Shivamogga| ಇಸ್ತ್ರಿ ಮಾಡುವಾಗ ವಿದ್ಯುತ್ ಶಾಕ್: 14 ವರ್ಷದ ಬಾಲಕ ಸಾ**

ಶಿವಮೊಗ್ಗದಲ್ಲಿ ಬಟ್ಟೆ ಇಸ್ತ್ರಿ ಮಾಡುವಾಗ ವಿದ್ಯುತ್ ಶಾಕ್‌ನಿಂದ 14 ವರ್ಷದ ಬಾಲಕ ಉಮರ್ ಫಾರುಕ್ ಸಾವು ಶಿವಮೊಗ್ಗದಲ್ಲಿ ಬಟ್ಟೆ ಇಸ್ತ್ರಿ ಮಾಡುವಾಗ ವಿದ್ಯುತ್ ಶಾಕ್‌ನಿಂದ 14 ವರ್ಷದ ಬಾಲಕ ಉಮರ್ ಫಾರುಕ್ ಸಾವು
shivamogga-umar-farooq-electric-shock-death.
ಶಿವಮೊಗ್ಗ: ಮನೆಯಲ್ಲಿ ಬಟ್ಟೆ ಇಸ್ತ್ರಿ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ 14 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ (shivamogga) ನಗರದ ವಾದಿ-ಏ-ಹುಧಾ ಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ:-Shivamogga | ಸಕ್ರೆಬೈಲಿನಲ್ಲಿ ಏಕಾ ಏಕಿ ಕುಸಿದುಬಿದ್ದ ಆನೆ ಸಾವು!

ಮೃತ ಬಾಲಕನನ್ನು ಉಮರ್ ಫಾರುಕ್ (14) ಎಂದು ಗುರುತಿಸಲಾಗಿದೆ. ಈತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.

ಮನೆಯಲ್ಲಿ ಬಟ್ಟೆ ಇಸ್ತ್ರಿ ಮಾಡುತ್ತಿದ್ದ ಸಂದರ್ಭದಲ್ಲಿ ಉಮರ್ ಫಾರುಕ್‌ಗೆ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ. ವಿದ್ಯುತ್ ಸ್ಪರ್ಶಿಸಿದ ತಕ್ಷಣ ಬಾಲಕ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

ಕೂಡಲೇ ಕುಟುಂಬಸ್ಥರು ಹಾಗೂ ಸ್ಥಳೀಯರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ.

Advertisement

ಈ ಘಟನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement