S.I.R Uttarakannada Exclusive news | ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಕಿಸ್ತಾನ, ಬಾಂಗ್ಲಾ ಪ್ರಜೆಗಳ ಬಳಿಯೂ ಓಟರ್ ಐ.ಡಿ ಪತ್ತೆ ! 

Uttara Kannada SIR voter list update and voter ID verification news Uttara Kannada SIR voter list update and voter ID verification news
Uttara Kannada SIR voter list update and voter ID verification news

S.I.R Exclusive news | ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಕಿಸ್ತಾನ, ಬಾಂಗ್ಲಾ ಪ್ರಜೆಗಳ ಬಳಿಯೂ ಓಟರ್ ಐ.ಡಿ ಪತ್ತೆ !

Kannadavani WhatsApp image
ಪ್ರತಿ ದಿನದ ಸುದ್ದಿ ಓದಲು ನಮ್ಮ ವಾಟ್ಸ್ ಅಪ್ ಗ್ರೂಪ್ ಸೇರಲು ಫೋಟೋ ದ ಮೇಲೆ ಕ್ಲಿಕ್ ಮಾಡಿ

S.I.R Exclusive news:-ಕರ್ನಾಟಕ ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ಕರಡು ಪಟ್ಟಿಗೆ ಹೋಲಿಸಿದರೆ ರಾಜ್ಯಾದ್ಯಂತ ಬರೋಬ್ಬರಿ 99.76 ಲಕ್ಷ (ಸುಮಾರು 1 ಕೋಟಿ) ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಇದರಿಂದ ರಾಜ್ಯದ ಒಟ್ಟು ಮತದಾರರ ಸಂಖ್ಯೆ 4.54 ಕೋಟಿಗೆ ಕುಸಿದಿದೆ. ಕೇವಲ ಬೆಂಗಳೂರಿನಲ್ಲೇ ಅತಿ ಹೆಚ್ಚು ಅಂದರೆ 44 ಲಕ್ಷಕ್ಕೂ ಅಧಿಕ ಹೆಸರುಗಳು ರದ್ದಾಗಿದ್ದು, ನಂತರದ ಸ್ಥಾನದಲ್ಲಿ ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಿವೆ. ಕರ್ನಾಟಕ ರಾಜ್ಯ ದಲ್ಲಿ SIR ಪೂರ್ವ ಮತದಾರರ ಸಂಖ್ಯೆ -5,54,32,314 ಇದ್ದು ,ಅಂತಿಮ ಮತದಾರರ ಪಟ್ಟಿಯ ಮತದಾರರ ಸಂಖ್ಯೆ-4,54,55,689 ಆಗಿದೆ. ಇದರಲ್ಲಿ ರಾಜ್ಯಾಧ್ಯಾಂತ ಹೆಸರು ಡಿಲಿಟ್ ಆದ ಮತದಾರರ ಸಂಖ್ಯೆ -99,76,625 ಆಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಕಿಸ್ತಾನದ ಪ್ರಜೆಗೂ ಓಟರ್ ಐಡಿ!

ಉತ್ತರ ಕನ್ನಡ(uttara kannada) ಜಿಲ್ಲೆಯಲ್ಲಿ ವಲಸಿಗರಾಗಲಿ , ಪಾಕಿಸ್ತಾನಿ ಪ್ರಜೆಗಳಾಗಲಿ ಓಟರ್ ಐಡಿ ಹೊಂದಿಲ್ಲ ,ಇಲ್ಲಿನ ಪ್ರಜೆಗಳಾಗಿಲ್ಲ ಎಂದು ಪೊಲೀಸ್ ಇಲಾಖೆ ಹಾಗೂ ಆಡಳಿತ ತಿಳಿಸಿತ್ತು. ಆದರೇ S.I.R ಪ್ರಕ್ರಿಯೆ ಪೂರ್ಣಗೊಳ್ಳುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಕಿಸ್ತಾನದ ಪ್ರಜೆಗೂ ಸಹ ಓಟರ್ ಐಡಿ ನೀಡಿರುವುದು ಪತ್ತೆಯಾಗಿದೆ.

