Karwar|ಕಾರವಾರ ಭಾಗದಲ್ಲಿ ಏರಿಕೆ ಕಂಡ ಕಾಳಿಂಗ ಸರ್ಪಗಳು-ನಗರದತ್ತ-ಕಾರಣ ಏನು

Karwar King Cobra Karwar King Cobra
Karwar King Cobra

Karwar |ಕಾರವಾರ ಭಾಗದಲ್ಲಿ ಏರಿಕೆ ಕಂಡ ಕಾಳಿಂಗ ಸರ್ಪಗಳು |ಕಾರಣ ಏನು? ವಿಡಿಯೋ ನೋಡಿ.

ಕಾರವಾರ :- ಸ್ವಜಾತಿಯನ್ನೇ ಭಕ್ಷಿಸುವ ಕಾಳಿಗ ಸರ್ಪಗಳ ಜೀವನ ಚಕ್ರ ಬಲು ವಿಶಿಷ್ಟವಾಗಿದೆ. ಗೂಡು ಕಟ್ಟಿ ಮರಿ ಮಾಡುವ ಏಕೈಕ ಹಾವೆಂದರೇ ಅದು ಕಾಳಿಂಗ. ಜನರ ಸಂಚಾರ,ಶಬ್ಧಗಳಿಂದ ದೂರವಿರಲು ಭಯಸುವ ,ನಿತ್ಯಹರಿಧ್ವರ್ಣ ಕಾಡಿನಲ್ಲಿಯೇ ಹೆಚ್ಚು ವಾಸವಾಗಿರಲು ಬಯಸುವ ಇವು ಷ್ಯಡ್ಯುಲ್ -1 ರಡಿ ಅವನತಿ ಅಂಚಿನಲ್ಲಿರುವ ಹಾವು . Karwar | ಅಕ್ರಮ ಮರಳು ತುಂಬಿದ್ದ ದೋಣಿ ವಶಕ್ಕೆ – ಪ್ರಭಾವಿ ರಾಜಕಾರಣಿ ಕರೆಗೆ ಬೆಚ್ಚಿಬಿದ್ದ ಅಧಿಕಾರಿಗಳು ಮಾಡಿದ್ದೇನು ಗೊತ್ತಾ?

Advertisement

ಈ ಹಾವುಗಳು ತನ್ನ ಗಡಿಯನ್ನು ಗುರುತಿಸಿಕೊಂಡು ಅದರ ಪರಿದಿಯಲ್ಲಿಯೇ ತನ್ನ ಇಡೀ ಜೀವನ ಕಳೆಯುತ್ತದೆ. ಇದರ ಗಡಿಯ ವ್ಯಾಪ್ತಿ ಸರಿಸುಮಾರು ಮೂರೂವರೆಯಿಂದ ಐದು ಕಿಲೋಮೀಟರ್ ವ್ಯಾಪ್ತಿಗಳಿವೆ .ಆದರೇ ಇತ್ತೀಚೆಗೆ ಈ ಕಾಳಿಂಗ ಸರ್ಪಗಳು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಹಾರ ಅರಸಿ ಬರುತ್ತಿವೆ. ಕಾರವಾರ(karwar) ತಾಲೂಕಿನಲ್ಲಿಯೇ ಈ ವರ್ಷದಲ್ಲಿ ಎಂಟಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನ ಅರಣ್ಯ ಇಲಾಖೆ ರಕ್ಷಣೆಮಾಡಿ ಮರಳಿ ಕಾಡಿನತ್ತ ಬಿಡಲಾಗಿದೆ. ಇವುಗಳಲ್ಲಿ ಹೆಚ್ಚಿನವು ಯವ್ವನಾವಸ್ತೆಯಲ್ಲಿ ಇರುವ ಕಾಳಿಂಗ ಸರ್ಪಗಳಾಗಿವೆ. ಇನ್ನು ಇಂದು ಕಾರವಾರ ತಾಲ್ಲೂಕಿನ ಸಿದ್ಧರ ಗ್ರಾಮದ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ 11 ಅಡಿಯಷ್ಟು ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಗಸ್ತು ವನಪಾಲಕ ಗೋಪಾಲ ನಾಯ್ಕ ಮತ್ತು ತಂಡ ಸಂರಕ್ಷಣೆ ಮಾಡಿದೆ.ಈ ವರ್ಷ ಕಾರವಾರದ ಬಿಣಗಾ ಹಾಗೂ ಸುತ್ತಮುತ್ತಲ ಪ್ರದೇಶದಲ್ಲೆಯೇ ಕಾಣಸಿಗುತ್ತಿವೆ. Karwar | ಅಂಬೇಡ್ಕರ್ ಮೂರ್ತಿ ಅಳವಡಿಕೆ ಸುತ್ತೋಲೆ ವಿವಾದ: ಕಿಕ್‌ಬ್ಯಾಕ್ ಅನುಮಾನದ ಪ್ರಶ್ನೆ!

ತಜ್ಞರ ಪ್ರಕಾರ ಕಾಳಿಂಗ ಸರ್ಪದ ಸಂತತಿ ಹೆಚ್ಚಾಗಿರಬಹುದು ಅಥವಾ ಇವುಗಳಿಗೆ ತೊಂದರೆಯಾಗಿರುವ ಸಾಧ್ಯತೆಗಳು ಸಹ ಇರಬಹುದು.ಹೀಗಾಗಿ ದಟ್ಟ ಕಾಡನ್ನು ಬಿಟ್ಟು ಆಹಾರ ಅರಸಿ ಬಂದಿರಬಹುದು ಎನ್ನುತ್ತಾರೆ.ಒಟ್ಟಿನಲ್ಲಿ ಜಿಲ್ಲೆಯ ಇತರ ಭಾಗದಲ್ಲಿ ಹೋಲಿಸಿದರೇ ಈ ವರ್ಷ ಕಾರವಾರ ತಾಲೂಕಿನಲ್ಲೇ ಅತೀ ಹೆಚ್ಚು ಕಾಳಿಂಗಸರ್ಪಗಳು ಕಾಣಸಿಕ್ಕಿವೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement