GSI ನಿಂದ Yana ಶಿಲಾಗುಹೆಗಳಿಗೆ ಭೂ ಪರಂಪರೆಯ ತಾಣ ಮಾನ್ಯತೆ| ವಿಶೇಷ ಇಲ್ಲಿದೆ

Yana Caves in Karnataka’s Uttara Kannada district declared a geo-heritage site of national importance by the Geological Survey of India. The 2,700-million-year-old rock formations highlight unique karst features in the Western Ghats.
Ancient limestone rock formations of Yana Caves in Uttara Kannada declared a geo-heritage site of national importance in Karnataka Ancient limestone rock formations of Yana Caves in Uttara Kannada declared a geo-heritage site of national importance in Karnataka
Yana

GSI ನಿಂದ Yana ಶಿಲಾಗುಹೆಗಳಿಗೆ ಭೂ ಪರಂಪರೆಯ ತಾಣ ಮಾನ್ಯತೆ| ವಿಶೇಷ ಇಲ್ಲಿದೆ.

 

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾಣ(yana) ವನ್ನು ಜಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ಭೂ ಪರಂಪರೆಯ ತಾಣವಾಗಿ ಮಾನ್ಯತೆ ನೀಡಿದೆ.

Advertisement

ಯಾಣ ಶಿಲಾಗುಹೆಗಳ ಪ್ರದೇಶದಲ್ಲಿನ ಕಲ್ಲಿನ ರಚನೆಗಳು ಸುಮಾರು 2,700 ಮಿಲಿಯನ್ ವರ್ಷಗಳಷ್ಟು ಹಳೆಯವು. ಇವು ಭೂಪಟಲಗಳ ಚಲನೆ (plate tectonics) ಮತ್ತು ನೈಸರ್ಗಿಕ ಹವಾಮಾನೀಕರಣ (weathering) ಪ್ರಕ್ರಿಯೆಗಳ ಪರಿಣಾಮವಾಗಿ ರೂಪುಗೊಂಡಿವೆ.

ಈ ಹಿನ್ನಲೆಯಲ್ಲಿ Geological Survey of India (GSI) ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಾಣ ಶಿಲಾಗುಹೆಗಳನ್ನು ರಾಷ್ಟ್ರೀಯ ಮಹತ್ವದ ಭೂ ಪರಂಪರೆ ತಾಣ ಎಂದು ಘೋಷಿಸಿದೆ.

GSI ನಿರ್ದೇಶಕ ಜನರಲ್ ಅಸಿತ್ ಸಾಹಾ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ  ಕಳುಹಿಸಿದ ಪತ್ರದ ಪ್ರಕಾರ, ಮಾರ್ಚ್ 4ರಂದು GSI ಸಂಸ್ಥೆಯ ಸ್ಥಾಪನೆಯ 176ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.

Karnataka| ಭೂಕುಸಿತ ಭೀತಿ 163 ಅಪಾಯ ಪ್ರದೇಶ ಗುರುತು,ಅನಾಹುತ ತಡೆಗೆ 66 ಕೋಟಿ ಬಿಡುಗಡೆ

ಈ ಪ್ರದೇಶದ ಕಲ್ಲು ರಚನೆಗಳು ಮತ್ತು ಗುಹೆಗಳು ಲಕ್ಷಾಂತರ ವರ್ಷಗಳಿಂದ ಭೂಪಟಲ ಚಲನೆ ಹಾಗೂ ನೈಸರ್ಗಿಕ ಹವಾಮಾನೀಕರಣದ ಪರಿಣಾಮವಾಗಿ ರೂಪುಗೊಂಡ ಪ್ರಾಚೀನ ಭೂ ವೈಜ್ಞಾನಿಕ ಅವಶೇಷಗಳಾಗಿವೆ.

GSI ಪ್ರಕಾರ, ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿರುವ ಈ ಪ್ರದೇಶದ ಕಲ್ಲು ರಾಶಿಗಳು ಸುಮಾರು 2,700 ಮಿಲಿಯನ್ ವರ್ಷಗಳಷ್ಟು ಹಳೆಯವು. ಇವು ಮ್ಯಾಗ್ನೀಷಿಯಂ ಅಂಶವನ್ನು ಹೊಂದಿರುವ ಡೋಲೊಮಿಟಿಕ್ ಲೈಮ್‌ಸ್ಟೋನ್‌ನಿಂದ ನಿರ್ಮಿತವಾಗಿದ್ದು, ಭೂಮಿಯ ಇತಿಹಾಸದ ಅತ್ಯಂತ ಹಳೆಯ ಅವಧಿಯಾದ ಪ್ರಿಕ್ಯಾಂಬ್ರಿಯನ್ ಯುಗಕ್ಕೆ ಸೇರಿವೆ.ಇದು ಸಂಕೀರ್ಣ ಜೀವ ರೂಪಗಳು ಉದಯಿಸುವುದಕ್ಕೂ ಮುಂಚಿನ ಕಾಲವಾಗಿದೆ.

ಕಾಲಕ್ರಮೇಣ ಉಷ್ಣವಲಯದ ಪರಿಸರದಲ್ಲಿ ನಡೆದ ಹವಾಮಾನೀಕರಣ ಹಾಗೂ ಖನಿಜಗಳೊಂದಿಗೆ ನಡೆದ ರಾಸಾಯನಿಕ ಕ್ರಿಯೆಗಳ ಪರಿಣಾಮವಾಗಿ, ಯಾಣ ಪ್ರದೇಶದಲ್ಲಿ ಅನೇಕ ‘ಕಾರ್ಸ್ಟ್’ (karst) ರಚನೆಗಳು ನಿರ್ಮಾಣವಾಗಿವೆ. ಇವು ಸಾಮಾನ್ಯವಾಗಿ ಲೈಮ್‌ಸ್ಟೋನ್‌ನಂತಹ ಖನಿಜಗಳು ಸ್ವಲ್ಪ ಅಮ್ಲೀಯ ಭೂಗರ್ಭ ಜಲದಿಂದ ಕರಗುವ ಮೂಲಕ ಗುಹೆಗಳು ಮತ್ತು ಇತರ ಭೂ ಆಕಾರಗಳನ್ನು ಸೃಷ್ಟಿಸುವ ಪ್ರಕ್ರಿಯೆಯಿಂದ ಉಂಟಾಗುತ್ತವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿದೆ 439 ಭೂ ಕುಸಿತ ವಲಯ!

GSI ಪ್ರಕಾರ, ಯಾಣ ಪ್ರದೇಶದಲ್ಲಿ ಒಟ್ಟು 61 ಕಾರ್ಸ್ಟ್ ರಚನೆಗಳು ಕಂಡುಬರುತ್ತವೆ. ಅವುಗಳಲ್ಲಿ ಪ್ರಮುಖವಾದವು ಭೈರವೇಶ್ವರ ಶಿಖರವಾಗಿದ್ದು ಇದು ಸುಮಾರು 120 ಮೀಟರ್ ಎತ್ತರ ವಿದೆ.ಇನ್ನು ಮೋಹಿನಿ ಶಿಖರವು ಸುಮಾರು 90 ಮೀಟರ್ ಎತ್ತರವಿದೆ.

ಇದನ್ನೂ ಓದಿ:-Yana:ಯಾಣ ಪ್ರವಾಸಿ ಸ್ಥಳಕ್ಕೆ  ನಿರ್ಬಂಧದ ನಡುವೆಯೇ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ!

ಈ ಪ್ರದೇಶಕ್ಕೆ ಧಾರ್ಮಿಕ ಮತ್ತು ಪೌರಾಣಿಕ ಮಹತ್ವವೂ ಇದೆ. ಇದು ಭಸ್ಮಾಸುರ ಎಂಬ ರಾಕ್ಷಸನ ಕಥೆಗೆ ಸಂಬಂಧಿಸಿದೆ. ಭಸ್ಮಾಸುರನು ಶಿವನಿಗೆ ತಪಸ್ಸು ಮಾಡಿ ನಾಶಮಾಡುವ ಶಕ್ತಿ ಪಡೆದನು. ನಂತರ ವಿಷ್ಣು ಮೋಹಿನಿ ರೂಪದಲ್ಲಿ ಅವನನ್ನು ಮೋಸಗೊಳಿಸಿ, ಅವನೇ ತನ್ನನ್ನು ತಾನು ನಾಶಮಾಡಿಕೊಂಡನು ಎಂದು ಹೇಳಲಾಗುತ್ತದೆ. ಈ ಘಟನೆ ಯಾಣದಲ್ಲೇ ನಡೆದಿದೆಯೆಂದು ನಂಬಲಾಗಿದೆ.

ಇದುವರೆಗೆ GSI ದೇಶಾದ್ಯಂತ 90 ಸ್ಥಳಗಳನ್ನು ಭೂ ವೈಜ್ಞಾನಿಕ ಸ್ಮಾರಕಗಳು ಮತ್ತು ಭೂ ಪರಂಪರೆ ತಾಣಗಳಾಗಿ ಗುರುತಿಸಿದೆ.

ಯಾಣ ಶಿಲಾಗುಹೆಗಳು ಕೇವಲ ಪ್ರವಾಸಿ ತಾಣವಾಗದೇ  ಅದು ಭಾರತದ ಪ್ರಮುಖ ಭೂ ವೈಜ್ಞಾನಿಕ ಸಂಪತ್ತು ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಈ ಪ್ರದೇಶಕ್ಕೆ ಭೂ ಪರಂಪರೆ ಮಾನ್ಯತೆ ಸಿಕ್ಕಿರುವುದು ಅದರ ನೈಸರ್ಗಿಕ ಮಹತ್ವವನ್ನು ಮತ್ತಷ್ಟು ಒತ್ತಿಹೇಳುವ ಜೊತೆಗೆ ಪ್ರವಾಸೋಧ್ಯಮ ಅಭಿವೃದ್ಧಿಗೂ ಸಹಾಯವಾಗಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement