Yana| ಭೇಟಿನೀಡಿದ ಪುಟ್ಟಗೌರಿ ಖ್ಯಾತಿಯ ನಟಿ ರಂಜಿನಿ ರಾಘವನ್ – ಮುಖಪುಟದಲ್ಲಿ ಬರೆದುಕೊಂಡಿದ್ದೇನು?

Kannada actress Ranjani Raghavan visiting Yana rock formations in Kumta, Uttara Kannada, Karnataka. Kannada actress Ranjani Raghavan visiting Yana rock formations in Kumta, Uttara Kannada, Karnataka.
Kannada actress Ranjani Raghavan visiting Yana rock formations in Kumta, Uttara Kannada, Karnataka.

Yana| ಭೇಟಿನೀಡಿದ ಪುಟ್ಟಗೌರಿ ಖ್ಯಾತಿಯ ನಟಿ ರಂಜಿನಿ ರಾಘವನ್ – ಮುಖಪುಟದಲ್ಲಿ ಬರೆದುಕೊಂಡಿದ್ದೇನು?

ಕಾರವಾರ :- ಪಟ್ಟಗೌರಿ ಖ್ಯಾತಿಯ ನಟಿ ರಂಜಿನಿ ರಾಘವನ್ ಕನ್ನಡ ಧಾರವಾಹಿ ಮೂಲಕ ಖ್ಯಾತಿ ಪಡೆದುಕೊಂಡ ನಟಿ. ಆಗಾಗ ದೇಶ -ವಿದೇಶ ಸುತ್ತುವ ಹವ್ಯಾಸ ಇಟ್ಟುಕೊಂಡಿರುವ ಈ ಕನ್ನಡ ನಟಿಗೆ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ವಿಶೇಷ ಸೆಳೆತ . ಇದನ್ನೂ ಓದಿ:+GSI ನಿಂದ Yana ಶಿಲಾಗುಹೆಗಳಿಗೆ ಭೂ ಪರಂಪರೆಯ ತಾಣ ಮಾನ್ಯತೆ| ವಿಶೇಷ ಇಲ್ಲಿದೆ

ವರ್ಷದಲ್ಲಿ ಒಂದುಬಾರಿಯಾದರೂ ಈ ಭಾಗಕ್ಕೆ ಬರುವ ರಂಜಿನಿ ರಾಘವನ್ ಈ ಹಿಂದೆ ಶಿರಸಿಯಲ್ಲಿ (sirsi) ಮನೆಯೊಂದರಲ್ಲಿ ಅಡಿಕೆ ಸುಲಿದು ಮಲೆನಾಡಿನ ಅಡಿಕೆ ,ವೀಳ್ಯದೆಲೆ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ಇದಾದ ನಂತರ ಚಿಕ್ಕ ಪುಟ್ಟ ಕಾರ್ಯಕ್ರಮಗಳಿಗೂ ಸಹ ಜಿಲ್ಲೆಗೆ ಬರುತಿದ್ದ ಇವರು ಇದೀಗ ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ತಾಲೂಕಿನ ಯಾಣಕ್ಕೆ ಭೇಟಿನೀಡಿ ತಮ್ಮ ಯಾಣದ ಇತಿಹಾಸವನ್ನ ಪುಟ್ಟ ಸಾಲುಗಳ ಮೂಲಕ ಹಂಚಿಕೊಂಡಿದ್ದಾರೆ.Yana :ಜೇನು ದಾಳಿ ಪ್ರವಾಸಿಗರು ಹೈರಾಣ! 40 ಕ್ಕೂ ಹೆಚ್ಚು ಜನರಿಗೆ ಕಡಿದ ಜೇನು

Advertisement

ಯಾಣದ(yana) ಬಗ್ಗೆ ರಂಜಿನಿ ರಾಘವನ್ ಹೇಳಿದ್ದೇನು?

ಉತ್ತರ ಕನ್ನಡ ಜಿಲ್ಲೆಯ ಯಾಣಕ್ಕೆ ಭೇಟಿ ನೀಡಿದ ನಟಿ ರಂಜನಿ ರಾಘವನ್.
ಉತ್ತರ ಕನ್ನಡ ಜಿಲ್ಲೆಯ ಯಾಣಕ್ಕೆ ಭೇಟಿ ನೀಡಿದ ನಟಿ ರಂಜನಿ ರಾಘವನ್.

ಸಾವಿರಾರು ವರ್ಷಗಳ ಹಿಂದೆ.. ವಿಜ್ಞಾನಕ್ಕೆ ಇವತ್ತಿನ ಭಾಷೆ ಇರಲಿಲ್ಲ. ಆದರೆ ಮನುಷ್ಯನಿಗೆ ಕುತೂಹಲ ಇತ್ತು. ಆ ಕಾಲದಲ್ಲಿ ಯಾಣದ ಈ ಕಪ್ಪು ಬಂಡೆಗಳ ನಡುವೆ ನಿಂತಾಗ, ಭಸ್ಮಾಸುರ-ಮೋಹಿನಿ ಯಾರ ಮನಸ್ಸಲ್ಲಾದರೂ ಖಂಡಿತ ಹುಟ್ಟಿಕೊಳ್ತಾರೆ.Sirsi| ಯಾಣದ ಬಳಿ ವಿದ್ಯಾರ್ಥಿಗಳ ಬಸ್ ಪಲ್ಟಿ |19 ಜನರಿಗೆ ಗಾಯ

ಭಸ್ಮಾಸುರ ತಪಸ್ಸು ಮಾಡಿ ಶಿವನಿಂದ ವರ ಪಡೀತಾನೆ- ತಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಅವರು ಭಸ್ಮವಾಗಬೇಕು ಅಂತ. ಆ ಶಕ್ತಿಯನ್ನೇ ಶಿವನ ಮೇಲೆ ಪ್ರಯೋಗಿಸಲು ಹೊರಟಾಗ, ವಿಷ್ಣು ಮೋಹಿನಿಯ ರೂಪದಲ್ಲಿ ಬಂದು ಅವನೇ ಭಸ್ಮವಾಗೋ ತರ ಮಾಡ್ತಾನೆ. ಇದು ಕೇವಲ ದೇವರು-ಅಸುರರ ಕಥೆ ಅಷ್ಟೇ ಅಲ್ಲ ಅನ್ಸತ್ತೆ. ನಮ್ಮ ಪೂರ್ವಜರು ಶಕ್ತಿ, ಅಹಂಕಾರ, ಮೋಹ, ಬುದ್ಧಿವಂತಿಕೆ ಮತ್ತು ಮನುಷ್ಯನ ಮನಸ್ಸಿನ ಬಗ್ಗೆ ಹೇಳಬೇಕಿದ್ದ ಕೆಲವು ವಿಚಾರಗಳನ್ನ ಕಥೆಗಳ ರೂಪದಲ್ಲಿ ಉಳಿಸಿಕೊಂಡಿರಬಹುದಲ್ವಾ? ಇವತ್ತು ನಾವು psychology, philosophy, science ಪದಗಳನ್ನು ಬಳಸುತ್ತೇವೆ. ಅವರು ಅದನ್ನೇ ಕಥೆಗಳ ಮೂಲಕ ಹೇಳುತ್ತಿದ್ದರು. ಅದಕ್ಕೇ ನನಗೆ ನಮ್ಮ ಪುರಾಣಗಳ ಬಗ್ಗೆ ಕುತೂಹಲ. ಅವು ನಡೆದಿದ್ದವೋ ಇಲ್ಲವೋ ಅನ್ನುವುದಕ್ಕಿಂತ… ಅವುಗಳನ್ನು ಕಲ್ಪಿಸಿದ ಮನಸ್ಸು ಅಷ್ಟು ಸಾವಿರ ವರ್ಷಗಳ ಹಿಂದೆ ಇಷ್ಟೊಂದು ದೂರ ಹೇಗೆ ಯೋಚಿಸಿತು ಅನ್ನೋದೇ ನನಗೆ ವಿಸ್ಮಯ!

ನಿಮಗೆ ಯಾಣ ಅಂದ್ರೆ ಏನು ನೆನಪಾಗುತ್ತೆ? ಎಂದು ಕೊನೆಯಲ್ಲಿ ಪ್ರಶ್ನೆ ಮಾಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement