿ ಕರೆ ಹಾಗೂ ಇಂಟರ್ನೆಟ್ ಸುಲಭವಾಗಿ ಬಳಸಬಹುದು .ಹೌದು ಶಿರಸಿಯ ಅಭಯ್ ,ಸುದರ್ಶನ್ , ಸಮರ್ಥ ಎಂಬ ಮೂರು ಜನ ಯುವಕರು ಟೆಲಿಕಾಮ್ ಟೆಕ್ನಲಾಜಿ ಓದಿ ಉತ್ತಮ ಸಂಬಳಕ್ಕೆ ಉದ್ಯೋಗದಲ್ಲಿ ಇದ್ದರು. ಕೋವಿಡ್ ಸಮಯದಲ್ಲಿ ಊರಿಗೆ ಬಂದಾಗ
ತಮ್ಮೂರಿನ ನೆಟ್ವರ್ಕ ಸಮಸ್ಯೆ ಗೆ ಪರಿಹಾರ ನೀಡುವ ಸಂಕಲ್ಪ ಮಾಡಿದರು. ಈಗಿರುವ ಇರುವ ಟೆಕ್ನಾಲಜಿಯನ್ನ ಅಭಿವೃದ್ಧಿ ಪಡಿಸಿ ಹಳ್ಳಿಗಳಲ್ಲಿ 4G ನೆಟ್ವರ್ಕ ಕೊಡುವ ಕನಸು ಹೊತ್ತು ಕಳೆದ ಒಂದೂವರೆ ವರ್ಷದಿಂದ ಉದ್ಯೋಗ ಬಿಟ್ಟು ಇದರ ಬಗ್ಗೆ ಅಧ್ಯಯನ ನಡೆಸಿ ಕೊನೆಗೂ ಈ ಸಮಸ್ಯೆಗೆ ಪರಿಹಾರ ಹುಡುಕಿದರು. ತಾವು ಅಭಿವೃದ್ಧಿ ಪಡಿಸಿದ ಮೈಕ್ರೋ ಸೆಲ್ ಹಾಗೂ ಫೆಮ್ಟೋಸೆಲ್ ಅನ್ನು ಕೇಂದ್ರಸರ್ಕಾರದ ದೂರಸಂಪರ್ಕ ಸಚಿವಾಲಯಕ್ಕೆ ತಿಳಿಸಿದರು. ಖುದ್ದು ಕೇಂದ್ರಸಚಿವರು ಇವರ ಸಾಧನೆಗೆ ಬಿ.ಎಸ್.ಎನ್ .ಎಲ್ ಜೊತೆ ಸಹಯೋಗದಲ್ಲಿ ಉತ್ತರ ಪ್ರದೇಶದ ಆಗ್ರ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಯೋಗಿಕ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟರು.ಇದರ ಫಲವಾಗಿ ಇದೀಗ ಯಲ್ಲಾಪುರ ಭಾಗದ ಆನಗೋಡ ದಲ್ಲಿ ಪರೀಕ್ಷೆ ಯಶಸ್ವಿ ಕಂಡಿದೆ. ಇನ್ನು ಆಗ್ರಾದ ಜನ ನಿಬಿಡ ಪ್ರದೇಶದಲ್ಲಿ ಸಹ ಫೆಮ್ಟೋಸೆಲ್
ಪರೀಕ್ಷೆ ನಡೆಸಲಾಗುತಿದ್ದು , ಇದೀಗ ಪ್ರಾಯೋಗಿಕ ಪರೀಕ್ಷೆ ಮುಕ್ತಾಯದ ಘಟ್ಟ ತಲುಪಿದ್ದು ,ಶೀಘ್ರ ಅತೀ ಕಡಿಮೆ ಬೆಲೆಯಲ್ಲಿ ಜನರ ಕೈಗೂ ಸಿಗುವ ಭರವಸೆ ವ್ಯಕ್ತಪಡಿಸುತ್ತಾರೆ ಈ ಉತ್ಸಾಹಿ ಯುವಕರು.

ಗ್ರಾಮೀಣ ಪ್ರದೇಶದ ನೆಟ್ವರ್ಕ ಸಮಸ್ಯೆಯನ್ನೇಕೇಂದ್ರವಾಗಿರಿಸಿಕೊಂಡು ಈ ಮೂರುಜನ ಯುವಕರು ನೆಕ್ಸಸ್‌ಸ್ಫೆರಿಕಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (NexusSpherical Technologies Pvt. Ltd.) ಎಂಬ ಸಂಸ್ಥೆಯನ್ನು ಕಟ್ಟಿದ್ದಾರೆ.ಇವರಿಗೆ ಸಹಕಾರವಾಗಿ ಹಾರ್ಡವೇರ್ ನನ್ನು ಬೆಂಗಳೂರು ಮೂಲದ ಲೆಖಾ ವೈರ್‌ಲೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನೀಡುತ್ತಿದೆ. ಈ ಸಂಸ್ಥೆ ಮೂಲಕ ಈಗಿರುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ 4G ನೆಟ್ವರ್ಕ ಹಾಗೂ ಇಂಟರ್ನೆಟ್ ಗಾಗಿ ಮೈಕ್ರೋ ಸೆಲ್ ಮತ್ತು ಫೆಮ್ಟೋಸೆಲ್
(FEMTO Cell )ಎಂಬ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ನೆಟ್ವರ್ಕ ಇರದ ಪ್ರದೇಶದಲ್ಲಿ ಟವರ್ ಹಾಕದೇ ಮೈಕ್ರೋ ಸೆಲ್ ಅನ್ನು ಅಳವಡಿಸಿ ನೆಟ್ವರ್ಕ ಹಾಗೂ ಇಂಟರ್ನೆಟ್ ಬಳಸಬಹುದು.ಹಾಗೆಯೇ ಫೆಮ್ಟೋಸೆಲ್ ನಲ್ಲಿ ಟವರ್ ಇದ್ದರೂ ನೆಟ್ವರ್ಕ ಬರದ ಮನೆಗಳಿಗೆ ಅಳವಡಿಸಿ ನೆಟ್ವರ್ಕ ಪಡೆಯಬಹುದು. ಇದರಿಂದ ಗ್ರಾಮೀಣ ಭಾಗದ ಸಹಕಾರ ಸಂಘಗಳು, ನ್ಯಾಯಬೆಲೆ ಅಂಗಡಿಗಳು,ಎಟಿಎಂ ಗಳು ಹಾಗೂ ಆನ್ ಲೈನ್ ಶಿಕ್ಷಣಕ್ಕೂ ಉಪಯೋಗ ಆಗಲಿದೆ.ಇದನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಜನರಿಗೆ ನೀಡುವ ಗುರಿಯನ್ನು ಹೊಂದಿದ್ದು,ಸಧ್ಯ ಈ ವ್ಯವಸ್ತೆ ಕೇವಲ BSNL ನಲ್ಲಿ ಮಾತ್ರ ನೀಡಲಾಗುತಿದ್ದು ,ಮುಂದಿನ ದಿನದಲ್ಲಿ ಎಲ್ಲಾ ನೆಟ್ವರ್ಕ ಕಂಪನಿಗಳ ಜೊತೆ ವಡಂಬಡಿಕೆ ಮಾಡಿಕೊಂಡು ನೀಡುವ ಗುರಿ ಹೊಂದಲಾಗಿದೆ.ಸಧ್ಯ ಇದೀಗ ಯಲ್ಲಾಪುರ ಭಾಗದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು ಮೊಬೈಲ್ ಸಿಗ್ನಲ್ ಬಾರದ ,ಇಂಡರ್ನೆಟ್ ಇಲ್ಲದ ಪ್ರದೇಶದಲ್ಲಿ ಇದನ್ನು ಬಳಸಿ ಜನ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳುತಿದ್ದು ,ಈ ಯುವಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.Sirsi | ಶಿರಸಿಯಲ್ಲಿ ಅಂತರರಾಜ್ಯ ಇರಾನಿ ಗ್ಯಾಂಗ್ ಸದಸ್ಯನ ಬಂಧನ
ದೇಶದ ಗುಡ್ಡಗಾಡು ಪ್ರದೇಶದಲ್ಲಿ ನೆಟ್ವರ್ಕ ನೀಡುವುದು ಎಲ್ಲಾ ದೂರಸಂಪರ್ಕ ಕಂಪನಿಗಳಿಗೂ ದೊಡ್ಡ ಸವಾಲು. ಹೀಗಾಗಿಗಿಯೇ ಅಮೇರಿಕಾ ಮೂಲದ ಸ್ಟಾರ್ ಲಿಂಕ್ ಸಂಸ್ಥೆ ಸಟಲೈಟ್ ಮೂಲಕ ಸಿಗ್ನಲ್ ನನ್ನು ನೀಡಲು ಮುಂದಾಗಿದ್ದು ,ಭದ್ರತೆ ದೃಷ್ಟಿಯಿಂದ ಇದೀಗ ವಿವಾದಕ್ಕೆ ಕಾರಣವಾಗಿದೆ. ಆದರೇ ಈ ಯುವಕರು ಅಭಿವೃದ್ಧಿ ಪಡಿಸಿದ ಈ ತಂತ್ರಜ್ಞಾನ ಹಳ್ಳಿಗಳಿಗೂ ನೆಟ್ವರ್ಕ ಸಿಗ್ನಲ್ ಸುಗುವಂತೆ ಮಾಡುತಿದ್ದು ಭದ್ರತೆ ದೃಷ್ಟಿಯಿಂದಲೂ ಯಾವುದೇ ಸಮಸ್ಯೆಗಳಿಲ್ಲ. ಒಟ್ಟಿನಲ್ಲಿನಲ್ಲಿ ತಮ್ಮೂರಿನ ಸಮಸ್ಯೆಯನ್ನ ಸವಾಲಾಗಿ ತೆಗೆದುಕೊಂಡ ಈ ಯುವಕರು ಕೊನೆಗೂ ಸಮಸ್ಯೆ ಮೂಲದಿಂದ ಪರಿಹಾರ ಹುಡುಕಿದ್ದು ತಾಂತ್ರಿಕವಾಗಿ ಭಾರತ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿ ಯಾಗಲಿದೆ.
