Kumta | ಸಿಡಿಲು ಬಡಿದು ಮೇಯಲು ಬಿಟ್ಟ ಏಳು ಜಾನುವಾರುಗಳ ಸಾವು

file 00000000bf8882119cb634015666aa25 1 file 00000000bf8882119cb634015666aa25 1

Kumta |ವರದಿ- ವಿನಾಯಕ್ ಶಟ್ಟಿ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)ತಾಲೂಕಿನ ಅಂತ್ರವಳ್ಳಿಯಲ್ಲಿ ಸಿಡಿಲು ಬಡಿದು ಏಳು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಸಿಡಿಲಿನ ಅಬ್ಬರಕ್ಕೆ ಜಾನುವಾರುಗಳು ಬಲಿಯಾಗಿವೆ.ಅಂತ್ರವಳ್ಳಿಯ ಕೃಷ್ಣ ತುಳಸಿ ಅವರಿಗೆ ಸೇರಿದ ಎರಡು ಆಕಳು, ಒಂದು ಕರು ಹಾಗೂ ಎರಡು ಹೋರಿಗಳು ಸೇರಿದಂತೆ ಐದು ಜಾನುವಾರುಗಳು ಮೃತಪಟ್ಟಿವೆ. ಗಂಗಾಧರ್ ಸುಗ್ಗಿ ಗೌಡ ಅವರಿಗೆ ಸೇರಿದ ಒಂದು ಆಕಳು ಹಾಗೂ ಬೇಡು ನಾಗುಗೌಡ ಅವರಿಗೆ ಸೇರಿದ ಒಂದು ಆಕಳು ಸಾವನ್ನಪ್ಪಿವೆ. ಒಟ್ಟು ಏಳು ಜಾನುವಾರುಗಳು ಮೃತಪಟ್ಟಿದ್ದು, ಜಾನುವಾರುಗಳನ್ನು ಮೇಯಲು ಬಿಟ್ಟಿದ್ದ ಮಾಲೀಕರು ಸಂಜೆ ಅವು ಮರಳಿ ಬಾರದಿದ್ದಾಗ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಜಾನುವಾರುಗಳು ಮೃತಪಟ್ಟಿರುವುದು ಪತ್ತೆಯಾಗಿದೆ.Kumta | ಅಕ್ರಮ ಚಟುವಟಿಕೆಗೆ ನಟ್ಟು ಬೋಲ್ಟ್ ಟೈಟ್ ಮಾಡಿದ ಪೊಲೀಸ್ ಇಲಾಖೆ – ಸಿಪಿಐ ಕುಸುಮಾಧರ್ ಕೆಲಸಕ್ಕೆ ಮೆಚ್ಚುಗೆ

ಬಳಿಕ ಪಶುವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದು, ಜಾನುವಾರುಗಳು ಸಿಡಿಲು ಬಡಿದ ಪರಿಣಾಮ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement