ಮಂಗಳೂರು: ವಿವಾಹಿತ ಧರ್ಮಗುರು ಜೊತೆ ತೆರಳಲು ಯುವತಿಯೊಬ್ಬಳು ನಿರ್ಧರಿಸಿದ ಘಟನೆ ಮಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಭಾಗದಲ್ಲಿ ಚರ್ಚೆಗೆ ಕಾರಣವಾಗಿದೆ. ಮದುವೆಯಾಗಿ ಮಕ್ಕಳಿರುವ ಧರ್ಮಗುರು ಜೊತೆ ಕುಮಟಾದ(kumta) 22 ವರ್ಷದ ಯುವತಿ ತೆರಳಿರುವ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟಗುಳಿಯ ನಿವಾಸಿ ದಾವುದ್ ಖಾಸಿಂ ಅವರ ಪುತ್ರಿ ಮಗದುಮ್ಮ (22), ಮಂಗಳೂರಿನ ಅಸೈಗೋಳಿ ನಿವಾಸಿ ಅಶ್ರಫ್ ಸ ಅದಿ ಎಂಬ ಧರ್ಮಗುರು ಜೊತೆ ತೆರಳಿದ್ದಾಳೆ ಎನ್ನಲಾಗಿದೆ.Mangalore | ಅಕ್ರಮ ಬಾಂಗ್ಲಾ ವಲಸಿಗರ ಹೆಡೆಮುರಿ ಕಟ್ಟಿದ ಪೊಲೀಸರು-ಬಾಂಗ್ಲಾಕ್ಕೆ ಗಡಿಪಾರು
ಮಗಳನ್ನು ಹುಡುಕಿಕೊಂಡು ಮಂಗಳೂರಿಗೆ ಬಂದ ಪೋಷಕರು
ಮಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಮಂಗಳೂರಿಗೆ ತೆರಳಿ ಕೊಣಾಜೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಪೋಷಕರು ಮಗಳನ್ನು ಮರಳಿ ಮನೆಗೆ ಕರೆದುಕೊಂಡು ಹೋಗಲು ಮನವಿ ಮಾಡಿದ್ದು, ಠಾಣೆಯಲ್ಲೇ ಕಣ್ಣೀರಿಟ್ಟಿದ್ದಾರೆ .
ಯುವತಿ ವಯಸ್ಕಳಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಹಾಗೂ ಅಶ್ರಫ್ ಸ ಅದಿ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಪೋಷಕರ ಮನವಿಗೂ ಒಪ್ಪದ ಯುವತಿ
ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಮನವೊಲಿಸಲು ಪ್ರಯತ್ನಿಸಿದರೂ ಯುವತಿ ತನ್ನ ನಿರ್ಧಾರ ಬದಲಿಸಿಲ್ಲ ಎನ್ನಲಾಗಿದೆ. ಧರ್ಮಗುರು ಜೊತೆಗೇ ತೆರಳುವುದಾಗಿ ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಮಗಳು ತಮ್ಮ ಕಣ್ಣೆದುರೇ ತೆರಳುವುದನ್ನು ಕಂಡು ಪೋಷಕರು ಠಾಣೆಯಲ್ಲೇ ಕಣ್ಣೀರಿಟ್ಟಿದ್ದಾರೆ.
ಕುಮಟಾದ ಮದ್ರಸಾದಲ್ಲಿ ಕೆಲಸ ಮಾಡಿದ್ದ ಧರ್ಮಗುರು
ಮಾಹಿತಿಯ ಪ್ರಕಾರ, ಸುಮಾರು 40 ವರ್ಷದ ಅಶ್ರಫ್ ಸ ಅದಿ ಈಗಾಗಲೇ ವಿವಾಹಿತರಾಗಿದ್ದು, ಅವರಿಗೆ ಮಕ್ಕಳಿದ್ದಾರೆ ಎನ್ನಲಾಗಿದೆ. ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮದ್ರಸಾವೊಂದರಲ್ಲಿ ಹಲವು ವರ್ಷಗಳ ಕಾಲ ಧರ್ಮಗುರುವಾಗಿ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.
