Karnataka| ಭೂಕುಸಿತ ಭೀತಿ 163 ಅಪಾಯ ಪ್ರದೇಶ ಗುರುತು,ಅನಾಹುತ ತಡೆಗೆ 66 ಕೋಟಿ ಬಿಡುಗಡೆ

Karnataka: –
Landslide-prone areas identified in Chikkamagaluru Malnad region including Mullayanagiri, Charmadi Ghat and Bababudangiri ahead of monsoon season. Landslide-prone areas identified in Chikkamagaluru Malnad region including Mullayanagiri, Charmadi Ghat and Bababudangiri ahead of monsoon season.
ಪಶ್ಚಿಮ ಘಟ್ಟ ವಲಯ-ಚಿಕ್ಕಮಗಳೂರು

Karnataka| ಭೂಕುಸಿತ ಭೀತಿ 163 ಅಪಾಯ ಪ್ರದೇಶ ಗುರುತು,ಅನಾಹುತ ತಡೆಗೆ 66 ಕೋಟಿ ಬಿಡುಗಡೆ.

Karnataka /chikamagalur :-ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಸಂಭವಿಸಬಹುದಾದ ಭೂಕುಸಿತ ಹಾಗೂ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ.

Karnataka| ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರ ಮೊಮ್ಮಗನಮೇಲೆ ಪತ್ನಿಯಿಂದ ಪೊಲೀಸರಿಗೆ ದೂರು 

Advertisement

ಚಿಕ್ಕಮಗಳೂರು(chikkamagalur) ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ 163 ದುರ್ಬಲ ಪ್ರದೇಶಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 25 ಜನವಸತಿ ಮತ್ತು ರಸ್ತೆ ಸಂಪರ್ಕ ಇರುವ ಅತ್ಯಂತ ಅಪಾಯದ ಪ್ರದೇಶಗಳು ಸೇರಿವೆ.

Landslide-prone areas identified in Chikkamagaluru Malnad region including Mullayanagiri, Charmadi Ghat and Bababudangiri ahead of monsoon season.
ಗುಡ್ಡದ ಅಂಚಿನ ಮನೆಗಳು

Kumta| ನಿಯಮ ಮೀರಿ ಸಾಲ ವಸೂಲಿಗೆ ಇಳಿದ ಬ್ಯಾಂಕ್ ಗೆ ಪಾಠ ಕಲಿಸಿದ ಖ್ಯಾತ ವಕೀಲ ಪ್ರಶಾಂತ್ ನಾಯ್ಕ ಬೆಟಕುಳಿ.

2019ರಿಂದ ಪ್ರತಿವರ್ಷವೂ ಜಿಲ್ಲೆಯಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಪ್ರಕರಣಗಳ ಅಧ್ಯಯನದ ಆಧಾರದ ಮೇಲೆ ಜಿಲ್ಲಾಡಳಿತ ಈ ದುರ್ಬಲ ಪ್ರದೇಶಗಳನ್ನು ಗುರುತಿಸಿದೆ. ಈ ಹಿನ್ನೆಲೆಯಲ್ಲಿ, ಭೂಕುಸಿತದಂತಹ ಅನಾಹುತಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ರೂ.66 ಕೋಟಿ 47 ಲಕ್ಷ ಅನುದಾನವನ್ನು ಎರಡು ಹಂತಗಳಲ್ಲಿ ಮಂಜೂರು ಮಾಡಿದೆ.

Geological Survey of India (GSI) ಸಂಸ್ಥೆಯ ಅಧ್ಯಯನ ಹಾಗೂ ಸಲಹೆಗಳ ಮೇರೆಗೆ, ಜಿಲ್ಲೆಯಲ್ಲಿ ಜನವಸತಿ ಹಾಗೂ ಪ್ರಮುಖ ರಸ್ತೆಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ 25 ಸ್ಥಳಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ. ವಿಶೇಷವಾಗಿ ಮುಳ್ಳಯ್ಯನಗಿರಿ, ಚಾರ್ಮಾಡಿ ಘಾಟ್ ಹಾಗೂ ಬಾಬಾಬುಡನ್‌ಗಿರಿ ಭಾಗಗಳಲ್ಲಿ ಅಪಾಯದ ಮಟ್ಟ ಹೆಚ್ಚು ಎಂದು ಜಿಎಸ್‌ಐ ವರದಿ ತಿಳಿಸಿದೆ.

Landslide-prone areas identified in Chikkamagaluru Malnad region including Mullayanagiri, Charmadi Ghat and Bababudangiri ahead of monsoon season.
ಪಶ್ಚಿಮ ಘಟ್ಟ ವಲಯ-ಚಿಕ್ಕಮಗಳೂರು

ಜಿಎಸ್‌ಐ ನಡೆಸಿದ ಸಮೀಕ್ಷೆಯಲ್ಲಿ ಮಣ್ಣಿನ ಸವಕಳಿ, ಇಳಿಜಾರು ಪ್ರದೇಶಗಳು, ಮಳೆಯ ಪ್ರಮಾಣ, ಗಾಳಿಯ ವೇಗ, ಅಂತರ್ಜಲದ ಒತ್ತಡ, ನೀರಿನ ಹರಿವು ಹಾಗೂ ಭೂಬಳಕೆಯ ಮಾದರಿಗಳನ್ನು ಅಧ್ಯಯನ ಮಾಡಲಾಗಿದೆ. ಕಡಿದಾದ ಇಳಿಜಾರು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ, ಕಾಡು ಪ್ರದೇಶಗಳಲ್ಲಿ ಮಾನವ ಚಟುವಟಿಕೆ ಹೆಚ್ಚಿರುವುದು, ಹಾಗೂ ಗುಡ್ಡಗಳನ್ನು ಕಡಿದು ಮನೆ ಮತ್ತು ರಸ್ತೆಗಳ ನಿರ್ಮಾಣವೇ ಭೂಕುಸಿತಕ್ಕೆ ಪ್ರಮುಖ ಕಾರಣಗಳೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Honnavar| ಶಾಲಾ ಪ್ರವಾಸಿ ಬಸ್ ಪಲ್ಟಿ |ವಿದ್ಯಾರ್ಥಿ ಸಾವು 26 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಗಾಯ

ಇನ್ನು, ನೀರಿನ ಹರಿವು ಹೆಚ್ಚಿರುವ ಪ್ರದೇಶಗಳಲ್ಲಿ ಗುಡ್ಡಗಳನ್ನು ಕಡಿದು ನಿರ್ಮಿಸಿರುವ ರಸ್ತೆ ಬದಿಗಳಲ್ಲಿ ಗೇಬಿಯನ್ ಗೋಡೆ ನಿರ್ಮಾಣ, ಕಾಂಕ್ರೀಟ್ ತಡೆಗೋಡೆಗಳಿಗೆ ನೀರು ಹರಿದು ಹೋಗಲು ರಂಧ್ರ ವ್ಯವಸ್ಥೆ, ರಸ್ತೆ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆ ಜಿಎಸ್‌ಐ ಶಿಫಾರಸು ಮಾಡಿದೆ. ಈ ಶಿಫಾರಸುಗಳ ಆಧಾರದ ಮೇಲೆ ಜಿಲ್ಲಾಡಳಿತ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಿದೆ.

ಅಲ್ಲದೆ, ಹರಿಯುವ ನೀರಿನಿಂದ ಆಗುವ ಮಣ್ಣಿನ ಸವಕಳಿ ನಿಯಂತ್ರಣ, ಇಳಿಜಾರು ಪ್ರದೇಶಗಳಲ್ಲಿ ಕಾಡು ಸಂರಕ್ಷಣೆ, ಆಳವಾಗಿ ಬೇರು ಬೀಡುವ ಜಾತಿಯ ಸಸ್ಯಗಳನ್ನು ಬೆಳೆಸುವ ಮೂಲಕ ಭೂಕುಸಿತ ತಡೆಯುವ ಕಾರ್ಯಯೋಜನೆಗೂ ಜಿಲ್ಲಾಡಳಿತ ಮುಂದಾಗಿದೆ.

ಇನ್ನು, ಜಿಲ್ಲೆಯಲ್ಲಿ ಗುರುತಿಸಲಾದ 25ಕ್ಕೂ ಹೆಚ್ಚು ಭೂಕುಸಿತ ಅಪಾಯದ ಪ್ರದೇಶಗಳಲ್ಲಿ 5 ಸ್ಥಳಗಳಲ್ಲಿ ಜನವಸತಿ ಸ್ಥಳಾಂತರಕ್ಕೆ ಜಿಎಸ್‌ಐ ಶಿಫಾರಸು ಮಾಡಿದ್ದು, ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ, ಜೀವ ಮತ್ತು ಆಸ್ತಿಯ ರಕ್ಷಣೆಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಈ ಕ್ರಮಗಳು ಕಾಫಿನಾಡಿನ ಜನರಿಗೆ ಮಹತ್ವದ ಭದ್ರತಾ ಭರವಸೆಯಾಗಿ ಪರಿಣಮಿಸಿವೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement