Wild animal news |ಹೆದ್ದಾರಿಯಲ್ಲಿ ಕಾಡುಕೋಣಕ್ಕೆ ವಾಹನ ಡಿಕ್ಕಿ- ಚಿಕಿತ್ಸೆ ಕೊಡಲು ಪಶುವೈದ್ಯರಿಲ್ಲದೇ ಸಾವು -ವಿಡಿಯೋ ನೋಡಿ
Wild animal news:- ಶಿವಮೊಗ್ಗ ಜಿಲ್ಲೆಯ ಸಾಗರ(sagar) (sagar)ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆದ್ದಾರಿಗಳಲ್ಲೇ ಕಾಡುಕೋಣಗಳು ಆಹಾರ ಅರಸಿ ಸಂಚಾರ ಮಾಡುತ್ತಿವೆ. ಕೆಲವೊಮ್ಮೆ ವಾಹನಸವಾರರ ನಿರ್ಲಕ್ಷ ದಿಂದ ವನ್ಯಜೀವಿಗಳು ಸಾವು ಕಾಣುತ್ತಿವೆ.
ಹೌದು ಶಿವಮೊಗ್ಗ ಜಿಲ್ಲೆಯ ಸಾಗರ(sagar) ತಾಲೂಕಿನ ಕಾಸ್ಪಾಡಿ-ನೇಂದ್ರವಳ್ಳಿ ಹೆದ್ದಾರಿಯಲ್ಲಿ ಇಂದು ಕಾಡುಕೋಣವೊಂದು ರಸ್ತೆ ದಾಟುವಾಗ ಅಪರಿಚಿತ ವಾಹನವೊಂದು ಡಿಕ್ಕಿಪಡಿಸಿ ತೆರಳಿದೆ. ಇನ್ನು ಅಪಘಾತದಲ್ಲಿ ಕಾಡುಕೋಣದ ಹಿಂಭಾಗದ ಎರಡುಕಾಲುಗಳು ಮುರಿದು ತೆರಳಲಾಗದ ಸ್ಥಿತಿಯಲ್ಲಿ ಇದ್ದುದನ್ನು ನೋಡಿದ ಸ್ಥಳೀಯರು ಭಾನುವಾರ ಮುಂಜಾನೆ ಚೋರಡಿ ವಲಯ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಆದರೇ ಅರಣ್ಯ ಇಲಾಖೆಯವರು ತಡವಾಗಿ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಆದರೇ ಕಾಡುಕೋಣಕ್ಕೆ ಚಿಕಿತ್ಸೆ ಕೊಡಲು ಪಶುವೈದ್ಯರಿಲ್ಲದೇ ಮಧ್ಯಹ್ನ 12 ಗಂಟೆಯಾದರೂ ಹಾಗೆಯೇ ಬಿಡಲಾಗಿದೆ. ಇನ್ನು ಪಶುವೈದ್ಯರಿಗಾಗಿ ಶಿವಮೊಗ್ಗದ ಮೃಗಾಲಯದಲ್ಲಿ ವೈದ್ಯರಿಗೆ ಕರೆ ಮಾಡಲಾಗಿತ್ತು. ಆದರೇ ಅಲ್ಲಿ ವೈದ್ಯರು ಇರಲಿಲ್ಲ.ಇನ್ನು ಸಕ್ರೆಬೈಲು ಕ್ಯಾಂಪ್ ನಲ್ಲೂ ಇರಲಿಲ್ಲ, ಇನ್ನು ಅನಿವಾರ್ಯ ಕಾರಣದಿಂದ ಚಿತ್ರದುರ್ಗದ ಕಿರು ಮೃಗಾಲಯದ ವೈದ್ಯರಾದ ಡಾ.ಆನಂದ್ ರವರಿಗೆ ಬರಲು ತಿಳಿಸಲಾಯಿತು.ದಸರಾ ಉಸ್ತುವಾರಿ ಹೊಣೆ ಹೊತ್ತಿದ್ದ ಅವರು ಬರಲು ವಿಳಂವವಾಗಿದೆ.ಇನ್ನು ಬೆಳಗ್ಗೆ ಐದೂವರೆಗೆ ಆದ ಘಟನೆಗೆ ಸಂಜೆ ಐದಾದರೂ ಯಾವ ಸಿಬ್ಬಂದಿಯೂ ಬಂದಿಲ್ಲ. ಇನ್ನು ಕಾಡುಕೋಣವು ಅಪಘಾತದಲ್ಲಿ ತನ್ನ ಎರಡು ಕಾಲುಗಳನ್ನ ಕಳೆದುಕೊಂಡು ನರಳಾಡಿ ಪ್ರಾಣ ಬಿಟ್ಟಿದೆ.Sagar | ಕೆಳದಿ ಅರಸರ ಕಾಲದ ಅಪರೂಪದ ಪಚ್ಚೆಲಿಂಗ ದರ್ಶನ- ಇದರ ವಿಶೇಷ ಏನು ಗೊತ್ತಾ?
ಕಾಡುಕೋಣ ಕಾರ್ಯಾಚರಣೆಗೆ ಕೋಟಿ ಖರ್ಚು ಮಾಡುವ ಅರಣ್ಯ ಇಲಾಖೆ.
ಶಿವಮೊಗ್ಗ ಜಿಲ್ಲೆಯ ಅರಣ್ಯ ಇಲಾಖೆ ಕಾಡುಕೋಣಗಳ ಅಧ್ಯಯನ ಹಾಗೂ ಕಾರ್ಯಾಚರಣೆ ತರಬೇತಿಗಾಗಿ ಕೋಟಿಗಟ್ಟಲೇ ಹಣ ವ್ಯಯ ಮಾಡುತ್ತಿದೆ.ಚಿಕ್ಕಮಗಳೂರು, ಕೊಪ್ಪ ಎಸ್ಟೇಟ್ ನಲ್ಲಿ ಆರು ತಿಂಗಳ ಹಿಂದೆ ಕಾಡಿಕೋಣಗಳ ಬಗ್ಗೆ ಅಧ್ಯಯನ ಮಾಡಿದ್ದ ಇಲಾಖೆ ಕಾರ್ಯಾಚರಣೆ ನಡೆಸಲು ಸೂಕ್ತ ವ್ಯವಸ್ಥೆ ಇಲ್ಲದೇ ಷಡ್ಯುಲ್ -1 ರಡಿ ರಕ್ಷಿತ ಕಾಡುಕೋಣವೊಂದು ಸಾವು ಕಂಡಿದೆ. ಒಂದು ಹುಲಿಗೆ ಎಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆಯೋ ಅಷ್ಟೇ ಮಟ್ಟದಲ್ಲಿ ಕಾಡುಕೋಣಕ್ಕೂ ನೀಡಲಾಗಿತ್ತದೆ.ಆದರೇ ಅರಣ್ಯ ಇಲಾಖೆಯಲ್ಲಿ ನುರಿತ ,ತಜ್ಞ ಪಶುವೈದ್ಯರ ಕೊರತೆಯಿಂದಾಗಿ ವನ್ಯಜೀವಿಗಳಿಗೆ ಚಿಕಿತ್ಸೆ ಸಿಗದೇ ಸಾವು ಕಾಣುತ್ತಿವೆ.