Advertisement

ಎಸ್ ಐ ಆರ್ ಪ್ರಕ್ರಿಯೆಯ ವೇಳೆ  ಬೇರೆ ದೇಶದ ಅಕ್ರಮ ವಲಸಿಗರಲ್ಲಿಯೂ ಕರ್ನಾಟಕದ ವೋಟರ್ ಐಡಿ ಹೊಂದಿರುವ ಕುರಿತು  ಚುನಾವಣಾ ಆಯೋಗ ಪತ್ತೆ ಮಾಡಿದೆ.

ನೇಪಾಳ ,ಯು.ಕೆ ಅಮೇರಿಕಾ ,ಕೆನಾಡ ,ಪಾಕ್ ಪ್ರಜೆಗಳ ಬಳಿ ಸ್ಥಳೀಯ ವೋಟರ್ ಐಡಿ ಇರುವುದನ್ನ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಒಟ್ಟು 1000 ದಷ್ಟು ಅಕ್ರಮ ನಿವಾಸಿಗಳಲ್ಲಿ  ಮತದಾರರ ಗುರುತಿನ ಚೀಟಿ ಪತ್ತೆಮಾಡಿದ್ದು ,ಉತ್ತರ ಕನ್ನಡ ಜಿಲ್ಲೆಯಲ್ಲಿ ಓರ್ವ ಪುರುಷ  ಪಾಕಿಸ್ತಾನಿ ಪ್ರಜೆ, ಒಂದು ಬಾಂಗ್ಲಾ ಪ್ರಜೆಯ  ಬಳಿಯೂ ಕರ್ನಾಟಕದ ವೋಟರ್ ಐಡಿ ಪತ್ತೆಯಾಗಿದೆ. ಇನ್ನು ಬೆಂಗಳೂರಿನಲ್ಲಿ 583 ನೇಪಾಳಿ ಪ್ರಜೆಗಳಲ್ಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿದೆ.ಅಧಿಕಾರಿಗಳಿಗೆ ಅನುಮಾನ ಬಂದು ವಿಚಾರಣೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇದಲ್ಲದೇ  ದಕ್ಷಿಣ ಕನ್ನಡ, ಹಾಸನ ಉಡುಪಿಯಲ್ಲಿ ಅಕ್ರಮ ವಲಸಿಗರ ಬಳಿ ಮತದಾನದ ಐಡಿ ಕೂಡ   ಪತ್ತೆಯಾಗಿದೆ‌. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ 22 ವಲಸಿಗರು ಇರುವುದು SIR ಪ್ರಕ್ರಿಯೆಯಿಂದ ಪತ್ತೆಯಾಗಿದೆ. ಇದನ್ನೂ ಓದಿ:-Uttarakannada| ಜಿಲ್ಲಾಧಿಕಾರಿ ಎಂದು ನಂಬಿ ಹಣ ಕೊಟ್ಟವರಿಗೆ ಪಂಗನಾಮ! 

ಸಧ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ  SIR ಪೂರ್ವ ಮತದಾರರ ಸಂಖ್ಯೆ -12,30,037 ಇದ್ದು ,ಅಂತಿಮ ಮತದಾರರ ಪಟ್ಟಿಯ ಮತದಾರರ ಸಂಖ್ಯೆ -11,39,623 ಇದ್ದು ,ಹೆಸರು ಡಿಲಿಟ್ ಆದ ಮತದಾರರ ಸಂಖ್ಯೆ – 90,414  ಆಗಿದೆ.

ಇನ್ನು S.I.R ಪ್ರಕ್ರಿಯೆಯಲ್ಲಿ ಪಾಕಿಸ್ತಾನ, ಬಾಂಗ್ಲಾ ಪ್ರಜೆಬಳಿ ಇಲ್ಲಿನ ಓಟರ್ ಐಡಿ ಇರುವ ಬಗ್ಗೆ ಹಾಗೂ ಹೇಗೆ ಮಾಡಿಸಿಕೊಂಡಿದ್ದಾರೆ ಎಂಬ ಬಗ್ಗೆ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement