Shivamogga | ಸಕ್ರೆಬೈಲಿನಲ್ಲಿ ಏಕಾ ಏಕಿ ಕುಸಿದುಬಿದ್ದ ಆನೆ ಸಾವು!
Shivamogga/ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಶೌರ್ಯ (35) ಹೆಸರಿನ ಆನೆ ತಡರಾತ್ರಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದೆ. ಎಡಗಾಲಿನ ಹಿಂಭಾಗದ ತೊಡೆಯಲ್ಲಿದ್ದ ತೀವ್ರ ಗಾಯ ಕೊಳೆತ ಸ್ಥಿತಿಗೆ ತಲುಪಿದ್ದರಿಂದ ಕಳೆದ ಮೂರು ತಿಂಗಳಿನಿಂದ ನರಳುತ್ತಿದ್ದ ಆನೆಗೆ ನೀಡಲಾಗುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಶೌರ್ಯ ಆನೆಯ ಎಡಗಡೆಯ ಹಿಂಬದಿ ಕಾಲಿನ ತೊಡೆಯ ಭಾಗದಲ್ಲಿ ತೀವ್ರ ಗಾಯವಾಗಿತ್ತು. ಗಾಯವು ಕೊಳೆತ ಸ್ಥಿತಿಗೆ ತಲುಪಿದ್ದರಿಂದ ಆನೆಯ ಆರೋಗ್ಯ ಹದಗೆಟ್ಟಿತ್ತು. ಅರಣ್ಯ ಇಲಾಖೆಯ ಪಶುವೈದ್ಯರು ಹಾಗೂ ಇತ್ತೀಚೆಗೆ ಹಾತಿ ಸಂಸ್ಥೆಯ ವೈದ್ಯರ ತಂಡ ಆನೆಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಶೌರ್ಯ ಕೊನೆಯುಸಿರೆಳೆದಿದೆ. Shivamogga | ಈ ಊರಿನಲ್ಲಿ ಬೀಗರೂಟ ಅರೇಂಜ್ ಮಾಡಿದ್ರೆ ಒಂದು ಲಕ್ಷ ರೂಪಾಯಿ ದಂಡ,ಬೀಗರೂಟ ತಿಂದು ಬಂದರೆ ₹50 ಸಾವಿರ ದಂಡ!
ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆ
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಈ ಕಾಡಾನೆಯನ್ನು 2026ರ ಫೆಬ್ರವರಿ 22ರಂದು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಿ, ಸುಮಾರು ಮೂರು ತಿಂಗಳ ಕಾಲ ಕ್ರಾಲ್‌ನಲ್ಲಿ ಇರಿಸಿ ಪಳಗಿಸುವ ಪ್ರಕ್ರಿಯೆ ನಡೆಸಲಾಗಿತ್ತು.Shivamogga | ನಾಲ್ಕು ಕಡೆ ದಾಳಿ: ಹೊಟೇಲ್, ತಿನಿಸು ಅಂಗಡಿಗಳಲ್ಲಿ ಕಂಡಿದ್ದೇನು?
ಮೇ ತಿಂಗಳಿನಲ್ಲಿ ಕ್ರಾಲ್‌ನಿಂದ ಶಾಂತವಾಗಿ ಹೊರಬಂದಿದ್ದ ಶೌರ್ಯ ಆನೆಗೆ ಸಕ್ರೆಬೈಲು ಬಿಡಾರದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಗಾಯದ ತೀವ್ರತೆಯಿಂದಾಗಿ ಆನೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ.
23ಕ್ಕೆ ಇಳಿದ ಸಕ್ರೆಬೈಲು ಆನೆಗಳ ಸಂಖ್ಯೆ
ಶೌರ್ಯ ಆನೆಯ ಸಾವಿನಿಂದ ಸಕ್ರೆಬೈಲು ಆನೆ ಬಿಡಾರದಲ್ಲಿರುವ ಒಟ್ಟು ಆನೆಗಳ ಸಂಖ್ಯೆ 23ಕ್ಕೆ ಇಳಿಕೆಯಾಗಿದೆ. ಗಾಯದಿಂದಾಗಿ ಹಲವು ತಿಂಗಳುಗಳಿಂದ ನರಳುತ್ತಿದ್ದ ಆನೆಯ ಸಾವು ಅರಣ್ಯ ಇಲಾಖೆ ಹಾಗೂ ಆನೆಗಳ ಆರೈಕೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಮತ್ತೊಂದು ನಷ್ಟವಾಗಿದೆ.
