Kumta | ಕುಮಟಾದಲ್ಲಿ ಚಿರತೆ ದಾಳಿ ಗ್ರಾಮದಲ್ಲಿ ಆತಂಕ ವಾತಾವರಣ 

IMG 20261026 133509 IMG 20261026 133509

Kumta/ಕಾರವಾರ :- ಆಹಾರ ಅರಸಿ ಬಂದ ಚಿರತೆಯೊಂದು ದನದ ಕೊಟ್ಟಿಗೆಗೆ ನುಗ್ಗಿ ಆಕಳ ಕರುವಿನ ಮೇಲೆ ದಾಳಿ ಮಾಡಿ ಸಾಯಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ತಾಲೂಕಿನ ಕತಗಾಲ್ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕತಗಾಲ್ ಅರಣ್ಯವಲಯದ  ಎಡ್ತಾರೆ ಗ್ರಾಮದಲ್ಲಿ ನಡೆದಿದೆ.Kumta | ಸಿಡಿಲು ಬಡಿದು ಮೇಯಲು ಬಿಟ್ಟ ಏಳು ಜಾನುವಾರುಗಳ ಸಾವು

ಗ್ರಾಮದ ಸಾವಿತ್ರಿ ಮಂಜುನಾಥ್ ಪಟಗಾರ್ ಎಂಬುವವರ ಮನೆಯಲ್ಲಿ ಭಾನುವಾರ ಮಧ್ಯರಾತ್ರಿ ವೇಳೆ ಚಿರತೆ ನುಗ್ಗಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ದಾಳಿ ನಡೆಸಿದ ಚಿರತೆ ಕರುವನ್ನು ಎಳೆದೊಯ್ಯುವ ಪ್ರಯತ್ನ ಮಾಡಿದೆ. ಅಷ್ಟರಲ್ಲಾಗಲೇ ಮನೆಯವರು ಎಚ್ಚರಗೊಂಡು ನೋಡಿದಾಗ ಚಿರತೆ ಅಲ್ಲಿಂದ ತೆರಳಿದೆ. ಕರವು ಚಿರತೆ ದಾಳಿಯಿಂದ ಸಾವುಕಂಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇನ್ನು ಈ ಗ್ರಾಮದಲ್ಲಿ ಚಿರತೆ ಓಡಾಟ ಹೆಚ್ಚಾಗಿದ್ದು ಜನ ಆಕದಲ್ಲೇ ದಿನ ದೂಡುವಂತಾಗಿದೆ.ಹೀಗಾಗಿ ಗ್ರಾಮದ ಭಾಗಕ್ಕೆ ನುಗ್ಗುವ ಚಿರತೆಯನ್ನು ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement