ಉತ್ತರ ಕನ್ನಡ ಜಿಲ್ಲೆಯಲ್ಲಿದೆ 439 ಭೂ ಕುಸಿತ ವಲಯ!

324

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಈ ಕುರಿತು ಜಿಲ್ಲಾಡಳಿತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiha) ಜಿಲ್ಲೆಯ ಪರಿಸ್ಥಿತಿ ಬಗ್ಗೆ ವಿಡಿಯೋ ಸಂವಾದದ ಮೂಲಕ ಮಾಹಿತಿ ನೀಡಿದ್ದು ಜಿಲ್ಲೆಯಲ್ಲಿ ಅತೀ ಹೆಚ್ಚು ಭೂ ಕುಸಿತ ವಾಗುವ ವಿವರ ಬಹಿರಂಗಗೊಂಡಿದೆ.

ಜಿಲ್ಲೆಯಲ್ಲಿ 439 ಭೂ ಕುಸಿತ ವಲಯ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು ಪ್ರದೇಶಗಳು ಭೂ ಕುಸಿತವಾಗುವ ಪ್ರದೇಶಗಳು ಎಂದು ಗುರುತಿಸಲಾಗಿತ್ತು.

ಅವುಗಳಲ್ಲಿಕಾರವಾರ,ಜೋಯಿಡಾ,ಯಲ್ಲಾಪುರ,ಶಿರಸಿ ಭಾಗದ ಪ್ರದೇಶಗಳು ಸೇರಿದ್ದವು.

ಆದರೇ ಇದೀಗ ಜಿಲ್ಲೆಯಲ್ಲಿ GSI (Geological Survey of India) ರವರು ಗುರುತಿಸಿದ ಮಾಹಿತಿ ಪ್ರಕಾರ 439 ಭೂ ಕುಸಿತ ವಲಯಗಳಿವೆ. ಈ ಪೈಕಿ ಬೇಚರಾಕ್ ವಲಯಗಳನ್ನು ಹೊರತುಪಡಿಸಲಾಗಿದೆ.

ಇನ್ನು ಉಳಿದ ಜನ ವಸತಿ ಪ್ರದೇಶದ ಅಗತ್ಯವಿರುವ ಭೂ ಕುಸಿತ ವಲಯಗಳನ್ನು ಗುರುತಿಸಿ ಭೂಕುಸಿತ ತಡೆ ರಚನಾತ್ಮಕ ಕಾರ್ಯಗಳಿಗಾಗಿ NHAI, PRED, PWD, DCF ಕಾರವಾರ/ಹೊನ್ನಾವರ/ಶಿರಸಿ/ಯಲ್ಲಾಪುರ/ಹಳಿಯಾಳ, ಹಿರಿಯ ಭೂ ವಿಜ್ಞಾನಿ ಗಣಿ ಮತು ಭೂ ವಿಜ್ಞಾನ ಇಲಾಖೆ ರವರಿಂದ ಅಗತ್ಯವಿರುವ ಪ್ರಸ್ತಾವನೆ (ಅಂದಾಜು ವೆಚ್ಚ) ಸಲ್ಲಿಸಲು ಜಿಲ್ಲಾಡಳಿತ ತಿಳಿಸಿದೆ.

ಇನ್ನು ಬೇಲೆಕೇರಿ ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಶಿರಸಿ ತಾಲೂಕಿನ ದೇವಿಮನೆ ಘಟ್ಟದಲ್ಲಿ ಭೂ ಕುಸಿತ ಉಂಟಾಗಿದ್ದು ತೆರವುಗೊಳಿಸಲಾಗಿದೆ. ಸದ್ರಿ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಬದಲಿ ಸಂಚಾರ ವ್ಯವಸ್ಥೆಯ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಇದನ್ನೂ ಓದಿ:- ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿದ್ದೆಷ್ಟು?

ಮಳೆಯಿಂದ ಹಾನಿಯಾದುದೆಷ್ಟು?

ಹೊನ್ನಾವರ ತಾಲೂಕಿನ 11 ಗ್ರಾಮಗಳು ಹಾಗೂ ಕುಮಟಾ ತಾಲೂಕಿನ 4 ಗ್ರಾಮಗಳು ಶರಾವತಿ ಹಾಗೂ ಅಘನಾಷಿನಿ ನದಿಗೆ ನೆರೆ ಬಂದಿರುವುದರಿಂದ ಸುಮಾರು 1517 ಜನರು ಪ್ರವಾಹದಿಂದ ಭಾದಿತರಾಗಿದ್ದು, ಸದ್ರಿ ಸಂದರ್ಭದಲ್ಲಿ ಜಿಲ್ಲೆಯಲ್ಲಿ 11 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು ಆ ಪೈಕಿ ನಾಲ್ಕು ಕಾಳಜಿ ಕೇಂದ್ರಗಳನ್ನು ಮುಂದುವರಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಇದನ್ನೂ ಓದಿ :- ಜೋಯಿಡಾದಲ್ಲಿ ಭೂ ಕುಸಿತ!




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!