Karnataka| ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ  ಗೆಲುವು

SV Sankanur wins Karnataka Legislative Council West Graduates Constituency Election 2026 SV Sankanur wins Karnataka Legislative Council West Graduates Constituency Election 2026
SV Sankanur wins Karnataka Legislative Council West Graduates Constituency Election 2026

ಕಾರವಾರ ಅ.28:  ಕರ್ನಾಟಕ(karnataka) ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ  ದ್ವೈವಾರ್ಷಿಕ ಚುನಾವಣೆ-2026ರ  ಪಶ್ಚಿಮ ಪದವೀಧರರ  ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು ಎಸ್.ವಿ ಸಂಕನೂರ  ಅವರು ಚುನಾಯಿತರಾಗಿರುತ್ತಾರೆ ಎಂದು ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿಗಳು  ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಮ್.ಜಾನಕಿ  ತಿಳಿಸಿದ್ದಾರೆ.

ಇದನ್ನೂ ಓದಿ:- 

Uttara Kannada SIR voter list update and voter ID verification news
Uttara Kannada SIR voter list update and voter ID verification news

 ಅಕ್ಟೋಬರ್ 27 ರಂದು ಬೆಳಿಗ್ಗೆ 8 ಗಂಟೆಯಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿದ್ದು, ಅಕ್ಟೋಬರ್ 28 ಮಧ್ಯರಾತ್ರಿ 2 ಗಂಟೆಗೆ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿತು.

Advertisement

ಅಕ್ಟೋಬರ್ 23 ರಂದು ನಡೆದ ಪಶ್ಚಿಮ ಪದವೀಧರರ ಕ್ಷೇತ್ರದ  ಚುನಾವಣೆಯ ಮತದಾನದಲ್ಲಿ ಒಟ್ಟು 97,400 ಮತದಾರರ ಪೈಕಿ 73,658 ಜನ ಮತ ಚಲಾಯಿಸಿದ್ದು, ಶೇ.75.62 ರಷ್ಟು ಮತದಾನವಾಗಿತ್ತು. ಮತ ಚಲಾಯಿಸಿದವರಲ್ಲಿ 45,110 ಪುರುಷರು ಹಾಗೂ 28,548 ಮಹಿಳೆಯರು ಇದ್ದರು.ಇದನ್ನೂ ಓದಿ:-Kumta | ಕುಮಟಾದಲ್ಲಿ ಚಿರತೆ ದಾಳಿ ಗ್ರಾಮದಲ್ಲಿ ಆತಂಕ ವಾತಾವರಣ 

ಮೊದಲನೆಯ ಪ್ರಾಶಸ್ತ್ಯದ ಮತ ಎಣಿಕೆ ಅಂತ್ಯದಲ್ಲಿ ಎಸ್.ವಿ ಸಂಕನೂರ  ಅವರು 33,711  ಮತಗಳನ್ನು  ಪಡೆದು  ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯ ವಿವಿಧ ಸುತ್ತುಗಳಲ್ಲಿ ಎಸ್.ವಿ ಸಂಕನೂರ  ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮೋಹನ ಲಿಂಬಿಕಾಯಿ ಅವರಿಂದ 9,323 ಅಂತರದ ಮುನ್ನಡೆಯನ್ನು ಪಡೆದು ಚುನಾಯಿತರಾಗಿದ್ದಾರೆ.

 ಕಾಂಗ್ರೆಸ್  ಪಕ್ಷದ  ಅಭ್ಯರ್ಥಿಯಾದ ಮೋಹನ ಲಿಂಬಿಕಾಯಿ ಅವರು   24,388 ಮತಗಳು, ಪಕ್ಷೇತರ ಅಭ್ಯರ್ಥಿಯಾದ ನಿಶಾಂತ ಶಂಕರ ಬಂಕಾಪುರ 143 ಮತಗಳು,

ಪಕ್ಷೇತರ  ಅಭ್ಯರ್ಥಿಯಾದ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ 55 ಮತಗಳು, ಪಕ್ಷೇತರ ಅಭ್ಯರ್ಥಿಯಾದ ತಳವಾರ ಶಿವಕುಮಾರ 42 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಅಬ್ದುಲ್ ಮನ್ನಾನ 120 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಡಾ.ಜಿ.ಎಚ್ ಇಮ್ರಾಪುರ 338 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಉಮೇಶ ಕೃಷ್ಣಪ್ಪ ದೈವಜ್ಞ್ 228 ಮತಗಳು, ಕೆ.ಆರ್. ಎಸ್ ಪಕ್ಷದ ಅಭ್ಯರ್ಥಿಯಾದ ಕೃಷ್ಣಾ ಎಚ್. ಬಳೆಗಾರ 141 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಕಾಂತಕುಮಾರ ಆರ್ 4,055 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಜಿಶಾನ್ ಡಿ. ಶಿರಸಂಗಿ 39 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಜೀಶಾನ್ ಅಹ್ಮದಖಾನ್ ಪಟ್ಹಾನ್ 62 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಬಸವರಾಜ ಶಂಕರಪ್ಪ ಕೊಟಗಿ 39 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಯಾದ ಸಂತೋಷ ಮನೋಹರ ವೆರ್ಣಿಕರ 85 ಮತಗಳನ್ನು ಪಡೆದಿದ್ದಾರೆ.

ಒಟ್ಟು 73,691 ಮತಗಳಲ್ಲಿ  63,446 ಮತಗಳು  ಮಾನ್ಯವಾಗಿದ್ದು, 10,245 ಮತಗಳು ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಮ್.ಜಾನಕಿ ತಿಳಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement